ದುದ್ದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮೇಳಕ್ಕೆ ಚಾಲನೆ

KannadaprabhaNewsNetwork |  
Published : Sep 30, 2024, 01:30 AM IST
29ಕೆಎಂಎನ್‌ಡಿ-2ಮಂಡ್ಯ ತಾಲೂಕಿನ ದುದ್ದ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್‌ ಮೇಳ ಕಾರ್ಯಕ್ರಮ ನಡೆಸಿದ ಪ್ರಗತಿ ಮತ್ತು ಪ್ರಥಮ್‌ ಸಂಸ್ಥೆಯ ಮಿನುಶ್ರೀ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚಿಕ್ಕ ವಯಸ್ಸಿನಲ್ಲೇ ಕಲಿಕೆಗೆ ಹೆಚ್ಚು ಒತ್ತು ನೀಡುವುದರಿಂದ ಮುಂದಿನ ಓದಿಗೆ ಸಹಕಾರಿಯಾಗುತ್ತದೆ ಗುಂಪು ಚಟುವಟಿಕೆಯಿಂದ ಮಕ್ಕಳ ಓದಿಗೆ ಪೂರಕವಾಗಿದೆ ಹಿಂದೆ ಉಳಿದ ಮಕ್ಕಳನ್ನು ಸಹ ಓದಿನ ಕಡೆ ತರುವುದೇ ನಮ್ಮ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ವತಿಯಿಂದ ಇಂಗ್ಲಿಷ್ ಮೇಳ ಕಾರ್ಯಕ್ರಮವನ್ನು ದುದ್ದ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು.

ಇಂಗ್ಲಿಷ್ ಮೇಳಕ್ಕೆ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಸವರಾಜು ಚಾಲನೆ ನೀಡಿ, ಮಾತೃಭಾಷೆ ಕನ್ನಡವಾದರೂ ಸಮಾಜದಲ್ಲಿ ಉನ್ನತ ಸ್ಥಾನ ಹಾಗೂ ಗುರಿಯನ್ನು ಮುಟ್ಟಬೇಕಾದರೆ ಬೇರೆ ಭಾಷೆಗಳ ಜ್ಞಾನವೂ ಅಗತ್ಯ ಎಂದರು.

40 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡಲು ಓದಲು ಮತ್ತು ಬರೆಯಲು ಅಭ್ಯಾಸ ಮಾಡಿಸಿ ಮಕ್ಕಳ ಕಲಿಕೆಗೆ ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಶೈಕ್ಷಣಿಕ ಚಟುವಟಿಕೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಆಶಿಸಿದರು.

ಮೈಸೂರು ಪ್ರಗತಿ ಮತ್ತು ಪ್ರಥಮ್ ಸಂಸ್ಥೆಯ ಶಿಕ್ಷಕಿ ಮಿನುಶ್ರೀ ಮಾತನಾಡಿ , ಚಿಕ್ಕ ವಯಸ್ಸಿನಲ್ಲೇ ಕಲಿಕೆಗೆ ಹೆಚ್ಚು ಒತ್ತು ನೀಡುವುದರಿಂದ ಮುಂದಿನ ಓದಿಗೆ ಸಹಕಾರಿಯಾಗುತ್ತದೆ ಗುಂಪು ಚಟುವಟಿಕೆಯಿಂದ ಮಕ್ಕಳ ಓದಿಗೆ ಪೂರಕವಾಗಿದೆ ಹಿಂದೆ ಉಳಿದ ಮಕ್ಕಳನ್ನು ಸಹ ಓದಿನ ಕಡೆ ತರುವುದೇ ನಮ್ಮ ಉದ್ದೇಶವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮೇಳದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ರತ್ನಮ್ಮ, ಎಸ್.ಟಿ.ಎಂ.ಸಿ.ಅಧ್ಯಕ್ಷ ರಮೇಶ್, ಸ್ವಯಂ ಸೇವಕರಾದ ಶಶಿಕಲಾ, ಜಯಲಕ್ಷ್ಮಿ, ಸಮಾಜ ಸೇವಕರಾದ ದೇವರಾಜು, ಶಾಲೆಯ ಶಿಕ್ಷಕರಾದ ಕುಮುದಾ, ಶಾಂತಮಣಿ, ಸುಜಾತ, ಸಾಕಮ್ಮ, ನಾಗಮಣಿ, ಸರಸ್ವತಿ ಹಾಗೂ ಪೋಷಕರು, ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ