ದೇಶದೆಲ್ಲೆಡೆ ಮಾದಕ ವಸ್ತು ಸೇವನೆ ಎಗ್ಗಿಲ್ಲದೆ ಸಾಗುತ್ತಿದೆ: ಪ್ರೊ.ಎ.ಜೆ.ಶರತ್ ಬಾಬು

KannadaprabhaNewsNetwork |  
Published : Jul 21, 2025, 01:30 AM IST
20ಕೆಎಂಎನ್ ಡಿ24 | Kannada Prabha

ಸಾರಾಂಶ

ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಒಂದು ಸಲ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟ. ಇಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಆಧುನಿಕ ದೇಶದ ಎಲ್ಲೆಡೆಯಲ್ಲೂ ಕಾಡುತ್ತಿರುವ ರಾಷ್ಟ್ರೀಯ ಸಮಸ್ಯೆ ಇದಾಗಿದೆ. ಆದ್ದರಿಂದ ಈ ಚಟವನ್ನು ತಪ್ಪಿಸುವುದು ಹೇಗೆಂದು ಎಲ್ಲಾ ದೇಶದ ವಿಜ್ಞಾನಿಗಳು, ಚಿಂತಕರು, ಸರ್ಕಾರದವರು ಚಿಂತಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಂಡು ಹೆಣ್ಣು, ಬಡವ ಶ್ರೀಮಂತ ಎನ್ನುವ ಭೇದವಿಲ್ಲದೆ ದೇಶದೆಲ್ಲೆಡೆ ಮಾದಕ ವಸ್ತು ಸೇವನೆ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಆದಿಚುಂಚನಗಿರಿ ವಿಶ್ವ ವಿದ್ಯಾನಿಲಯದ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸ್‌ನ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಪ್ರೊ.ಎ.ಜೆ.ಶರತ್ ಬಾಬು ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಬ್ರಹ್ಮದೇವರಹಳ್ಳಿಯ ಶ್ರೀರಾಮಾನಂದನಾಥ ಪ್ರೌಢಶಾಲೆಯಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಆಯೋಜಿಸಿದ್ದ ಕಿರುನಾಟಕ ಪ್ರದರ್ಶನಕ್ಕೂ ಮುನ್ನ ಉಪನ್ಯಾಸ ನೀಡಿ ಮಾತನಾಡಿ, ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದಾಗ ಮಾದಕ ವಸ್ತುಗಳ ಉಪಯೋಗ ಪ್ರಪಂಚದಾದ್ಯಂತ ಕಂಡುಬರುವ ಬಹು ದೊಡ್ಡ ಪಿಡುಗಾಗಿದೆ ಎಂದರು.

ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಒಂದು ಸಲ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟ. ಇಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಆಧುನಿಕ ದೇಶದ ಎಲ್ಲೆಡೆಯಲ್ಲೂ ಕಾಡುತ್ತಿರುವ ರಾಷ್ಟ್ರೀಯ ಸಮಸ್ಯೆ ಇದಾಗಿದೆ. ಆದ್ದರಿಂದ ಈ ಚಟವನ್ನು ತಪ್ಪಿಸುವುದು ಹೇಗೆಂದು ಎಲ್ಲಾ ದೇಶದ ವಿಜ್ಞಾನಿಗಳು, ಚಿಂತಕರು, ಸರ್ಕಾರದವರು ಚಿಂತಿಸುತ್ತಿದ್ದಾರೆ ಎಂದರು.

ಮಾದಕ ವಸ್ತುಗಳ ಸೇವನೆಗೆ ಬಲಿಯಾದವರ ಮನಸ್ಸನ್ನು ಛಿದ್ರಗೊಳಿಸುತ್ತಿವೆ. ಮುಕ್ತಗೊಳಿಸುವುದು ಕೂಡ ಬಹುದೊಡ್ಡ ಸಮಸ್ಯೆಯಾಗಿದೆ. ಮನೋರೋಗ, ಮನೋದೌರ್ಬಲ್ಯ ಉಂಟಾಗುವ ಸಾವು ಸಂಭವಿಸಿದರೂ ಆಶ್ಚರ್ಯವಿಲ್ಲ ಎಂದು ಎಚ್ಚರಿಸಿದರು.

ಮಾದಕ ವಸ್ತುಗಳ ಸೇವನೆಯನ್ನು ತಪ್ಪಿಸಲು ಮೊದಲು ಮನಸ್ಸು ಮುಖ್ಯ. ಮನಸ್ಸಿನಲ್ಲಿ ಬಲವಾದ ಸಂಕಲ್ಪ ಮೂಡಿದರೆ ಮಾದಕ ವಸ್ತು ಸೇವನೆಯಿಂದ ಮುಕ್ತರಾಗಬಹುದು. ಪುನರ್ವಸತಿ ಕೇಂದ್ರ, ಧ್ಯಾನ ಯೋಗ, ವೈದ್ಯರ ಮೇಲ್ವಿಚಾರಣೆಯಿಂದ ಮಾದಕ ವಸ್ತುಗಳ ಸೇವನೆಯಿಂದ ಮುಕ್ತರಾಗಬಹುದು ಎಂದರು.

ನಂತರ ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮ ಹಾಗೂ ಅದರಿಂದ ಹೊರ ಬರುವ ಕುರಿತು ಆದಿಚುಂಚನಗಿರಿ ನ್ಯಾಚುರಲ್ ಸೈನ್ಸ್ ನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಶ್ರೀರಾಮಾನಂದನಾಥ ಪ್ರೌಢಶಾಲೆ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್, ಸುವೇತ ಹಾಗೂ ಸ್ವಯಂಸೇವಕರು ಇದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ