ಸರಸ್ವತಿಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಅರ್ಧ ಗ್ರಾಮಕ್ಕೆ ಎರಡು ತಿಂಗಳಿಂದ ನೀರಿಲ್ಲ!

KannadaprabhaNewsNetwork |  
Published : Oct 16, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಕಡೂರು ಹಾಗೂ ಚಿಕ್ಕಮಗಳೂರಿಗೆ ಸಂಪರ್ಕ‌ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಡೂರು ತಾಲೂಕು ವ್ಯಾಪ್ತಿಯ ಸರಸ್ವತಿಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸುಮಾರು 700ರಿಂದ 800 ಮನೆಗಳಿರುವ ಗ್ರಾಮದಲ್ಲಿ ಅರ್ಧ ಭಾಗಕ್ಕೆ ಕಳೆದ ಎರಡು ತಿಂಗಳಿಂದ ನೀರು ಪೂರೈಕೆಯಾಗಿಲ್ಲ.

ಗ್ರಾಮಕ್ಕೆ ಹೋಗುತ್ತಿದಂತೆ ಬೀದಿ ಬೀದಿಗಳಲ್ಲಿ ಖಾಲಿ ಬಿಂದಿಗೆಗಳು ಸ್ವಾಗತ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಡೂರು ಹಾಗೂ ಚಿಕ್ಕಮಗಳೂರಿಗೆ ಸಂಪರ್ಕ‌ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಡೂರು ತಾಲೂಕು ವ್ಯಾಪ್ತಿಯ ಸರಸ್ವತಿಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸುಮಾರು 700ರಿಂದ 800 ಮನೆಗಳಿರುವ ಗ್ರಾಮದಲ್ಲಿ ಅರ್ಧ ಭಾಗಕ್ಕೆ ಕಳೆದ ಎರಡು ತಿಂಗಳಿಂದ ನೀರು ಪೂರೈಕೆಯಾಗಿಲ್ಲ.

ಇನ್ನರ್ಧ ಭಾಗಕ್ಕೆ ವಾರಕ್ಕೊಂದು ಅಥವಾ ಎರಡು ದಿನ, ಅದೂ ಕೇವಲ ಅರ್ಧದಿಂದ ಮುಕ್ಕಾಲು ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ಇದರಿಂದ ಗ್ರಾಮಸ್ಥರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮಕ್ಕೆ ಹೋಗುತ್ತಿದಂತೆ ಬೀದಿ ಬೀದಿಗಳಲ್ಲಿ ಖಾಲಿ ಬಿಂದಿಗೆಗಳು ಸ್ವಾಗತ ಕೋರುತ್ತವೆ. ಇನ್ನೂ ನೀರಿನ ಟ್ಯಾಂಕ್‌ಗಳ ಮುಂದೆ ಕೊಡ ಹಿಡಿದು ಕಾಯುವ ಜನರು ಕಾಣಸಿಗುತ್ತಾರೆ. ಪ್ರತಿ ಮನೆ ಮುಂದೆ ಸಾಲಾಗಿ ನಿಂತಿರುವ ನೀರಿನ ಡ್ರಮ್‌ಗಳು ನೀರಿನ ಸಮಸ್ಯೆಯ ತೀವ್ರತೆ ಸಾರುತ್ತಿವೆ.

ಕೂಲಿ ಬಿಟ್ಟು ನೀರಿಗೆ ಕಾಯುವ ಸ್ಥಿತಿ: ವಾರಕ್ಕೊಮ್ಮೆ ಅಥವಾ ಎರಡು ಬಾರಿ ನೀರು ಬಿಡುವ ದಿನ ಮನೆ ಕೆಲಸ ಹಾಗೂ ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾಯ ಬೇಕಾಗಿದೆ. ಇದರಿಂದ ದಿನದ ದುಡಿಮೆ ತಪ್ಪಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಬೇಸಿಗೆಯ ಆತಂಕ:

ಮಳೆಗಾಲ ಮುಗಿಯುವ ಮೊದಲೇ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಸಂಗತಿ. ಈಗಲೇ ಈ ಪರಿಸ್ಥಿತಿ ಆದರೆ,‌ ಡಿಸೆಂಬರ್‌‌ನಿಂದ ಮೇ‌ ತಿಂಗಳ ವರೆಗೆ ಬೇಸಿಗೆ ಅವಧಿಯಲ್ಲಿ‌ ಹೇಗೆ ಬಂದ ಆತಂಕ ಗ್ರಾಮದ ಜನರಲ್ಲಿ ವ್ಯಕ್ತವಾಗಿದೆ.--ಬಾಕ್ಸ್‌ --ಟ್ಯಾಂಕರ್‌ಗೆ ಬರೋಬ್ಬರಿ ₹1000 ಬಾಡಿಗೆಸಮರ್ಪಕವಾಗಿ ನೀರು ಪೂರೈಸದ ಕಾರಣ ಅನಿವಾರ್ಯವಾಗಿ ಟ್ಯಾಂಕರ್‌ಗಳಿಂದ ನೀರು ಖರೀದಿಸಬೇಕಿದೆ. ಕುಡಿಯುವ ನೀರಿನ‌ ಸಮಸ್ಯೆಯನ್ನು ಬಂಡವಾಳ‌ ಮಾಡಿಕೊಂಡಿರುವ ಟ್ಯಾಂಕರ್ ನೀರು ಪೂರೈಕೆ ಮಾಫಿಯಾ ಒಂದು ಟ್ಯಾಂಕರ್‌ಗೆ ಬರೋಬ್ಬರಿ ₹1,000 ನಿಗದಿ ಪಡಿಸಲಾಗಿದೆ. ಉಳ್ಳುವರು ಹಣ‌ಕೊಟ್ಟು ಟ್ಯಾಂಕರ್ ನೀರು ಪಡೆಯುತ್ತಿದ್ದಾರೆ. ಆದರೆ, ಮಧ್ಯಮ ವರ್ಗ ಹಾಗೂ ಬಡವರು ನೀರಿಗಾಗಿ ದುಬಾರಿ ಹಣ ಕೊಡುವುದಕ್ಕೆ‌ ಸಾಧ್ಯವಾಗದೇ ಪರದಾಡುವ ಸ್ಥಿತಿ ಇದೆ.

../ಬಾಕ್ಸ್...

ನೀರು ಕೇಳುತ್ತಾರೆಂದು ಅಧಿಕಾರಿಗಳ ಪೋನ್‌ ಸ್ವಿಚ್ ಆಫ್ಗ್ರಾಪಂ ಸದಸ್ಯರ ಅವಧಿ ಮುಗಿದಿರುವುದರಿಂದ ಸಮಸ್ಯೆ ಪರಿಹಾರಕ್ಕಾಗಿ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲ ಗ್ರಾಮಸ್ಥರನ್ನು ಕಾಡುತ್ತಿದೆ. ಪಿಡಿಒಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್‌ಆಫ್ ಅಥವಾ ಸಂಪರ್ಕಕ್ಕೆ ಸಿಗುವುದಿಲ್ಲ. ಕೆಲವೊಮ್ಮೆ ಪಂಚಾಯಿತಿಯಲ್ಲಿಯೇ ಮೊಬೈಲ್ ಬಿಟ್ಟು ಹೋಗುತ್ತಾರೆ ಎಂಬ ಆರೋಪವೂ ಇದೆ. ಹೀಗಾಗಿ ನೀರಿನ ಸಮಸ್ಯೆ ಕುರಿತು ದೂರು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

---ಕೋಟ್‌---

ನೀರು ಬಿಡುವ ಸಿಬ್ಬಂದಿಯೇ ಇಲ್ಲಿ ಮಿನಿಸ್ಟರ್‌

ಕಳೆದ ಎರಡು ತಿಂಗಳಿನಿಂದ ನಲ್ಲಿಗೆ ನೀರು ಬಿಟ್ಟಿಲ್ಲ. ಏಕೆ ಎಂದು ವಿಚಾರಿಸುವುದಕ್ಕೆ ನೀರು ಬಿಡುವ ಸಿಬ್ಬಂದಿ ಮಾತ ನಾಡಿಸುವುಕ್ಕೆ ಪ್ರಯತ್ನಿಸಿದರೆ ಅವರು ನಿಲ್ಲುತ್ತಿಲ್ಲ. ಗ್ರಾಪಂ ಪಿಡಿಒ, ಕಾರ್ಯದರ್ಶಿ ಅವರನ್ನು ಬೇಕಾದರೆ ಮಾತನಾಡಿ ಸಬಹುದು. ಆದರೆ, ನೀರು ಬಿಡುವ ಸಿಬ್ಬಂದಿಯನ್ನು ಮಾತನಾಡಿಸುವುದು ಕಷ್ಟವಾಗಿದೆ. ಅವರು ಈ ಭಾಗ ಮಿನಿಸ್ಟರ್‌ ಆಗಿದ್ದಾರೆ.

- ಜಯಲಕ್ಷ್ಮಮ್ಮ, ಗ್ರಾಮಸ್ಥೆ, ಸರಸ್ವತಿ ಪುರ ---ಕೋಟ್‌---

30 ನಿಮಿಷ ಮಾತ್ರ ನೀರು

700 ರಿಂದ 800 ಮನೆ ಗ್ರಾಮದಲ್ಲಿ ಇವೆ. ಕೇವಲ 30 ನಿಮಿಷ ನೀರು ಬಿಡುತ್ತಾರೆ. ಪ್ರತಿ ಮನೆಗೆ ತಲಾ 2 ಕೊಡದಂತೆ ನಾವೇ ಹೊಂದಾಣಿಕೆ ಮಾಡಿಕೊಂಡು ನೀರು ಬಂದಾಗ ಹಂಚಿಕೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ.

- ಎಸ್‌.ಟಿ.ಗಿರೀಶ್‌, ಗ್ರಾಮಸ್ಥ, ಸರಸ್ವತಿಪುರ(ಫೋಟೋಗಳನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಧ್ವಾಚಾರ್ಯ ಜಯಂತಿ ಆಚರಣೆ ನಿರ್ಧಾರ ಸ್ವಾಗತಾರ್ಹ: ರಾಮಾಚಾರ್‌ ಘಂಟಿ
ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್‌ಗೆ ಮತ ನೀಡಿ: ಟಿ.ಬಿ.ಜಯಚಂದ್ರ