ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ

KannadaprabhaNewsNetwork |  
Published : Apr 16, 2025, 12:45 AM IST
 ಎನ್.ಆರ್.ಪುರುಷೋತ್ತಮ | Kannada Prabha

ಸಾರಾಂಶ

ಚಾಮರಾಜನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹೊಂಡರಬಾಳು ದಿ.ಲಿಂಗರಾಜೇಅರಸು ಅವರಿಂದ ವಿರಚಿತವಾದ ದಕ್ಷಯಜ್ಞ ಎಂಬ ಸುಂದರ ಪೌರಾಣಿಕ ನಾಟಕವನ್ನು ರಂಗಕಲಾವಿದ ಎನ್.ಆರ್.ಪುರುಷೋತ್ತಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಾಟಕಗಳು ಜೀವನದ ಪ್ರತಿಬಿಂಬವಾಗಿದ್ದು, ಅದರಿಂದ ಸಮಾಜ ಪರಿವರ್ತನೆ ಸಾಧ್ಯ ಎಂದು ರಂಗಭೂಮಿ ಕಲಾವಿದ ಎನ್.ಆರ್.ಪುರುಷೋತ್ತಮ ಹೇಳಿದರು. ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ಶ್ರೀ ಮಹದೇಶ್ವರ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೊಂಡರಬಾಳು ದಿ.ಲಿಂಗರಾಜೇಅರಸು ಅವರಿಂದ ವಿರಚಿತವಾದ ದಕ್ಷಯಜ್ಞ ಎಂಬ ಸುಂದರ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು. ಚಾಮರಾಜನಗರ ಜಿಲ್ಲೆಯು ಜಾನಪದ ಕಲಾವಿದರ ತವರೂರು, ಜಿಲ್ಲೆಯು ಮೇರುನಟ ಡಾ.ರಾಜ್ ಕುಮಾರ್ ಅವರಂತಹ ಕಲಾವಿದರನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಇಂತಹ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನ ಆಗಬೇಕು. ಕಲಾವಿದನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಗೃಹರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಎಸ್.ಜಿ.ಮಹಾಲಿಂಗಸ್ವಾಮಿ ಮಾತನಾಡಿ, ಗ್ರಾಮೀಣ ಬದುಕಿನಲ್ಲಿ ರಂಗಭೂಮಿ ಕಲಾವಿದರು ಅತಿ ಹೆಚ್ಚಿನ ರಂಗಸೇವೆ ಮಾಡುತ್ತಿದ್ದಾರೆ. ಅವರಿಗೆ ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ನೋಟರಿ ನಾಗಣ್ಣ, ಕಲಾವಿದ ಮರುಷೋತ್ತಮ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಸ್ವಾಮಿ, ಗ್ರಾಪಂ ಸದಸ್ಯ ಮಂಜು, ಶ್ರೀನಿಧಿಕುದರ್, ಗುತ್ತಿಗೆದಾರರಾದ ಸುಬ್ಬೇಗೌಡ, ದಕ್ಷ ಮಹೇಶ್, ಅರುಣ್ ಕುಮಾರ್, ಆರ್.ನಾಗರಾಜು, ಕೆ.ಎಂ.ಬಸವರಾಜು, ತೊರಹಳ್ಳಿ ಶಿವಕುಮಾರ ಡ್ರಾಮಾ ಮಾಸ್ಟರ್ ಮಂಗಲ ಆರ್.ಶಿವಣ್ಣ, ಜಿ.ರಾಜಪ್ಪ, ಮಲ್ಲಿಕಾರ್ಜುನಸ್ವಾಮಿ, ನಾಗರಾಜು, ಎಂ.ಎನ್.ಮಹದೇವ, ಅರುಣ್ ಕುಮಾರ್, ಬಿ.ಗಂಗಾಧರ್, ಮಹೇಂದ್ರ ಮಂಗಲ, ಪಿ.ಕುಮಾರ್, ಜಯರಾಜ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''