ಕನ್ನಡಪ್ರಭ ವಾರ್ತೆ ಹಿರೇಕೆರೂರು
ಪಟ್ಟಣದ ರಾಘವೇಂದ್ರ ಕಾಲನಿಯ ಶೇಷಾದ್ರಿ ನಾಡಿಗೇರ ಅವರ ಮೈದಾನದಲ್ಲಿ ದುರ್ಗಾದೇವಿ ಜಾತ್ರೆಯ ನಿಮಿತ್ತ ರಾಣಿಬೆನ್ನೂರಿನ ಮಂಜುನಾಥ ನಾಟ್ಯ ಸಂಘದವರು ಏರ್ಪಡಿಸಿರುವ ನಾಟಕ ಪ್ರದರ್ಶನದ "ಅಪ್ಪ ಚಿಂತ್ಯಾಗ್ ಮಗಳು ಸಂತ್ಯಾಗ್ " ಎಂಬ ನಾಟಕದ ಯಶಸ್ವಿ ೫೦ನೇ ಪ್ರದರ್ಶನದ ಸುವರ್ಣ ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಚಲನಚಿತ್ರಗಳು ಬರುವುದಕ್ಕಿಂತ ಮುಂಚೆ ಬಹು ಬೇಡಿಕೆಯಿದ್ದ ನಾಟಕ ಪ್ರದರ್ಶನಗಳು ಇಂದು ಅಳಿವಿನ ಅಂಚಿನಲ್ಲಿವೆ. ನಾಟಕ ಕಂಪನಿ ಕಟ್ಟಿ ಬೆಳೆಸುವುದು ಹಾಗೂ ಅದನ್ನು ಉಳಿಸಿಕೊಂಡು ಹೋಗುವುದು ಅಷ್ಟೊಂದು ಸುಲಭವಲ್ಲ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಮಾತ್ರ ಬಡ ಕಲಾವಿದರಿಗೆ ಒಂದು ಹೊತ್ತಿನ ಊಟ ದೊರಕುತ್ತದೆ. ಬರುವಂತಹ ದಿನಗಳಲ್ಲಿ ಉತ್ತಮ ನಾಟಕಗಳನ್ನು ಕಂಪನಿಯವರು ಪ್ರದರ್ಶಿಸಬೇಕು. ನಮ್ಮ ತಾಲೂಕು ಕಲಾ ರಸಿಕರ ಬೀಡಾಗಿದ್ದು, ಈ ನಾಟಕ ೫೦ ದಿನ ಪೂರೈಸಿರುವುದೇ ಇದಕ್ಕೆ ಸಾಕಿಯಾಗಿದೆ ಎಂದರು.
ಇದೇ ವೇಳೆ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ನಾಟಕ ಕಂಪನಿಯ ಮಾಲಿಕೆ ನಾಗರತ್ನ ಚಿಕ್ಕಮಠ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.ನಾಟಕ ಕಂಪನಿಯ ಮಾಲಿಕೆ ನಾಗರತ್ನ ಚಿಕ್ಕಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಾಟಕ ಕಂಪನಿಯ ಸಂಚಾಲಕ ಮಲ್ಲಿಕಾರ್ಜುನ ಚಿಕ್ಕಮಠ ನಿರ್ವಹಿಸಿದರು.