ದಾಬಸ್‍ಪೇಟೆ: ರಂಗೋಲಿ ಹಿಂದೂ ಸಂಸ್ಕೃತಿಯ ಪ್ರತೀಕ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು
ದಾಬಸ್‍ಪೇಟೆ: ರಂಗೋಲಿ ಹಿಂದೂ ಸಂಸ್ಕೃತಿಯ ಪ್ರತೀಕ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಕಣ್ಣೆಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನೆಲಮಂಗಲ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಹೆಣ್ಣುಮಕ್ಕಳ ರಂಗೋಲಿ ಬಿಡಿಸುವ ಕ್ರಿಯಾಶೀಲತೆ ಶ್ಲಾಘನೀಯ. ಮಹಿಳೆಯರು ಬಹಳ ಆಸಕ್ತಿಯಿಂದ ಗ್ರಾಮದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾವಿರಾರು ಮಹಿಳೆಯರು, ಹೆಣ್ಣು ಮಕ್ಕಳು, ವೃದ್ಧೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
750 ಮಹಿಳೆಯರಿಗೆ ಭಾಗಿ:
ಕನ್ನಗೌಡನಹಳ್ಳಿ ಗ್ರಾಪಂ ಕೆ.ಜಿ.ಶ್ರೀನಿವಾಸಪುರ, ಕಣ್ಣೆಗೌಡನಹಳ್ಳಿ, ಗಂಗಾಧರನಪಾಳ್ಯ ವೀರನಜೀಪುರ, ಓಬನಾಯಕನಹಳ್ಳಿ, ವೀರರಾಘವನಪಾಳ್ಯ, ಗಂಡರಗೊಳಿಪುರ, ಹುರುಳಿವಳ್ಳಿಯಲ್ಲಿ 750ಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಶಾಸಕರಿಗೆ ಅದ್ದೂರಿ ಸ್ವಾಗತ ಕೋರಿದರು.
ಪ್ರಥಮ ಬಹುಮಾನವನ್ನು ಲಾವಣ್ಯ, ರೇಣುಕಾ, ಶೋಭಾ, ನಾರಾಯಣಮ್ಮ, ಲಕ್ಷ್ಮೀ, ರಕ್ಷಿತ, ಸಿಂಧೂ ಶ್ರೀನಿವಾಸ್, ಆಶಾ ಪಡೆದರೆ, ದ್ವಿತೀಯ ಬಹುಮಾನ ಸುಮಂಗಳ, ಗಂಗಮ್ಮ, ನಾರಾಯಣ ಸ್ವಾಮಿ, ಮಂಜುಳ, ಅನಿತಾ, ಲಾವಣ್ಯ, ಸುಜಾತ, ಸೌಮ್ಮ ಹಾಗೂ ತೃತೀಯ ಬಹುಮಾನ ವನಜ, ಮಂಗಳ, ಉಮಾಲಕ್ಷ್ಮೀ.ವಿ, ಲಿಖಿತಾ.ಎಂ, ರಮ್ಮ, ಮಂಜುಳಾ, ಮಮತಾ, ಯಶೋಧ ಪಡೆದರು. ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಈ ವೇಳೆ ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತ ರಾಜು, ಕಣ್ಣೆಗೌಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ, ಮಾರೇಗೌಡ, ನಾರಾಯಣಸ್ವಾಮಿ, ಮಂಜುನಾಥಗೌಡ, ಶೇಖರ್, ಆನಂದ್, ಚಿಕ್ಕಹನುಮೇಗೌಡ, ಶಿವಣ್ಣ, ಮಂಜುನಾಥ, ಮುನಿರಾಜು, ನರಸಿಂಹಮೂರ್ತಿ, ಮುನಿರಾಮು ಇತರರಿದ್ದರು.
ಪೋಟೋ 6 :
ಕಣೇಗೌಡನಹಳ್ಳಿಯಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಮಹಿಳೆಯರಿಗೆ ಶಾಸಕ ಶ್ರೀನಿವಾಸ್ ಬಹುಮಾನ ವಿತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.