ಕನ್ನಡಪ್ರಭ ವಾರ್ತೆ ರಾಯಚೂರು
ಈ ಕುರಿತು ಪ್ರಕಟಣೆ ಹೊರಡಿಸಿರುವ ಮಹಾನಗರ ಪಾಲಿಕೆ, ಎಲ್‌ನಿನೊ ಹವಾಮಾನ ವಿದ್ಯಮಾನದಿಂದ ಉಂಟಾಗಿರುವ ಮಳೆಯ ಕೊರತೆ ಹಾಗೂ ಜಲಮೂಲ ಗಳಲ್ಲಿನ ನೀರಿನ ಲಭ್ಯತೆ ಕುಸಿತದಿಂದಾಗಿ ನಗರಕ್ಕೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಸುವುದು ಸವಾಲಾಗಿದೆ ಎಂದು ತಿಳಿಸಿದೆ.
ಹೀಗಾಗಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು ಅನಿವಾರ್ಯವಾಗಿದ್ದು, ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ನಾಲ್ಕು ದಿನಗಳಿಗೊಮ್ಮೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಿಂದಲೇ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.ನೀರು ಮಿತವಾಗಿ ಬಳಸಲು ಮನವಿ: ರಾಯಚೂರು ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಅತ್ಯಂತ ಮಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಬೇಕು. ನೀರು ಪೂರೈಕೆಯ ದಿನ ದಂದು ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಸಂಗ್ರಹಿಸಿದ ನೀರನ್ನು ಮನೆ ಬಳಕೆಯಲ್ಲಿ ಮಿತವಾಗಿ ಬಳಸಬೇಕು ಎಂದು ಪಾಲಿಕೆ ಮನವಿ ಮಾಡಿದೆ. ವಾಹನ ತೊಳೆಯುವುದು, ಮನೆ ಮುಂದೆ ರಸ್ತೆ ಸ್ವಚ್ಛಗೊಳಿಸುವುದು ಹಾಗೂ ತೋಟಗಳಿಗೆ ನೀರು ಹಾಯಿಸುವಂತಹ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸದಂತೆ ಸೂಚಿಸಲಾಗಿದೆ. ಮನೆಗಳಲ್ಲಿನ ನಲ್ಲಿ ಹಾಗೂ ನೀರಿನ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಕಂಡುಬಂದಲ್ಲಿ ತಕ್ಷಣ ದುರಸ್ತಿಪಡಿಸಬೇಕು. ನೀರಿನ ದುರ್ಬಳಕೆ ತಡೆಗಟ್ಟುವ ಮೂಲಕ ಲಭ್ಯವಿರುವ ನೀರನ್ನು ಎಲ್ಲರಿಗೂ ಸಮರ್ಪಕವಾಗಿ ಹಂಚಿಕೆಯಾಗುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದೆ. ಕುಡಿಯುವ ನೀರಿನ ಕೊರತೆಯ ಸಂದರ್ಭದಲ್ಲಿ ಪಾಲಿಕೆ ಕೈಗೊಂಡಿರುವ ಈ ನಿರ್ಧಾರದಿಂದ ನಗರದ ಜನರು ನೀರಿನ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.