ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೂದನೂರು ಬಳಿ ಹೆಲಿಪ್ಯಾಡ್ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಮಂಡ್ಯ ನಗರದಿಂದ ೮ ಕಿ.ಮೀ ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ ಹದಿಮೂರನೇ ಶತಮಾನದ ಹೊಯ್ಸಳರ ದೊರೆ ಎರಡನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಅನಂತ ಪದ್ಮನಾಭ ದೇವಾಲಯಗಳನ್ನು ಹೊರಗಿನ ಪ್ರವಾಸಿಗರಿಗೆ ಪರಿಚಯಿಸಲು ಬೂದನೂರು ಉತ್ಸವ ಆರಂಭಿಸಲಾಯಿತು.
ಈ ಸ್ಥಳದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಹೆಲಿಟೂರಿಸಂ ಆರಂಭಕ್ಕೆ ನಿರ್ಧರಿಸಲಾಗಿದೆ. ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಏನಾದರೊಂದು ಆಕರ್ಷಣೆ ಇದ್ದಾಗ ಹೆಚ್ಚಿನ ಜನರು ಅಲ್ಲಿಗೆ ಸಹಜವಾಗಿಯೇ ಆಗಮಿಸುತ್ತಾರೆ. ಹೆಲಿಟೂರಿಸಂ ಪ್ರಾರಂಭಿಸುವ ಮೂಲಕ ಜಿಲ್ಲೆಯ ಜನರು ಹೆಲಿಕ್ಯಾಪ್ಟರ್ ಮುಖಾಂತರ ನಗರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಯೋಜನೆ ರೂಪಿಸಿರುವುದಾಗಿ ತಿಳಿಸಿದರು.ಶಾಸಕರ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಕರ್ಷಣೀಯ ಹೆಲಿಕಾಪ್ಪರ್ ಹಾರಾಟಕ್ಕೆ ಅಧಿಕಾರಿಗಳು ಹೊಸಬೂದನೂರು, ಉಮ್ಮಡಹಳ್ಳಿ, ಶ್ರೀನಿವಾಸಪುರ ಗೇಟ್ ಬಳಿ ಸೂಕ್ತ ಜಾಗ ಗುರುತಿಸಲು ಸ್ಥಳ ಪರಿಶೀಲನೆ ನಡೆಸಿದರು.ಹಾಗೇ ಮಂಡ್ಯದಲ್ಲಿ ನಡೆದ ಗಣರಾಜ್ಯೋತ್ಸವದ ವೇಳೆ ಬೂದನೂರು ಉತ್ಸವ ಲೋಗೋವನ್ನು ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.