ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕಾರವಾರ
ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ -2025 ಡಿ.5ರಂದು ತಾಲೂಕಿನ ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿ ನಡೆಯಲಿದೆ.ಬೆಳಗ್ಗೆ 9.30ರಿಂದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಅಸ್ನೋಟಿ ಗ್ರಾಪಂ ಅಧ್ಯಕ್ಷರೂ, ಶಿವಾಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳೂ ಆಗಿರುವ ಸಂಜಯ ಜಿ.ಸಾಳುಂಕೆ, ಪತ್ರಿಕಾಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ ಪಾಲ್ಗೊಳ್ಳಲಿದ್ದಾರೆ.ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ಹಾಗೂ ಶಿಕ್ಷಕ ವೃಂದದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದ ವನ್ಯಜೀವಿ ಹಾಗೂ ವನ್ಯಪ್ರಾಣಿಗಳ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಅಸ್ನೋಟಿ ಶಿವಾಜಿ ಮಂದಿರದಲ್ಲಿ ಹಿಂದುಳಿದ ಬುಡಕಟ್ಟು ಸಮಾಜಕ್ಕೆ ಸೇರಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿದ್ದು, ಕಾಡಿನ ನಡುವೆಯೆ ಬದುಕುತ್ತಿರುವ ಕುಟುಂಬದ ವಿದ್ಯಾರ್ಥಿಗಳು ಕಾಡು ಹಾಗೂ ವನ್ಯಜೀವಿಗಳ ಕುರಿತು ತಮ್ಮ ಅನುಭವವನ್ನು ಚಿತ್ರದ ಮೂಲಕ ಅಭಿವ್ಯಕ್ತಿಗೊಳಿಸಲಿದ್ದಾರೆ. ವಿಜೇತ ವಿದ್ಯಾರ್ಥಿಗಳು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ. ಚಿತ್ರಕಲಾ ಸ್ಪರ್ಧೆಗೆ ಅಸ್ನೋಟಿ ಶಿವಾಜಿ ವಿದ್ಯಾಮಂದಿರ ಸಜ್ಜಾಗಿದೆ.ಸೈಕಲ್ ಪ್ರಿಯರ ಅಚ್ಚುಮೆಚ್ಚು ಸೈಕಲ್ ಜೋನ್
ಕಾರವಾರ ನಗರದಲ್ಲಿ ಸೈಕಲ್ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಮತಟ್ಟಾದ ಇಲ್ಲಿನ ರಸ್ತೆಗಳು ಸೈಕಲ್ ಪ್ರಿಯರಿಗೆ ವರದಾನವಾಗಿದ್ದು, ದೇಹ ದಂಡಿಸಲು, ಆರೋಗ್ಯ ಕಾಪಾಡಲು ಜನತೆ ಸೈಕಲ್ ಏರುತ್ತಿದ್ದಾರೆ.ಸೈಕಲ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆ ಎಂದರೆ ಮುರುಗಪ್ಪ ಗ್ರೂಪ್ ಜತೆ ಪಾಲುದಾರಿಕೆ ಹೊಂದಿರುವ ಟಿಐ (ಟ್ಯೂಬ್ ಇನ್ವೆಸ್ಟಮೆಂಟ್ಸ್) ಕಂಪನಿಯ ಪ್ರಮುಖ ಬ್ರ್ಯಾಂಡ್ ಗಳಲ್ಲಿ ಒಂದಾದ ''''''''ಸೈಕಲ್ ಝೋನ್ ನ ಸೈಕಲ್‌ಗಳು'''''''' ಎಂದರೆ ಅತಿಶಯೋಕ್ತಿ ಎನಿಸದು. ಏಕೆಂದರೆ ಸೈಕಲ್ ಝೋನ್ ನಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬಗೆ ಬಗೆಯ ಬೈಸಿಕಲ್ ಗಳು ಸಿಗುತ್ತವೆ.ಕಾರವಾರ ನಗರದ ಹಬ್ಬುವಾಡದ ರಾಘವೇಂದ್ರ ಮಠದ ಸಮೀಪ ಸೈಕಲ್ ಝೋನ್ ಶೋರೂಮ್ ಇದ್ದು, ಇಲ್ಲಿ ಮುಖ್ಯವಾಗಿ ಬಿಎಸ್ಎ, ಹರ್ಕ್ಯುಲಸ್, ಲೇಡಿ ಬರ್ಡ್, ಮಾರ್ಚ್ ಸಿಟಿ, ರೋರೆಡ್ ಮೊಂಟ್ರಾ ಸೇರಿದಂತೆ ಹಲವು ಮಾದರಿಯ ಸೈಕಲ್ ಗಳು ಮಾರಾಟಕ್ಕೆ ಲಭ್ಯವಿದೆ. ಸೈಕಲ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ https://trackandtrail.in/ ವೆಬ್ ಸೈಟ್‌ಗೆ ಭೇಟಿ ನೀಡಬಹುದು.1 ತಿಂಗಳು ಉಚಿತ ಸರ್ವೀಸ್: ಸೈಕಲ್ ಝೋನ್ ಮಳಿಗೆಯಲ್ಲಿ ಗ್ರಾಹಕರು ಯಾವುದೇ ಸೈಕಲ್‌ಗಳನ್ನು ಖರೀದಿಸಿದರೂ ತಿಂಗಳಿಗೆ ಒಂದು ಬಾರಿ ಉಚಿತ ಸರ್ವೀಸ್ ಮಾಡುತ್ತಾರೆ.ಎಲೆಕ್ಟ್ರಿಕ್ ಸೈಕಲ್‌ಗಳು ಲಭ್ಯ:
ಸೈಕಲ್ ಝೋನ್ ಎಲೆಕ್ಟ್ರಿಕ್ ಸೈಕಲ್ ಗಳಲ್ಲಿ ಮೂರು ಮಾದರಿಗಳಿವೆ. ಒಮ್ಮೆ ಚಾರ್ಜ್ ಮಾಡಿದಲ್ಲಿ 25 ಕಿಮೀ, 35 ಕಿಮೀ ಹಾಗೂ 45- 50 ಕಿಮೀ ಓಡುವ ಎಲೆಕ್ಟ್ರಿಕ್ ಸೈಕಲ್‌ಗಳಿವೆ. ಅಲ್ಲದೇ ಇವುಗಳ ಬ್ಯಾಟರಿಗೆ 2 ವರ್ಷ ಗ್ಯಾರಂಟಿ ಇದೆ. 1 ಮೋಟರ್‌ಗೆ ವರ್ಷ ಗ್ಯಾರಂಟಿ ನೀಡಲಾಗುತ್ತದೆ. ಅದೇ ರೀತಿ ಮೊಂಟ್ರಾ ಎಲೆಕ್ಟ್ರಿಕಲ್ ಆಟೋ ಕೂಡ ಇದೆ. ಎಲ್ಲ ರೀತಿಯ ಸೈಕಲ್ ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸೈಕಲ್ ಝೋನ್ ನ ಸಂದೀಪ ತಲಗುಂದ್ ಹೇಳುತ್ತಾರೆ.