ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಿದ್ದರೂ ಪರಿಹಾರ ಶೂನ್ಯ । ವಲಸೆ ತಡೆಗೂ ಕ್ರಮ ಕೈಗೊಂಡಿಲ್ಲ
ಕನ್ನಡಪ್ರಭ ವಾರ್ತೆ ಬಂಗಾರಪೇಟೆರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಈಗಾಗಲೇ ಘೋಷಣೆ ಮಾಡಿದೆ, ಆದರೆ ಇದುವರೆಗೂ ಬರಪೀಡಿತ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಯಾವುದೇ ಬರಪರಿಹಾರ ಕಾಮಗಾರಿಗಳನ್ನು ಜಾರಿಗೊಳಿಸಿಲ್ಲ ಹಾಗೂ ಬರ ಪರಿಹಾರದ ಹಣ ಸಹ ಬಿಡುಗಡೆಯಾಗದ ಕಾರಣ ರೈತರು ಯಾವ ಪುರುಷಾರ್ಥಕ್ಕಾಗಿ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ ಎಂದು ಟೀಕಿಸುತ್ತಿದ್ದಾರೆ.ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಎಲ್ಲಾ ಕಡೆ ಬರ ತಾಂಡವಾಡುತಿದೆ, ಅದರಂತೆ ತಾಲೂಕಿನಲ್ಲಿಯೂ ಸಹ ಬರ ಆವರಿಸಿದೆ ಎಂದ ಸರ್ಕಾರ ಬರಪೀಡಿತ ತಾಲೂಕೆಂದು ಘೋಷಣೆ ಮಾಡಲಾಗಿದೆ. ಆದರೆ ಯಾವುದೇ ಬರ ಪರಹಾರ ಕಾಮಗಾರಿಗಳನ್ನು ಕೈಗೊಂಡು ಕೃಷಿ ಹಾಗೂ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ತಡೆಯುವ ಯಾವುದೇ ಕ್ರಮಗಳನ್ನು ಅಧಿಕಾರಿಗಳು ಇದುವರೆಗೂ ಕೈಗೊಂಡಿಲ್ಲ.
ಕೇಂದ್ರ ತಂಡ ಬರಲೇ ಇಲ್ಲಕೇಂದ್ರ ತಂಡ ಸಹ ಎಲ್ಲೆಲ್ಲಿ ಬರವಿದೆಯೋ ಆ ಕಡೆ ಬಂದು ರೈತರ ಬೆಳೆಗಳನ್ನು ವೀಕ್ಷಣೆ ಮಾಡಿಕೊಂಡು ಹೋಗಿದೆ. ಆದರೆ ತಾಲೂಕಿಗೆ ಮಾತ್ರ ಯಾವ ತಂಡ ಬಂದು ರೈತ ಸ್ಥಿತಿ ಗತಿಗಳನ್ನು ಅವಲೋಕಿಸಿಲ್ಲ.
ರಾಜ್ಯ ಸರ್ಕಾರ ಬರ ಪರಿಹಾರವಾಗಿ ಎಕರೆಗೆ ೨ಸಾವಿರ ಘೊಷಣೆ ಮಾಡಿದೆ, ತಾಲೂಕಿನಲ್ಲಿ ೧,೦೦,೧೯೧ ರೈತ ಹಿಡುವಳಿದಾರರಿದ್ದು, ಇದರಲ್ಲಿ ಕೃಷಿ ಇಲಾಖೆ, ರೇಷ್ಮೆ ಇಲಾಖೆ,ತೋಟಗಾರಿಕೆಇಲಾಖೆ ಹಾಗೂ ಕಂದಾಯ ಇಲಾಖೆಯವರು ಒಟ್ಟು ೬೧೫೫೫ ರೈತರು ಮಾತ್ರ ಬರ ಪರಿಹಾರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ೩೮೬೩೮ ರೈತರು ಮಾಹಿತಿ ಕೊರತೆಯಿಂದ ನೋಂದಣಿ ಮಾಡಿಸಿಲ್ಲ.ತತ್ರಾಂಶದಲ್ಲಿ ನೋಂದಣಿ ಕಡ್ಡಾಯ
ಇವರಿಗೆ ಯಾವುದೇ ಬರ ಪರಿಹಾರದ ಹಣ ಬರುವುದಿಲ್ಲ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಫಸಲುಗಳು ಮಳೆಯಿಲ್ಲದೆ ನಷ್ಟವಾಗಿರುವ ಬಗ್ಗೆ ಫ್ರೂಟ್ ತಂತ್ರಾಂಶದಲ್ಲಿ ನೋಂದಣಿ ಮಾಡಿದರೆ ಮಾತ್ರ ಪರಿಹಾರ ಸಿಗುವುದು,ಇದು ಬಹುತೇಕ ರೈತರಿಗೆ ತಿಳಿಯದೆ ಸರ್ಕಾರದ ಯೋಜನೆಗಳಿಂದ ದೂರ ಉಳಿಯುವಂತಾಗಿದೆ.ಕಾಮಸಮುದ್ರ ಹೋಬಳಿಯಲ್ಲಿ ಒಟ್ಟು ೧೮೪೯೭ ರೈತರಿದ್ದು ಈ ಪೈಕಿ ೧೧೬೭೫ ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ, ಬೂದಿಕೋಟೆ ಹೋಬಳಿಯಲ್ಲಿ ೨೩೦೮೯ ರೈತರ ಪೈಕಿ ೧೬೧೨೯ ರೈತರು ನೋಂದಣಿ ಮಾಡಿಸಿದ್ದು, ಕಸಬಾ ಹೋಬಳಿಯಲ್ಲಿ ೪೧೩೦೬ ರೈತರಿದ್ದು ೨೪೭೦೦ ರೈತರು ನೋಂದಣಿ ಮಾಡಿಸಿದ್ದಾರೆ. ಆರ್.ಪೇಟ್ ಹೋಬಳಿಯಲ್ಲಿ ೧೫೩೦೧ ರೈತರ ಪೈಕಿ ೯೦೫೧ ರೈತರು ನೋಂದಣಿ ಮಾಡಿಸಿದ್ದ ಉಳಿದ ೩೮೬೩೮ ರೈತರು ಮಾಡಿಸಿಲ್ಲ.
ಟಾರ್ಗೆಟ್ ಮುಟ್ಟಲು ವಿಫಲಸರ್ಕಾರದ ಟಾರ್ಗೇಟ್ ತಲುಪದ ಕಾರಣ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿ ಯೋಜನೆಯಿಂದ ದೂರ ಉಳಿದಿರುವ ರೈತರನ್ನು ಗುರುತಿಸಿ ಫ್ರೂಟ್ ತಂತ್ರಾಂಶದಲ್ಲಿ ಹೆಸರನ್ನು ನೋಂದಾವಣಿ ಮಾಡಿಸಲು ಗ್ರಾಮ ಸಹಾಯಕರನ್ನು,ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ರೈತರ ಮನೆ ಮನೆಗೂ ತೆರಳಿ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ನೋಂದಾಯಿಸುವ ಕೆಲಸ ಸಹ ಬರದಿಂದ ಸಾಗಿದೆ.