ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ

KannadaprabhaNewsNetwork |  
Published : Jul 10, 2025, 01:46 AM IST
ಪೂಜೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ವಿಜಯಪುರ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ₹ 400 ಕೋಟಿ ಅನುದಾನವನ್ನು ಈ ಯೋಜನೆಗೆ ನೀಡಿದ್ದು, ಇದರಲ್ಲಿ ಸಿಂದಗಿ ನಗರಕ್ಕೆ ಸುಮಾರು ₹ 65 ಕೋಟಿ ಹಣ ಖರ್ಚಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಜಯಪುರ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ₹ 400 ಕೋಟಿ ಅನುದಾನವನ್ನು ಈ ಯೋಜನೆಗೆ ನೀಡಿದ್ದು, ಇದರಲ್ಲಿ ಸಿಂದಗಿ ನಗರಕ್ಕೆ ಸುಮಾರು ₹ 65 ಕೋಟಿ ಹಣ ಖರ್ಚಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವಿತರಣಾ ಯೋಜನೆ (ಹಂತ 1 ಮತ್ತು 2)ಕ್ಕೆ ಶಂಕುಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. 1 ಮತ್ತು 2 ಹಂತದ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 18 ತಿಂಗಳು ಕಾಲಾವಧಿ ಇದೆ. ಆದರೆ ಅದರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಏಕೆಂದರೆ ಈ ಯೋಜನೆ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರ ಯೋಜನೆಯಾಗಿದ್ದು, ದಿನದ 24ಗಂಟೆಗಳ ನೀರು ಸರಬರಾಜಾಗುತ್ತದೆ. ನೀರನ್ನು ಮಿತವಾಗಿ ಬಳಸಿ ಎಂದು ಕಿವಿಮಾತು ಹೇಳಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ನಗರದ ಜನತೆಯ ಬಹುದಿನಗಳ ಬೇಡಿಕೆಗೆ ಇದೀಗ ಸಮಯ ಕೂಡಿ ಬಂದಿದೆ. ದಿ.ಎಂ.ಸಿ.ಮನಗೂಳಿ ಅವರು ಕ್ಷೇತ್ರದಲ್ಲಿ ಶಾಶ್ವತ ಯೋಜನೆಗಳನ್ನು ತರುವ ಕಾರ್ಯ ಮಾಡಿದ್ದಾರೆ. ಇಂತಹ ಕಾರ್ಯಗಳಿಗೆ ಸಹಕರಿಸಿದ ಕೀರ್ತಿ ಸಂಸದ ಜಿಗಜಿಣಗಿ ಅವರಿಗೆ ಸಲ್ಲುತ್ತದೆ. ಅಮೃತ್- 2 ಯೋಜನೆಗೆ ಕೇಂದ್ರ ಸರ್ಕಾರ ಶೇ.50ರಷ್ಟು, ರಾಜ್ಯ ಸರ್ಕಾರ ಶೇ.40, ಸ್ಥಳೀಯ ಸಂಸ್ಥೆ ಶೇ.10ರಷ್ಟು ಅನುದಾನ ಯೋಜನೆ ಹೊಂದಿದೆ. ಮೊದಲನೆ ಹಂತದಲ್ಲಿ ₹ 14.75ಕೋಟಿ, ಎರಡನೆಯ ಹಂತದಲ್ಲಿ ₹ 26.53 ಕೋಟಿ ವೆಚ್ಚದ ಈ 24*7 ಯೋಜನೆ ಹಣ ಬಂದಿದೆ. ಇದು 6 ಹಂತದ ಯೋಜನೆಯಾಗಿದೆ. ಎರಡನೇ ಹಂತದ ₹ 40 ಕೋಟಿ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ವಿಜಯಪುರದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಮಂಜೂರಾಗುವ ಆಶಾ ಭಾವವಿದೆ ಎಂದರು.

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಬೀರಗೊಂಡ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಕಾರ್ಯಪಾಲಕ ಅಭಿಯಂತರ ಗೋವಿಂದ.ಎಸ್. ಗುತ್ತಿಗೆದಾರ ಬಿ.ಎಸ್.ಬಿರಾದಾರ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಬಸವರಾಜ ಯರನಾಳ, ಸಾಯಬಣ್ಣ ಪುರದಾಳ, ಸಿದ್ದು ಮಲ್ಲೇದ, ಚನ್ನಪ್ಪ ಗೋಣಿ, ಸಿಬ್ಬಂದಿ ಸಿದ್ದು ಅಂಗಡಿ, ನಬಿರಸೂಲ್ ಉಸ್ತಾದ, ಸಚಿನ ಮೋರಟಗಿ ಸೇರಿ ಇತರರು ಇದ್ದರು.

-----

ಕೋಟ್‌

ವಿಜಯಪುರ ಜಿಲ್ಲೆಗೆ ಹಿಂದೆಯೂ ಯಾರು ಮಾಡಿಲ್ಲ ಮುಂದೆಯೂ ಯಾರು ಮಾಡಲಿಕ್ಕೆ ಆಗದಷ್ಟು ಕೆಲಸವನ್ನು ನಮ್ಮ ಸರ್ಕಾರದಲ್ಲಿ ಮಾಡಿದ್ದೇನೆ. ವಿಜಯಪುರ ಜಿಲ್ಲೆಗೆ ನ್ಯಾಷನಲ್ ಹೈವೆ ಇರಲಿಲ್ಲ, 6 ನ್ಯಾಷನಲ್ ಹೈವೆ ಬಂದು ಸೇರುವಂತೆ ₹ 1800 ಕೋಟಿ ಅನುದಾನ ತಂದು ಕೆಲಸ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಪೇರ್‌ ಪೇರಿಯಲ್ ರಸ್ತೆ ಮಂಜೂರು ಮಾಡುವಂತೆ ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಸುಮಾರು 747 ಕಿಮೀ ಉದ್ದದ ರಸ್ತೆಗೆ ₹ 750 ಕೋಟಿ ಹಣ ಕೋಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ರಮೇಶ ಜಿಗಜಿಣಗಿ, ಸಂಸದ

PREV