- ಸಿ.ಟಿ.ರವಿ- ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳು ನಾಚಿಕೆಗೇಡಿನ ಸಂಗತಿ।
---- ಮಹಿಳೆಯರಿಗೆ ಅನ್ಯಾಯವಾದ ಸಂದರ್ಭದಲ್ಲಿ ಧ್ವನಿಯೆತ್ತದೇ ಮೌನ
- ಸುಳ್ಳು ಹೇಳಿಕೆಗಳನ್ನು ಹೇಳಿ ದಾರಿ ತಪ್ಪಿಸುವ ಕಾರ್ಯ-ರಾಜ್ಯದ ಬರದ ಗಂಭೀರ ಸ್ಥಿತಿಗೆ ಸೂಕ್ತವಾದ ಪರಿಹಾರವಲ್ಲಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಾಲ್ಕು ಬಾರಿ ಶಾಸಕರಾಗಿದ್ದ ಸಿ.ಟಿ.ರವಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಬರ ಪರಿಹಾರ ವಿಷಯವಾಗಿ ನೀಡುತ್ತಿರುವ ಹೇಳಿಕೆಗಳು ನಾಚಿಕೆಗೇಡಿನ ಸಂಗತಿ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದ್ದಾರೆ.ಇವರು ನಾಡಿನ ವಿರುದ್ಧವಾಗಿ ನಾಡ ದ್ರೋಹಿಗಳಂತೆ ವರ್ತಿಸುತ್ತಿರುವ ಸಂಶಯ ಮೂಡುತ್ತಿದೆ. ರಾಜ್ಯ ಎಂದು ಕೇಳದಂತ ಭೀಕರ ಬರ ಪರಿಸ್ಥಿತಿಗೆ ತುತ್ತಾಗಿದ್ದು ಈ ಸಂದರ್ಭದಲ್ಲಿ ಏಳು ತಿಂಗಳಿಂದ ಹಲವಾರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದರೂ ದೊರಕದ ಬರ ಪರಿಹಾರ ಇಂದು ಸುಪ್ರೀಂ ಕೋರ್ಟ್ ನ ಕಟ್ಟೆಚ್ಚರಿಕೆಯ ಆದೇಶ ಹೊರಡಿಸಿದ ನಂತರ ಪರಿಹಾರದ ಹಣ ಕಾಲು ಭಾಗವೂ ಇಲ್ಲದಂತೆ ಬಿಡುಗಡೆ ಮಾಡಿದೆ. ಇದು ಈಗಿನ ರಾಜ್ಯದ ಬರದ ಗಂಭೀರ ಸ್ಥಿತಿಗೆ ಸೂಕ್ತವಾದ ಪರಿಹಾರವಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿ.ಟಿ. ರವಿ ಯವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ರಾಜ್ಯದ ಪ್ರತಿಯೊಬ್ಬ ಜನತೆ, ರೈತರು ಖಂಡಿಸುತ್ತಾರೆ. ರವಿಯವರು ನೀಡಿರುವ ಹೇಳಿಕೆ ಹಿಂತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.ರಾಜ್ಯದಲ್ಲಿ ಕೆಲವು ದಿನಗಳಿಂದ ಸಂಸದರೊಬ್ಬರ ವಿಡಿಯೋ ವಿಚಾರವಾಗಿ ಚರ್ಚೆ ನಡೆಯುತ್ತಿದೆ, ಪ್ರತಿ ಮಾತಿಗೂ ಭಾರತ ಮಾತೆ ಮಕ್ಕಳು ನಾವು ಎಂದು ಸಾರುವ ಸಿ.ಟಿ. ರವಿ ಇಷ್ಟೊಂದು ಮಾತೆಯರಿಗೆ ಮಹಿಳೆಯರಿಗೆ ಅನ್ಯಾಯವಾದ ಸಂದರ್ಭದಲ್ಲಿ ಧ್ವನಿಯೆತ್ತದೇ ಮೌನವಾಗಿರುವುದು ಹಲವು ಪ್ರಶ್ನೆ ಮೂಡಿಸುತ್ತದೆ. ದೇಶದ ಯುವ ಕ್ರೀಡಾಪಟು ಗಳೊಂದಿಗೆ ಬ್ರಿಜ್ ಭೂಷಣ್ ಮಾಡಿದ ಅನ್ಯಾಯ ಹಾಗೂ ಕ್ರೀಡಾಪಟುಗಳ ಹೋರಾಟವನ್ನು ಇಡೀ ದೇಶ ಗಮನಿಸಿದೆ ಎಂದಿದ್ದಾರೆ.
ನರೇಂದ್ರ ಮೋದಿಯವರು ತಾಳಿಯ ವಿಚಾರವಾಗಿ ಮಾತನಾಡಿರುವುದು ಯಾವ ತಾಳಿಯರ ಬಗ್ಗೆ ಎಂದು ತಿಳಿದಿಲ್ಲ, ಇಷ್ಟೆಲ್ಲ ಅನ್ಯಾಯಗಳನ್ನು ಮಾಡುತ್ತಿರುವ ಬಿಜೆಪಿಗರೇ ಉತ್ತರ ನೀಡಬೇಕು. ಭಾರತ ಮಾತೆಯ ಹೆಸರಿನೊಂದಿಗೆ ಗೋಮಾತೆ ಹೆಸರಿನಲ್ಲೂ ರಾಜಕೀಯ ಮಾಡುವ ಬಿಜೆಪಿಯವರು ಅಪೋಲೋ ಎನ್ನುವ ಭಾರತದ ಎರಡನೇ ಅತಿ ದೊಡ್ಡ ಗೋಮಾಂಸ ರಫ್ತು ಮಾಡುವ ಕಂಪನಿಯಿಂದ ಬಿಜೆಪಿಗೆ ಎಲೆಕ್ಷನ್ ಬಾಂಡ್ ಮೂಲಕ 500 ಕೋಟಿ ಸಂದಾಯ ವಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.ಬಿಜೆಪಿಯವರು ಹಲವಾರು ಬಾರಿ ಭಾರತ ಮಾತೆಗೆ ಗೋಮಾತೆಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಸಿ.ಟಿ. ರವಿ ಸುಳ್ಳು ಹೇಳಿಕೆಗಳನ್ನು ಹೇಳಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಲೇ ಬಂದಿದ್ದಾರೆ. ಇನ್ನು ಮುಂದೆ ಗುಬೇಲ್ಸ್ ತಂತ್ರವನ್ನು ಕೈ ಬಿಟ್ಟು ಸತ್ಯ ನುಡಿಯುವಂತರಾಗಿ ಎಂದು ತಿಳಿಸಿದ್ದಾರೆ.ಪೋಟೋ ಫೈಲ್ ನೇಮ್ 28 ಕೆಸಿಕೆಎಂ 1