ಮಳೆಯಿಲ್ಲದೆ ಅಂತರ್ಜಲ ಕುಸಿತ: ಬೆಳ್ಳುಳ್ಳಿ ರೈತರ ಕಂಗಾಲು

KannadaprabhaNewsNetwork |  
Published : Jul 17, 2026, 01:45 AM IST
ಮಳೆ ಇಲ್ಲದೆ ಅಂತರ್ಜಲ ಕುಸಿತ… | Kannada Prabha

ಸಾರಾಂಶ

ತಾಲೂಕಿನಲ್ಲಿ ಮಳೆ ಬೀಳದೆ ಮುಂಗಾರು ಛಾಯೆ ಎದುರಾಗಿರುವ ಬೆನ್ನಲ್ಲೇ ,ತಾಲೂಕಿನ ಬಹುತೇಕ ಕಡೆ ಅಂತರ್ಜಲ ಕುಸಿತಗೊಂಡು ಬೋರ್‌ನಲ್ಲಿ ನೀರು ಕಡಿಮೆಯಾಗುತ್ತಿದೆ. ಬೆಳ್ಳುಳ್ಳಿ ಫಸಲಿಗೆ ನೀರು ಸಾಲದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳ್ಳುಳ್ಳಿಗೆ ಬೆಲೆಯಿರುವಾಗ ಫಸಲು ಕೈತಪ್ಪುವ ಆತಂಕ । ಟ್ಯಾಂಕರ್‌ ತರಿಸಿ ನೀರುಣಿಸುತ್ತಿರುವ ರೈತರು । ಕೊಳವೆಬಾವಿವಳ ಸ್ಥಿತಿ ಚಿಂತಾಜನಕ

ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನಲ್ಲಿ ಮಳೆ ಬೀಳದೆ ಮುಂಗಾರು ಛಾಯೆ ಎದುರಾಗಿರುವ ಬೆನ್ನಲ್ಲೇ ,ತಾಲೂಕಿನ ಬಹುತೇಕ ಕಡೆ ಅಂತರ್ಜಲ ಕುಸಿತಗೊಂಡು ಬೋರ್‌ನಲ್ಲಿ ನೀರು ಕಡಿಮೆಯಾಗುತ್ತಿದೆ. ಬೆಳ್ಳುಳ್ಳಿ ಫಸಲಿಗೆ ನೀರು ಸಾಲದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ತಾಲೂಕಿನ ಕಳ್ಳೀಪುರ, ಕುಣಗಳ್ಳಿ, ದೇವರಹಳ್ಳಿ, ಗೋಪಾಲಪುರ, ಕಲೀಗೌಡನಹಳ್ಳಿ, ಹಂಗಳ, ಹೊನ್ನೇಗೌಡನಹಳ್ಳಿ, ಬೇರಂಬಾಡಿ, ಕನ್ನೇಗಾಲ, ಮದ್ದಯ್ಯನಹುಂಡಿ, ಹೊಂಗಳ್ಳಿ, ಚನ್ನಮಲ್ಲೀಪುರ, ಮದ್ದೂರು ಕಾಲೋನಿ, ಆಲತ್ತೂರು, ದೇಶಿಪುರ, ಬರಗಿ, ಮೂಖಹಳ್ಳಿ, ಮಂಗಲ, ಜಕ್ಕಹಳ್ಳಿ ಸೇರಿದಂತೆ ಪಟ್ಟಣದ ಕೆಲ ಜಮೀನಿನಲ್ಲಿ ಬೆಳ್ಳುಳ್ಳಿ ಫಸಲು ಮಾಡಿದ್ದಾರೆ.ಕಳೆದ ಜೂನ್‌ ಹಾಗೂ ಜುಲೈ ತಿಂಗಳಲ್ಲೂ ಮಳೆ ಬೀಳದ ಕಾರಣ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬೋರ್‌ ವೆಲ್‌ನಲ್ಲಿ ನೀರಿಲ್ಲದ ಕಾರಣ ಲಕ್ಷಾಂತರ ರು. ಖರ್ಚು ಮಾಡಿದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.ಬಿತ್ತನೆ ಬೆಳ್ಳುಳ್ಳಿಗೆ ೨೫ರಿಂದ ೨೩ ಸಾವಿರ ತನಕ ಹಣ ತೆತ್ತು ಬಿತ್ತನೆ ಮಾಡಿದ್ದಾರೆ. ಆದರೆ ಬೆಳ್ಳುಳ್ಳಿ ಬೆಳೆವ ಹಂತದಲ್ಲಿ ಜಮೀನಿನ ಬೋರ್‌ಗಳಲ್ಲಿ ನೀರು ಕಡಿಮೆಯಾಗಿ, ಬೆಳೆಗೆ ಸಮರ್ಪಕವಾಗಿ ನೀರು ಹಾಯಿಸಲು ಆಗದೆ ರೈತರು ಆತಂಕಕ್ಕೀಡಾಗಿದ್ದಾರೆ.ಗಾಯದ ಮೇಲೆ ಬರೆ:ಬೆಳ್ಳುಳ್ಳಿಗೆ ಸದ್ಯಕ್ಕೀಗ ಕ್ವಿಂಟಲ್‌ಗೆ ೪೨ ಸಾವಿರದಷ್ಟಿದೆ. ಮುಂದೆ ಹೆಚ್ಚಾಗುವ ಸಾದ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಹೊಸದಾಗಿ ಬೋರ್‌ವೆಲ್‌ ಕೊರೆಸಿದರೂ ಅಲ್ಲಿಯೂ ನೀರು ಸಿಗದೆ ರೈತರು ಆತಂಕಕ್ಕೀಡಾಗಿದ್ದಾರೆ.

ಮತ್ತೊಂದೆಡೆ ಮಳೆ ನಂಬಿ ಸೂರ್ಯಕಾಂತಿ, ಹತ್ತಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬಿತ್ತಿದ್ದ ಅನ್ನದಾತರು ಕೈ ಸುಟ್ಟುಕೊಂಡಿದ್ದಾರೆ.---೧೬ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ರೈತರೊಬ್ಬರ ಜಮೀನಿನಲ್ಲಿ ಬೆಳ್ಳುಳ್ಳಿ ಫಸಲಿಗೆ ನೀರಿಲ್ಲದೆ ಒಣಗುತ್ತಿದೆ.---ಬೆಳ್ಳುಳ್ಳಿ ಬೆಳೆ ತೋಟಗಾರಿಕೆ ಬೆಳೆಯಾದರೂ ಯಾವುದೇ ಪರಿಹಾರ ಸಿಗುತ್ತಿಲ್ಲ. ಪ್ರಕೃತಿ ವಿಕೋಪದಡಿ ಬೆಳ್ಳುಳ್ಳಿ ಹಾಳಾದರೆ ಕಂದಾಯ ಇಲಾಖೆ ಜೊತೆ ನಾವು ಕೂಡ ಮಳೆ ಹಾನಿ ಬಗ್ಗೆ ವರದಿ ಸಲ್ಲಿಸಬಹುದಷ್ಟೆ.- ಭಾಸ್ಕರ್‌, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ---ಮಳೆ ಇಲ್ಲದೆ ಬರ ಎದುರಾಗಿದೆ. ಬೆಳ್ಳುಳ್ಳಿಗೆ ಉತ್ತಮ ಬೆಲೆ ಇರುವ ಕಾರಣ ಇರುವಷ್ಟು ಫಸಲು ಕಾಪಾಡಲು ನೀರಿಗೆ ಹಣ ಕೊಟ್ಟು ಹಾಗೂ ಟ್ಯಾಂಕರ್‌ ಬಾಡಿಗೆಗೆ ಪಡೆದು ನೀರನ್ನು ಹಾಯುಸುವ ಕೆಲಸ ಮಾಡುತ್ತಿದ್ದೇವೆ.- ದೇವರಹಳ್ಳಿ ಪ್ರಭು, ಬೆಳ್ಳುಳ್ಳಿ ಬೆಳೆಗಾರ, ಪ್ರಗತಿಪರ ರೈತ---ಬೆಳ್ಳುಳ್ಳಿ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳ್ಳುಳ್ಳಿಗೆ ಸದ್ಯಕ್ಕೀಗ ಒಳ್ಳೆ ದರ ಸಿಗುತ್ತಿದೆ. ಆದರೆ ಮಳೆರಾಯನ ಮುನಿಸಿಗೆ ಬೆಳ್ಳುಳ್ಳಿ ಬೆಳೆದ ರೈತರ ಪಾಡು ಹೇಳತೀರದಾಗಿದೆ.- ಕಳ್ಳೀಪುರ ರವಿ ಬೆಳ್ಳುಳ್ಳಿ ಬೆಳೆದ ರೈತ---

ಟ್ಯಾಂಕರ್‌ ಮೊರೆ ಹೋದ ಅನ್ನದಾತರುಗುಂಡ್ಲುಪೇಟೆ: ಕಟಾವಿನ ಹಂತಕ್ಕೆ ಬಂದ ಬೆಳ್ಳುಳ್ಳಿ ಫಸಲು ಉಳಿಸಿಕೊಳ್ಳಲು ದೇವರಹಳ್ಳಿ, ಕುಣಗಳ್ಳಿ, ಹಂಗಳ ಭಾಗದ ಹಲವು ರೈತರು ನೀರಿಗೆ ಹಣ ಹಾಗೂ ಟ್ಯಾಂಕರ್‌ ಬಾಡಿಗೆಗೆ ಪಡೆದು ನೀರು ಹಾಕುತ್ತಿದ್ದಾರೆ.ಹಳ್ಳದ ಸಾಗಿನ ಕೆಲ ಜಮೀನಿನ ಬೋರ್‌ನಲ್ಲಿ ನೀರಿರುವ ರೈತರಿಂದ ಟ್ಯಾಂಕರ್‌ ನೀರಿಗೆ ೩೦೦ ರು. ಬಾಡಿಗೆ ಕೊಟ್ಟು ತಮ್ಮ ಜಮೀನಿನ ಕೃಷಿ ಹೊಂಡಕ್ಕೆ ನೀರನ್ನು ಹಾಕಿಸುತ್ತಿದ್ದಾರೆ.ಏನೇ ಆದರೂ ಬೆಳ್ಳುಳ್ಳಿಗೆ ಸಾಕಷ್ಟು ನೀರು ಹರಿಸದಿದ್ದರೂ, ಕನಿಷ್ಟವಾದರೂ ನೀರು ಕೊಟ್ಟು ಇರುವ ಫಸಲು ಉಳಿಸಿಕೊಳ್ಳಲಿ. ಬೆಳ್ಳುಳ್ಳಿ ಬೆಳೆಗಾರ ಸಾಲದ ಮೇಲೋಂದು ಸಾಲ ಎಂಬಂತೆ ನೀರಿಗೆ ಹಣ ಹಾಗೂ ಬಾಡಿಗೆಗೆ ಟ್ಯಾಂಕರ್‌ ಪಡೆದು ನೀರು ಹಾಕುವ ಪರಿಸ್ಥಿತಿ ಬಂತಲ್ಲ ಮುಂದೇನು ಎಂಬ ಪ್ರಶ್ನೆ ರೈತ ಸಮೂಹ ಎತ್ತಿದೆ.---೧೬ಜಿಪಿಟಿ೨ಗುಂಡ್ಲುಪೇಟೆ ತಾಲೂಕಿನ ಕುಣಗಳ್ಳಿ ಜಮೀನಿನಲ್ಲಿ ಟ್ಯಾಂಕರ್‌ನಿಂದ ಕೃಷಿ ಹೊಂಡಕ್ಕೆ ನೀರು ತುಂಬುವ ದೃಶ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಒಬಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಗೆ ಬೀರಪ್ಪ ಧನ್ಯವಾದ
ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ