ಬಂಟ್ವಾಳದಲ್ಲಿ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮ

KannadaprabhaNewsNetwork |  
Published : Nov 28, 2026, 02:45 AM IST
ನಶಾ ಮುಕ್ತ ಸಮಾಜ ನಿರ್ಮಾಣದಲ್ಲಿ ಕಾನೂನಿನ ಪಾತ್ರದ ಜೊತೆಗೆ ಸಮಾಜದ ಪಾತ್ರ ಕೂಡಾ ಮಹತ್ವ. ಎಎಸ್ಪಿ ಅರುಣ್ ಕುಮಾರ್ ಭೂಮ ರೆಡ್ಡಿ.*  *ಬಂಟ್ವಾಳದಲ್ಲಿ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮ | Kannada Prabha

ಸಾರಾಂಶ

ನಶಾ ಮುಕ್ತ ಕರ್ನಾಟಕ ಮತ್ತು ನಶಾ ಮುಕ್ತ ಭಾರತ ನಿರ್ಮಾಣದಲ್ಲಿ ಕಾನೂನಿನ ಪಾತ್ರದ ಜೊತೆಯಲ್ಲಿ ಸಮಾಜದ ಪಾತ್ರವೂ ಕೂಡಾ ತುಂಬಾ ಮಹತ್ವಪೂರ್ಣವಾದುದು ಎಂದು ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ

ಬಂಟ್ವಾಳ: ನಶಾ ಮುಕ್ತ ಕರ್ನಾಟಕ ಮತ್ತು ನಶಾ ಮುಕ್ತ ಭಾರತ ನಿರ್ಮಾಣದಲ್ಲಿ ಕಾನೂನಿನ ಪಾತ್ರದ ಜೊತೆಯಲ್ಲಿ ಸಮಾಜದ ಪಾತ್ರವೂ ಕೂಡಾ ತುಂಬಾ ಮಹತ್ವಪೂರ್ಣವಾದುದು ಎಂದು ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಮತ್ತು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ (ರಿ) ಇವುಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಾದಕ ಪದಾರ್ಥಗಳ ಪೂರೈಕೆ ಮತ್ತು ಸೇವನೆ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ಕೈಗೊಂಡ ಕಾನೂನು ಕ್ರಮಗಳ ಕುರಿತು ಅಂಕಿ ಅಂಶಗಳನ್ನು ಅವರು ಸಭೆಯ ಮುಂದಿಟ್ಟರು.ಜಾಗೃತಿ ಉಪನ್ಯಾಸಗೈದ ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮಾತನಾಡಿ, ಪ್ರತೀ ಜಮಾಅತಿನ ಅಧ್ಯಕ್ಷರು, ಪದಾಧಿಕಾರಿಗಳು

ಮಾದಕ ವ್ವಸನದ ಕುರಿತು ತಮ್ಮ ಜಮಾಅತ್ ಮಟ್ಟದಲ್ಲಿ ನಿರಂತರ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು ಹಾಗೂ ನಶಾ ಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞಾ ವಿಧಿ ಬೋಧಿಸಿದರು.ಸುರಿಬೈಲು ದಾರುಲ್ ಅಶ್ ಅರಿಯಾ ವ್ಯವಸ್ಥಾಪಕ ಮುಹಮ್ಮದ್ ಅಲಿ ಸಖಾಫಿ ದು:ಹಾ ನೆರವೇರಿಸಿ, ಕಾರ್ಯಕ್ರಮ ಯಶಸ್ವಿಗೆ ಶುಭ ಹಾರೈಸಿದರು. ಬಂಟ್ವಾಳ ನಗರ ಪೊಲೀಸ್ ಠಾಣಾಧಿಕಾರಿ ಸಂದೀಪ್ ಶೆಟ್ಟಿ ಮಾತನಾಡಿ, ಮಾದಕ ವ್ಯಸನದ ವಿರುದ್ಧ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಉದ್ಘಾಟಿಸಿದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು . ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಕೋಶಾಧಿಕಾರಿ , ಪಿ.ಎಸ್ ಅಬ್ದುಲ್ ಹಮೀದ್ ಹಾಜಿ ನೆಹರುನಗರ, ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಮುಖರಾದ ಕೆ.ಕೆ.ಸಾಹುಲ್ ಹಮೀದ್ , ಎಂ.ಎಚ್.ಇಕ್ಬಾಲ್ ಮೆಲ್ಕಾರ್, ಎಫ್.ಎಂ.ಬಶೀರ್ ಫರಂಗಿಪೇಟೆ, ರಫೀಕ್ ಹಾಜಿ ಆಲಡ್ಕ, ರಶೀದ್ ವಿಟ್ಲ, ಆಸಿಫ್ ಕುಂಪನಮಜಲು, ರಫೀಕ್ ಹಾಜಿ ಸುರಿಬೈಲು, ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ಪಿ.ಮಹಮ್ಮದ್ ಪಾಣೆಮಂಗಳೂರು, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಇಕ್ಬಾಲ್ ಜೆಟಿಟಿ, ಮಹಮ್ಮದ್ ನಾರಂಗೋಡಿ, ಬಿ.ಎ.ಮಹಮ್ಮದ್ ಬಂಟ್ವಾಳ, ಕೆ.ಎಸ್.ಮಹಮ್ಮದ್ ಕಡೇಶ್ವಾಲ್ಯ, ಶೇಖ್ ರಹ್ಮತುಲ್ಲಾ, ರಫೀಕ್ ಹಾಜಿ ಕಲ್ಲಡ್ಕ, ಉಬೈದ್ ವಿಟ್ಲ ಬಜಾರ್, ಇಬ್ರಾಹಿಂ ನವಾಜ್ ಬಡಕಬೈಲ್, ಉಮರ್ ಫಾರೂಕ್ ಫರಂಗಿಪೇಟೆ, ರಮ್ಲಾನ್ ಮಾರಿಪಳ್ಳ, ಇಬ್ರಾಹಿಂ ಮೊಯ್ದಿನ್ ನಂದಾವರ, ಪಿ.ಎ.ರಹೀಂ ಬಿ.ಸಿ.ರೋಡ್ ಮೊದಲಾದವರು ಭಾಗವಹಿಸಿದ್ದರು.ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ಸ್ವಾಗತಿಸಿ, ಸಂಯುಕ್ತ ಜಮಾಅತ್ ಕಮಿಟಿ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ವಂದಿಸಿದರು. ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮೋಡಿ ಲಿಪಿ ದಾಖಲೆ ಭಾಷಾಂತರ, ಸಂರಕ್ಷಣೆಗೆ ಒಪ್ಪಂದ