ಮೈ ಫ್ಯಾಮಿಲಿ ನಾಟಕಕ್ಕೆ ಚಾಲನೆ

KannadaprabhaNewsNetwork |  
Published : Feb 04, 2025, 12:30 AM IST
ಗುಬ್ಬಿಪಟ್ಟಣದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮೈಸೂರು ರಂಗಾಯಣದ ಮೈ ಫ್ಯಾಮಿಲಿ ನಾಟಕವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ. | Kannada Prabha

ಸಾರಾಂಶ

ಗುಬ್ಬಿ: ಮೊಬೈಲ್, ಟಿವಿ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ ತಿಳಿಸಿದರು.

ಗುಬ್ಬಿ: ಮೊಬೈಲ್, ಟಿವಿ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ ತಿಳಿಸಿದರು.

ಪಟ್ಟಣದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮೈಸೂರು ರಂಗಾಯಣದ ಮೈ ಫ್ಯಾಮಿಲಿ ನಾಟಕವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೈ ಫ್ಯಾಮಿಲಿ ನಾಟಕ ಪೋಷಕರು ಹಾಗೂ ಮಕ್ಕಳ ನಡುವೆ ಇರುವ ಅನುನ್ಯ ಸಂಬಂಧಗಳ ಬಗ್ಗೆ ತಿಳಿಸುತ್ತದೆ ಎಂದು ತಿಳಿಸಿದರು.

ರಂಗಾಯಣದ ನಿರ್ದೇಶಕ ತಿಪಟೂರು ಸತೀಶ್ ಮಾತನಾಡಿ, ಇಂದಿನ ಆಧುನಿಕತೆ ಹಾಗೂ ಹಿಂದಿನ ಬದುಕಿನ ಬಗ್ಗೆ ನಾಟಕದಲ್ಲಿ ಬಹಳ ವಿಶೇಷವಾಗಿ ತೋರಿಸಿದ್ದು , ಪ್ರತಿಯೊಬ್ಬ ಪೋಷಕರು ಮಕ್ಕಳು ಇಂಥ ನಾಟಕಗಳನ್ನ ನೋಡಬೇಕು ಎಂದು ತಿಳಿಸಿದರು.

ಗುಬ್ಬಿ ವೀರಣ್ಣ ಟ್ರಸ್ಟ್‌ನ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ಈ ನಾಟಕವು ಹಿಂದುಳಿದ ಸಮುದಾಯದ ವ್ಯಕ್ತಿ ಬೆಳೆದು ದೊಡ್ಡವನಾದರೂ ದೊಡ್ಡ ಹುದ್ದೆಯಲ್ಲಿದ್ದರೂ ತನ್ನ ಸ್ವಗ್ರಾಮಕ್ಕೆ ಬಂದಾಗ ಅವನ ಪರಿಸ್ಥಿತಿ ಹೇಗಿರುತ್ತದೆ. ಇಂದಿನ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಮನಸ್ಸನ್ನು ಹೇಗೆಲ್ಲಾ ಹಾಳುಗೆಡೆದಿದೆ ಎಂಬ ಬಗ್ಗೆ ಬಹಳ ವಿಶೇಷವಾಗಿ ಕಲಾವಿದರು ನಟನೆ ಮಾಡಿದ್ದಾರೆ. ಇಂಥ ನಾಟಕಗಳು ರಾಜ್ಯ ಸರಕಾರವೇ ಮಕ್ಕಳಿಗೆ ತೋರಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ಹರಿಕಥಾ ವಿದ್ವಾಂಸ ಲಕ್ಷ್ಮಣ್ ದಾಸ್, ರಾಜೇಶ್ ಗುಬ್ಬಿ, ಯೋಗನಂದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು