ಕಾಯ್ದೆ-ಕಾನೂನು ತಿಳಿದುಕೊಂಡು ವಾಹನ ಚಲಾಯಿಸಿ

KannadaprabhaNewsNetwork |  
Published : Jan 20, 2025, 01:31 AM IST
ಪೋಟೋ: 198ಎಸ್‌ಎಂಜಿಕೆಪಿ01ಶಿವಮೊಗ್ಗ ನಗರ ಸಂಚಾರ ಪೊಲೀಸ್ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವತಿಯಿಂದ ಭಾನುವಾರ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗ: ಪ್ರತಿಯೊಬ್ಬರೂ ವಾಹನ ಕೊಂಡುಕೊಳ್ಳುವಾಗ ಅದರ ಕಾಯ್ದೆ ಕಾನೂನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅದರ ಕಾಯ್ದೆ, ಕಾನೂನು ತಿಳಿದುಕೊಂಡ ಬಳಿಕವಷ್ಟೇ ವಾಹನ ಕೊಂಡು ಚಲಾಯಿಸಿ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.

ಶಿವಮೊಗ್ಗ: ಪ್ರತಿಯೊಬ್ಬರೂ ವಾಹನ ಕೊಂಡುಕೊಳ್ಳುವಾಗ ಅದರ ಕಾಯ್ದೆ ಕಾನೂನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅದರ ಕಾಯ್ದೆ, ಕಾನೂನು ತಿಳಿದುಕೊಂಡ ಬಳಿಕವಷ್ಟೇ ವಾಹನ ಕೊಂಡು ಚಲಾಯಿಸಿ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಅದರಲ್ಲೂ ಯುವಕ-ಯುವತಿಯರು ನಿಯಾಮವಳಿಗಳನ್ನು ಪಾಲನೆ ಮಾಡುವುದರ ಮೂಲಕ ವಾಹನ ಚಾಲನೆಗೆ ಮುಂದಾಗಬೇಕು. ಪರವಾನಿಗಿ ಇದ್ದರಷ್ಟೇ ವಾಹನ ಚಲಾಯಿಸಬೇಕು. ರಸ್ತೆ ನಿಯಾಮಾವಳಿ ಮತ್ತು ಪರವಾನಿಗೆ ಹೊಂದ ಬಳಿಕವಷ್ಟೇ ವಾಹನ ಚಲಾಯಿಸಬೇಕೆಂದು ಕಿವಿ ಮಾತು ಹೇಳಿದರು.ಇನ್ನು18 ವರ್ಷ ವಯಸ್ಸಿನೊಳಗೆ ಇರುವವರು ಯಾರೂ ಕೂಡ ವಾಹನ ಚಲಾಯಿಸಬಾರದು. ಪರವಾನಿಗೆ ಇದ್ದವರು ವಾಹನ ಚಲಾಯಿಸಬೇಕಾದಲ್ಲಿ ಎಲ್ಲಾ ದಾಖಲೆಗಳು ಹೊಂದಿರಬೇಕು. ನಮ್ಮ ದಾರಿಯಲ್ಲಿ ನಾವು ಸರಾಗವಾಗಿ ಸಾಗಿದರೆ, ರಸ್ತೆ ಸುರಕ್ಷತೆ ಕಾಪಾಡಿದಂತಾಗುತ್ತದೆ. ಎಲ್ಲರೂ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು. ಮಕ್ಕಳು ಕೂಡ ಹೆಲ್ಮೆಟ್ ಧರಿಸಿಯೇ ವಾಹನದಲ್ಲಿ ಸಾಗಬೇಕು. ಇತರರಿಗೂ ವಾಹನ ಚಾಲನೆಯ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್, ಇದರಲ್ಲಿ ಹೊಸತನವಿದೆ. ಜೀವನದಲ್ಲಿ ಹೊಸತನ ಕಲಿಯಬೇಕು ಎಂದ ಅವರು, ನಾನು ಸ್ಕೌಟ್ಸ್ ಸೆಲ್ಯೂಟ್ ಬಗ್ಗೆ ಇಂದು ತಿಳಿದುಕೊಂಡಿದ್ದೆನೆ. ಬಹಳಷ್ಟು ಧೈರ್ಯ ಶಾಲಿಗಳಾಗಲು ಈ ರೀತಿಯ ಕೈಕುಲುಕುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಸೇವೆ ಸಲ್ಲಿಸುತ್ತಾರೆ. ಪ್ರತಿದಿನ ಕಲಿಕೆ ಎಂಬುದು ಇರುತ್ತದೆ. ಇಲ್ಲಿ ಸೆಲ್ಯೂಟ್ ಬಗ್ಗೆ ಕಲಿಕೆ ಉತ್ತಮ ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಇದೇ ವೇಳೆ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಮತ್ತು ಬುಲ್ ಬುಲ್ಸ್ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್, ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ರೋವರ್ ಜಿಲ್ಲಾ ಆಯುಕ್ತ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ ಕುಮಾರ್, ಚಂದ್ರಶೇಖರ್, ಚೂಡಾಮಣಿ ಪವಾರ್, ಡಿವೈಎಸ್‌ಪಿ ಸಂಜೀವ್ ಕುಮಾರ್, ಟ್ರಾಫಿಕ್ ಇನ್ಸ್‌ಪೆಕ್ಟರ್ ಸಂತೋಷ್, ರಾಜೇಶ್ ಅವಲಕ್ಕಿ, ಶಿವಶಂಕರ್, ಮಲ್ಲಿಕಾರ್ಜುನ್ ಖಾನೂರ್, ಗೀತಾ ಚಿಕ್ಕಮಠ, ವೈ.ಆರ್.ಕಾರ್ಯದರ್ಶಿ ಚಂದ್ರಶೇಖರ್, ಕಾತ್ಯಾಯಿನಿ, ರಾಮಚಂದ್ರ ಸೇರಿದಂತೆ ಇತರರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!