ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮನವಿ ಸಲ್ಲಿಸಿದರೂ ಕ್ರಮ ಇಲ್ಲ
ಈ ಬಗ್ಗೆ ಕೆಲವು ದಿನದ ಹಿಂದೆ ಈ ಬಗ್ಗೆ ನಗರ ಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಚೇಂಬರ್‌ಗೆ ಸಕ್ಕೀಂಗ್ ಮಿಷನ್ ಹಾಕಿ ನೀರು ಹರಿಯಿತೆಂದು ಕೈ ತೊಳೆದುಕೊಂಡರು. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದರ ದುರ್ವಾಸನೆ ತಾಳಲು ಆಗದು ಎಂದು ಸ್ಥಳೀಯ ನಿವಾಸಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳು ಆರೋಪಿಸಿದ್ದಾರೆ.ಪ್ರಸ್ತುತ ಮುಂಗಾರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ವೇಳೆ ಚರಂಡಿಗಳ ಬದಲಿಗೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ದೊಡ್ಡ ದೊಡ್ಡ ಚರಂಡಿಗಳು ನಿಂತುಕೊಂಡಿರುವ ಕೊಳಚೆ ನೀರಿನಿಂದ ತುಂಬಿವೆ.
ಜಿಲ್ಲಾ ಕೇಂದ್ರವು 31 ವಾರ್ಡುಗಳನ್ನು ಹೊಂದಿದೆ. ಇಲ್ಲಿನ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಅವಾಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅಧಿಕಾರಿಗಳು ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಚರಂಡಿಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸಿಲ್ಲ. ಎರಡೂರು ತುಂಡಾದ ಚೈನ್ ಮಾದರಿಯಲ್ಲಿ ಇದೆ. ಹೀಗಿರುವಾಗ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲಿಯೇ ನಿಂತು ಬ್ಲಾಕ್ ಆಗಿ ರಸ್ತೆ ಮೇಲೆ ಹರಿಯುತ್ತಿದೆ.
ಇದಕ್ಕೆ ಅವೈಜ್ಞಾನಿಕ ಒಳಚರಂಡಿ ನಿರ್ಮಾಣ ಮತ್ತು ಕಳಪೆ ಕಾಮಗಾರಿ, ಪೈಪು ಒಡೆದಿರುವುದು ಸೇರಿ ನಾನಾ ಕಾರಣಗಳಿವೆ. ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇದೀಗ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಕಾಯಿಲೆ ವಾಸಿ ಮಾಡಿ ಕೋಳ್ಳಲು ಆಸ್ಪತ್ರೆಗೆ ಬರುತ್ತೇವೆ. ಆದರೆ ಆಸ್ಪತ್ರೆಗೆ ಬರುವ ದಾರಿಯಲ್ಲಿ ಯುಜಿಡಿಯ ಕೊಳಚೆ ನೀರಿನಲ್ಲಿ ಬಂದು ಕಾಯಿಲೆ ವಾಸಿ ಮಾಡಿಕೊಂಡು ಮತ್ತೆ ಮನೆಗೆ ಹೋಗುವಾಗ ಅದೇ ಯುಜಿಡಿಯ ಕೊಳಚೆ ನೀರಿನಲ್ಲಿ ವಾಪಸ್ ಹೋಗುವಾಗ ಮತ್ತೆ ಕಾಯಿಲೆಗಳನ್ನು ಹೊತ್ತು ಮನೆ ಸೇರದೆ ಮತ್ತೆ ಆಸ್ಪತ್ರೆಗೆ ಬರುವಂತಾಗಿದೆ ಎಂದು ಆಸ್ಪತ್ರೆಗೆ ಬಂದಿರುವ ರೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.