ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯಕ್ಕೆ ಚಾಲನೆ

KannadaprabhaNewsNetwork |  
Published : Oct 06, 2024, 01:20 AM IST
೩ಬಿಎಸ್ವಿ೦೩- ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನ. ೧೩ ರಂದು ಜರುಗುವ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನ.೧೩ ರಂದು ಜರುಗುವ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇವಣಗಿ ಗ್ರಾಮದಲ್ಲಿ ನ.೧೩ ರಂದು ಜರುಗುವ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಕನ್ನಡ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ನಾಡಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿವೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಭಾಗದಲ್ಲಿ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದ್ದು ಶ್ಲಾಘನೀಯ. ನ.೧೩ ರಂದು ಜರುಗುವ ಈ ಸಮ್ಮೇಳನ ನಡೆಯಲಿದ್ದು, ಎಲ್ಲ ಕನ್ನಡ ಮನಸ್ಸುಗಳು, ಸಾಹಿತಿಗಳು, ಗ್ರಾಮಸ್ಥರು ಸೇರಿ ಅಚ್ಚುಕಟ್ಟಾಗಿ ಐತಿಹಾಸಿಕ ಸಮ್ಮೇಳನವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ನರಲಸಗಿ ಗ್ರಾಪಂ ಸದಸ್ಯ ಕಾಂತು ಹಿರೇಕುರಬರ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಸಿ.ಎಸ್.ಸುಭಾನಪ್ಪನವರ, ಶಿವಯ್ಯ ಹಿರೇಮಠ, ಎಂ.ಎನ್.ಅಂಗಡಗೇರಿ, ಬಸವರಾಜ ಮೇಟಿ, ಶರಣು ದಳವಾಯಿ, ಎಸ್.ಎಲ್.ಓಂಕಾರ, ಸಿದ್ದು ಬಾಗೇವಾಡಿ, ವೈ.ಎನ್.ಮಿಣಜಗಿ, ಶ್ರೀಶೈಲ ಶಿರಗುಪ್ಪಿ, ಬಂದೇನವಾಜ ವಾಲೀಕಾರ, ಬಿ.ಪಿ.ನಾಗಾವಿ, ಸುಭಾಸ ಹಡಪದ, ಕೊಟ್ರೇಶ ಹೆಗ್ಡಾಳ, ಸಿದ್ದಪ್ಪ ಅವಜಿ, ಬಿ.ಬಿ.ಚಿಂಚೋಳ್ಳಿ ಇತರರು ಇದ್ದರು. ಬಿ.ವ್ಹಿ.ಚಕ್ರಮನಿ ಸ್ವಾಗತಿಸಿ,ನಿರೂಪಿಸಿದರು. ಎಚ್.ಬಿ.ಬಾರಿಕಾಯಿ ವಂದಿಸಿದರು.ಸಮ್ಮೇಳನದ ಸರ್ವಾಧ್ಯಕ್ಷತೆಗೆ ಅರ್ಜಿ ಆಹ್ವಾನ: ಸಮ್ಮೇಳನದ ಸರ್ವಾಧ್ಯಕ್ಷರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ತಾಲೂಕಿನ ಎಲ್ಲ ಸಾಹಿತಿಗಳಿಂದ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರು ತಮ್ಮ ಪ್ರಕಟಿತ ಪುಸ್ತಕಗಳ ವಿವರ ಮಾಹಿತಿಯೊಂದಿಗೆ ಲಿಖಿತವಾಗಿ ತಮ್ಮ ಆಧಾರ ಕಾರ್ಡ್ ನಕಲು ಪ್ರತಿಯೊಂದಿಗೆ ಅ.೧೫ ರೊಳಗೆ ಶಿವಾನಂದ ಡೋಣೂರ, ತಾಲೂಕು ಕಸಾಪ ಅಧ್ಯಕ್ಷರು, ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯ, ಇವಣಗಿ ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಮೊ-೯೯೭೨೭೦೭೧೮೫, ೯೯೦೦೭೬೨೧೪೬, ೯೪೮೧೬೯೬೦೫, ೯೭೪೨೬೫೨೦೪೩, ಸಂಪರ್ಕಿಸಲು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ತಿಳಿಸಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''