ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಆರ್ಥೋಪೆಡಿಕ್ಸ್ ವಿಭಾಗಕ್ಕೆ ದೇಶದಲ್ಲಿ 9ನೇ ಸ್ಥಾನ

KannadaprabhaNewsNetwork |  
Published : Nov 28, 2026, 02:45 AM IST
25ಕೆಎಂಸಿ | Kannada Prabha

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬೋಧನಾ ಆಸ್ಪತ್ರೆಯಾದ ಕಸ್ತೂರ್ಬಾ ಆಸ್ಪತ್ರೆಯು ದಿ ವೀಕ್-ಹನ್ಸಾ ರಿಸರ್ಚ್ ವತಿಯಿಂದ ನಡೆದ ‘ಬೆಸ್ಟ್ ಹಾಸ್ಪಿಟಲ್ಸ್ ಸರ್ವೆ 2026’ರಲ್ಲಿ ಮೂಳೆರೋಗ ಚಿಕಿತ್ಸೆ (ಆರ್ಥೋಪೆಡಿಕ್ಸ್) ವಿಭಾಗದಲ್ಲಿ ಭಾರತದ ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ 9ನೇ ಸ್ಥಾನ ಹಾಗೂ ದಕ್ಷಿಣ ಭಾರತದ ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬೋಧನಾ ಆಸ್ಪತ್ರೆಯಾದ ಕಸ್ತೂರ್ಬಾ ಆಸ್ಪತ್ರೆಯು ದಿ ವೀಕ್-ಹನ್ಸಾ ರಿಸರ್ಚ್ ವತಿಯಿಂದ ನಡೆದ ‘ಬೆಸ್ಟ್ ಹಾಸ್ಪಿಟಲ್ಸ್ ಸರ್ವೆ 2026’ರಲ್ಲಿ ಮೂಳೆರೋಗ ಚಿಕಿತ್ಸೆ (ಆರ್ಥೋಪೆಡಿಕ್ಸ್) ವಿಭಾಗದಲ್ಲಿ ಭಾರತದ ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ 9ನೇ ಸ್ಥಾನ ಹಾಗೂ ದಕ್ಷಿಣ ಭಾರತದ ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.ದೇಶದ 782 ಸಾಮಾನ್ಯ ವೈದ್ಯರು ಹಾಗೂ ದೇಶದ ಪ್ರಮುಖ 19 ನಗರ ಮತ್ತು ದೆಹಲಿಯ 1,458 ತಜ್ಞ ವೈದ್ಯರು ಸೇರಿ, ಒಟ್ಟು 2,240 ವೈದ್ಯರ ಸಮೀಕ್ಷೆಯನ್ನಾಧರಿಸಿ ಈ ಶ್ರೇಯಾಂಕ ನೀಡಲಾಗಿದೆ. ಆಸ್ಪತ್ರೆ ಖ್ಯಾತಿ, ವೈದ್ಯರ ಸಾಮರ್ಥ್ಯ, ಮೂಲಸೌಕರ್ಯ, ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ರೋಗಿಗಳ ಆರೈಕೆಯ ಆಧಾರದ ಮೇಲೆ ಈ ಮೌಲ್ಯಮಾಪನ ಮಾಡಿದ್ದಾರೆ. ಈ ಸಾಧನೆಯ ಬಗ್ಗೆ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ಉತ್ತಮ ರೋಗಿ ಆರೈಕೆ, ಸದೃಢ ಬೋಧನೆ ಮತ್ತು ಅರ್ಥಪೂರ್ಣ ಸಂಶೋಧನೆ ಜೊತೆಜೊತೆಯಾಗಿ ಸಾಗುತ್ತವೆ ಎಂಬ ನಂಬಿಕೆಯ ಮೇಲೆ ಮಾಹೆಯ ಬೋಧನಾ ಆಸ್ಪತ್ರೆಗಳು ರೂಪುಗೊಂಡಿವೆ ಎಂದಿದ್ದಾರೆ.ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಆರು ದಶಕಗಳಿಗೂ ಹೆಚ್ಚು ಕಾಲದಿಂದ ಕಸ್ತೂರ್ಬಾ ಆಸ್ಪತ್ರೆಯು ಕರಾವಳಿ ಕರ್ನಾಟಕ ಹಾಗೂ ಅದರಾಚೆಯ ಜನರಿಗೆ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ ಎಂದಿದ್ದಾರೆ.1967ರಲ್ಲಿ ಸ್ಥಾಪನೆಯಾದ ಈ ಆರ್ಥೋಪೆಡಿಕ್ಸ್ ವಿಭಾಗವು ಇಂದು 5 ವಿಶೇಷ ಘಟಕಗಳು ಹೊಂದಿದೆ. ಜನ್ಮಜಾತ ವ್ಯತ್ಯಾಸದ ಮಗುವಿನಿಂದ ಹಿಡಿದು ಮಂಡಿ ಬದಲಿ ಅಗತ್ಯವಿರುವ ಹಿರಿಯರವರೆಗೆ, ಮೂಳೆ, ಕೀಲು ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೀಲು ಶಸ್ತ್ರಚಿಕಿತ್ಸೆಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ರೋಬೋಟಿಕ್ ನೆರವಿನ ಸೊಂಟದ ಕೀಲು ಮತ್ತು ಮಂಡಿ ಬದಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ.ಭುಜ, ಮೊಣಕೈ ಬದಲಿ ಶಸ್ತ್ರಚಿಕಿತ್ಸೆ, ಬೆನ್ನುಮೂಳೆ ಬಾಗುವಿಕೆಯ ಸ್ಕೋಲಿಯೋಸಿಸ್ ಚಿಕಿತ್ಸೆ, ಬೆನ್ನುಮೂಳೆಯ ಕ್ಷಯ, ಡಿಸ್ಕ್ ಸಮಸ್ಯೆಗಳಿಗೆ ಮಿನಿಮಲಿ ಇನ್ವೇಸಿವ್ ಚಿಕಿತ್ಸೆ, ಕ್ರೀಡಾ ಗಾಯಗಳಿಗೆ ಕೀಹೋಲ್ ಶಸ್ತ್ರಚಿಕಿತ್ಸೆ, ಶ್ರೋಣಿ (ಪೆಲ್ವಿಸ್) ಮತ್ತು ಸೊಂಟದ ಕೀಲಿನ ಸಂಕೀರ್ಣ ಮುರಿತಗಳ ರೋಗಿಗಳ ಚಿಕಿತ್ಸೆ, ಪಾದ, ಪಾದದ ಕೀಲು ಮತ್ತು ಭುಜದ ಸಮಸ್ಯೆಗಳಿಗೆ ಹಾಗೂ ವಿಶೇಷ ಇಂಪ್ಲಾಂಟ್‌ಗಳನ್ನು ಬಳಸಿ ಮೂಳೆ ಗಡ್ಡೆಗಳಿಗೆ ಅಂಗ ಸಂರಕ್ಷಣಾ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಕೃತಕ ಅಂಗಗಳು ಮತ್ತು ಆಧಾರ ಸಾಧನಗಳನ್ನು ಅಳವಡಿಸುವ ಕೇಂದ್ರವೂ ಇಲ್ಲಿದೆ. ರೋಗಿಗಳ ಫಿಸಿಯೋಥೆರಪಿ ಹಾಗೂ ಆಕ್ಯುಪೇಷನಲ್ ಥೆರಪಿಯನ್ನು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮೋಡಿ ಲಿಪಿ ದಾಖಲೆ ಭಾಷಾಂತರ, ಸಂರಕ್ಷಣೆಗೆ ಒಪ್ಪಂದ