ನಗರದ ಶ್ರೀ ಸತ್ಯ ಗಣಪತಿ ಸೇವಾಸಂಘ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಅವರ ಕಲ್ಪನೆಗೆ ಯಾವುದೇ ರೂಪದ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಕನ್ನಡಪ್ರಭವಾರ್ತೆ ತಿಪಟೂರು
ನಗರದ ಶ್ರೀ ಸತ್ಯ ಗಣಪತಿ ಸೇವಾಸಂಘ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಅವರ ಕಲ್ಪನೆಗೆ ಯಾವುದೇ ರೂಪದ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಶಿಶುವಿಹಾರದಿಂದ ೩ನೇ ತರಗತಿಯ ವಿಭಾಗದಲ್ಲಿ ಪ್ರಥಮ ಕೇತನ್ ದೀಕ್ಷಾ ಶಾಲೆ, ದ್ವಿತೀಯ ಮೇಘನಾ ನಳಂದ ಶಾಲೆ, ಶಾಂಭವಿ ವಿದ್ಯಾವಾಹಿನಿ ವೃಂದ ಆಯ್ಕೆಯಾದರು. ೪ರಿಂದ೭ ನೇ ತರಗತಿ ವರೆಗಿನ ಮಕ್ಕಳಲ್ಲಿ ತನುಷ್ ವಿದ್ಯಾವಾಹಿನಿ ವೃಂದ, ಗೌತಮ್ ಪಟೇಲ್ ನಳಂದ ಶಾಲೆ. ಮಿಥುನ್ ಡ್ಯಾಪೊಡೇಲ್ಸ್ ಶಾಲೆ, ಶಿವಪ್ರಸಾದ್ ಸಮಾದಾನಕರ ಬಹುಮಾನ,೮ ರಿಂದ ೧೦ ನೇ ತರಗತಿಯ ವಿಭಾಗದಲ್ಲಿ ಮೋಕ್ಷಗಂಗಾ ಶ್ರೀ ವಿವೇಕಾನಂದ ಶಾಲೆ, ಚೈತನ್ಯ ಜಿಜಿಜೆಸಿ ಶಾಲೆಯ ಬೀಂದುಶ್ರೀಗೆ ಬಹುಮಾನ ನೀಡಲಾಯಿತು. ಹಿರಿಯರ ವಿಭಾಗದಲ್ಲಿ ಎಸ್‌ಎಸ್‌ಪಿಯು ಕಾಲೇಜು ರಿಥಿಕ್ ಆಯ್ಕೆಯಾದರು. ಆಯ್ಕೆಯಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿಪ್ರತ್ರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳಿಗಳಿಗೂ ಪ್ರಶಸ್ತಿಪತ್ರ ನೀಡಲಾಯಿತು.
ಗಣಪತಿ ವಿಗ್ರಹ ಮಾಡುವ ಸ್ಪರ್ಧೆಯ ನಿರ್ವಹಣೆಯನ್ನು ಸೊಗಡು ಜನಪದ ಹೆಜ್ಜೆಯ ಗುರುಸಿರಿಗಂಧ, ಯತೀಶ್ ಪಟೇಲ್ ಮತ್ತು ಸದಸ್ಯರು ವಹಿಸಿದ್ದರು. ತೀರ್ಪುಗಾರರಾಗಿ ಚಿತ್ರಕಲೆ ಶಿಕ್ಷಕ ಭಾರತಿ ಪ್ರಕಾಶ್, ಚಿತ್ರ ಬರಹಗಾರದ ಹೊನ್ನಪ್ಪ ಆಲದಹಳ್ಳಿ, ಮಂಜಣ್ಣ ಅನಗೊಂಡನಹಳ್ಳಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗೋಕುಲ್ ಕೃಷ್ಣ, ರಾಮೇಗೌಡ, ಲೋಕೇಶ್, ರಾಜು, ಯಶು, ಶಿವಜೀತ್, ಮಹಾವೀರ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಪ್ರೋತ್ಸಾಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.