ಕನ್ನಡಪ್ರಭ ವಾರ್ತೆ ಗುರುಮಠಕಲ್
ಗುರುಮಠಕಲ್ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿಯವರ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
ನಮೋಶಿ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ನಮ್ಮ ಭಾಗದ ಬಗ್ಗೆ ಅಪಾರ ಕಾಳಜಿ ಇದೆ. ಅವರಲ್ಲಿ ಸೇವಾ ಮನೋಭಾವ ಇದೆ. ಅವರಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಕಳುಹಿಸಿ. ಅವರ ಜೊತೆ ನಾವು ಕೈಜೋಡಿಸಿ ಕೆಲಸ ಮಾಡುತ್ತೇವೆ. ಶಶೀಲ್ ಜಿ. ನಮೋಶಿ ಅವರು 4 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 5ನೇ ಬಾರಿಗೆ ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ, ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಓಪಿಎಸ್ ಕುರಿತು ಹಲವು ಸಾರಿ ಧ್ವನಿ ಎತ್ತಿದ್ದಾರೆ. ಅವರು ಶಿಕ್ಷಣ, ಶೈಕ್ಷಣಿಕ ಕ್ಷೇತ್ರದ ಕಾಳಜಿ ಇರುವ ವ್ಯಕ್ತಿ ಅಂತವರಿಗೆ ಮನ್ನಣೆ ನೀಡಲು ಶಾಸಕ ಶರಣಗೌಡ ಕಂದಕೂರ ಅವರು ಮನವಿ ಮಾಡಿದರು.ನಮೋಶಿ ಶೈಕ್ಷಣಿಕ ಕಾಳಜಿ ಮೆಚ್ಚುವಂತದ್ದು. ಒತ್ತಡಗಳಿಗೆ ಮಣಿಯದೆ ಅರ್ಹ ವ್ಯಕ್ತಿಯನ್ನು ಆರಿಸಬೇಕಿದೆ. ನಮೋಶಿ ಅವರಿಗೆ ದೇವರು ಎಲ್ಲವೂ ಕೊಟ್ಟಾಗಿದೆ. ಅವರ ಅನುಭವ, ಕಾಳಜಿ, ಮಾರ್ಗದರ್ಶನದ ಮೂಲಕ ನಮ್ಮ ಭಾಗದ ಅಭಿವೃದ್ಧಿಗೆ ಆದ್ಯತೆ ದೊರೆಯಲು ಸಹಕಾರ ನೀಡಬೇಕಿದೆ ಎಂದರು. ನಮ್ಮ ಕಷ್ಟ ಕೇಳಿ ಪರಿಹರಿಸುವ ವ್ಯಕ್ತಿಯನ್ನು ಆರಿಸಬೇಕಿದೆ. ೫ ನೇ ಬಾರಿ ಹೆಚ್ಚಿನ ಮತ ನೀಡಿ, ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಮಾತನಾಡಿ, ಶಿಕ್ಷಕರು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ. ಈ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಿದೆ. ಶಾಲಾ ಕೋಣೆ ದುರಸ್ತಿ ಹಾಗೂ ಹಲವು ಶೈಕ್ಷಣಿಕ ಸೌಲಭ್ಯಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಅದಕ್ಕೆ ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಶಶೀಲ ನಮೋಶಿ ಅವರನ್ನು ಬೆಂಬಲಿಸಬೇಕು'''''''' ಎಂದು ಮನವಿ ಮಾಡಿದರು.
ನಮೋಶಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಮುಲ್ಯ ಕೊಡುಗೆ. ಶಿಕ್ಷಕರ ಸಮಸ್ಯೆಗೆ ಧ್ವನಿ ಎತ್ತುವ ವ್ಯಕ್ತಿ. ಒಂದು ಕೈಗೆ ಇನ್ನೊಂದು ಶಾಸಕರ ಕೈ ಬಲಪಡಿಸಲು ಸಾಧ್ಯವಾಗುತ್ತದೆ. ಮೊದಲನೇ ಪ್ರಾಶಸ್ತ್ರ ಮತ ನಮೋಶಿ ಅವರಿಗೆ ದಯವಿಟ್ಟು ನೀಡಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು. ಶಾಸಕ ಕಂದಕೂರ