ನಶಾ ಮುಕ್ತ ಭಾರತ: ಮಾದಕ ವ್ಯಸನ ವಿರುದ್ಧ ಜಾಗೃತಿ

KannadaprabhaNewsNetwork |  
Published : Aug 13, 2026, 01:30 AM IST
್ಿ್ಿ್ಿ | Kannada Prabha

ಸಾರಾಂಶ

ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬುಧವಾರ ನಗರದ ವಿವಿಧ ಕಾಲೇಜುಗಳಲ್ಲಿ ನಶಾ ಮುಕ್ತ ಯುವ ಶಕ್ತಿ-ವಿಕಸಿತ ಭಾರತ ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ, ತುಮಕೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬುಧವಾರ ನಗರದ ವಿವಿಧ ಕಾಲೇಜುಗಳಲ್ಲಿ ನಶಾ ಮುಕ್ತ ಯುವ ಶಕ್ತಿ-ವಿಕಸಿತ ಭಾರತ ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶ್ವವಿದ್ಯಾಲಯ ಬಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದೇಶದ ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸುವುದು ರಾಷ್ಟ್ರ ನಿರ್ಮಾಣದ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಶಾ ಮುಕ್ತ ಯುವ-ವಿಕಸಿತ ಭಾರತದ ಸಂಕಲ್ಪ 100 ವಾರಗಳ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ, ದೇಶದೆಲ್ಲೆಡೆಯುವಜನರನ್ನುಮಾದಕ ವ್ಯಸನದ ವಿರುದ್ಧಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ಸಮೀಕ್ಷೆಯ ಪ್ರಕಾರದೇಶದಲ್ಲಿ ಸುಮಾರು ೧೬ ಕೋಟಿ ಜನರು ಮದ್ಯ ಸೇವಿಸುತ್ತಿದ್ದು, 31 ಕೋಟಿ ಜನರು ಗಾಂಜಾ ಉತ್ಪನ್ನಗಳನ್ನು ಹಾಗೂ 2.26 ಕೋಟಿಜನರು ಒಪಿಯಾಯ್ಡ್ ಮಾದಕ ವಸ್ತುಗಳನ್ನು ಬಳಸುತ್ತಿದ್ದಾರೆ.ಸುಮಾರು 5.7 ಕೋಟಿಗೂ ಹೆಚ್ಚು ಜನರು ಮದ್ಯದ ಅವಲಂಬನೆಗೆ ಒಳಗಾಗಿದ್ದು, ಲಕ್ಷಾಂತರ ಯುವಕರು ಚಿಕಿತ್ಸೆಯ ಅಗತ್ಯವಿರುವ ಮಾದಕ ವ್ಯಸನಕ್ಕೆ ತುತ್ತಾಗಿದ್ದಾರೆ ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಕೆ. ವೇದಮೂರ್ತಿ, ಸುರೇಶ್ ಬಳ್ಳೆಕಟ್ಟೆ, ಶಶಿಕಿರಣ್, ಪ್ರತಾಪ್, ರಾಕೆಂದ್, ನವಚೇತನ್, ಸತ್ಯಮಂಗಲ ಜಗದೀಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ದಿಲೀಪ್, ಗಣೇಶ್‌ಪ್ರಸಾದ್,ಹನುಮಂತರಾಜು, ಗಂಗೇಶ್ ಹದ್ದಿನಕಲ್ಲು, ವೆಂಕಟೇಶಾಚಾರ್, ಸುರೇಶ್, ರಾಕೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮನ ಅಮಾವಾಸ್ಯೆ: ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ಸ್ತ್ರೀಯರಿಂದ ದೇಶಕ್ಕೆ ಕೊಡುಗೆ: ಶಿವಯೋಗೀಶ್ವರ ಶ್ರೀ