ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ನಿಟುವಳ್ಳಿಯ 60 ಅಡಿ ರಸ್ತೆಯ ವಾಸಿಗಳು ಎನ್ನಲಾದ ಪೇಂಟಿಂಗ್ ಕೆಲಸ ಮಾಡುವ ಯುವಕರು ಹಾಗೂ ಕೆಬಿ ಬಡಾವಣೆ ಭಾಗದ ಹದಿಹರೆಯದ ಯುವಕರ ಗುಂಪು ಹಾಡಹಗಲೇ ಬಾರ್‌ನಲ್ಲಿ ಕುಡಿದು, ಬರುವಾಗ ಸಣ್ಣ ಜಗಳ ಮಾಡಿಕೊಂಡಿದೆ. ಅದು ಪರಸ್ಪರ ಎರಡೂ ಗುಂಪಿನ ಮಧ್ಯೆ ಹೊಡೆದಾಟಕ್ಕೆ ಕಾರಣವಾಯಿತು ಎನ್ನಲಾಗಿದೆ.
ಬಾರ್‌ನಲ್ಲಿ ಕುಡಿತದ ನಶೆಯಲ್ಲಿ ಜಗಳ ಮಾಡಿಕೊಂಡ ಗುಂಪುಗಳು ಕೆಬಿ ಬಡಾವಣೆಯ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಯುವಕರ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ನಾಲ್ಕು ಜನ ಹೊಡೆದಾಡುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮೂವರ ಪೈಕಿ ಒಬ್ಬ ಸ್ಕೂಟರ್‌ನಿಂದ ಹಾರಿ ಬಂದು ಏಕಾಎಕಿ ಹಲ್ಲೆ ಮಾಡಿದ್ದಾನೆ.ತನ್ನ ಸ್ನೇಹಿತನಿಗೆ ಹೊಡೆಯುತ್ತಿದ್ದವರಿಗೆ ಮುಷ್ಟಿಯಿಂದ ಗದ್ದ, ಮುಖ, ದವಡೆ, ಮಿದುಳು, ತಲೆ ಭಾಗವನ್ನೂ ನೋಡದೇ ಬಲವಾಗಿ ಗುದ್ದಿದರು.
ಸರದಿಯಲ್ಲಿ ಮೂವರನ್ನೂ ಹೊಡೆದ ಯುವಕ ಅಷ್ಟಕ್ಕೆ ಸುಮ್ಮನಾಗದೇ ಒಬ್ಬನೇ ಇದ್ದಾನೆ ಎಂದು ಮತ್ತೆ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಯುವಕರಿಗೆ ಮುಷ್ಟಿಯಿಂದ ಗುದ್ದಿದ್ದಾನೆ. ಸ್ಥಳದಲ್ಲಿದ್ದ ಪತ್ರಕರ್ತರು, ಬ್ಯಾಂಕ್‌ಗೆ ಬಂದಿದ್ದ ಗ್ರಾಹಕರು, ದಾರಿ ಹೋಕರು, ಆಟೋ ಚಾಲಕರು ಮಧ್ಯ ಪ್ರವೇಶಿಸಿದ್ದರಿಂದ ಏಕಾಏಕಿ ದಾಳಿ ಮಾಡಿದ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.ತಲೆ, ಬಾಯಿ, ಕೆನ್ನೆ, ದವಡೆಯಿಂದ ತೀವ್ರ ರಕ್ತಸ್ರಾವವಾಗಿದ್ದ ಇಬ್ಬರು ಯುವಕರು, ಬ್ಯಾಂಕ್ ಮುಂದೆ ಒಬ್ಬ, ಎದುರಿನ ಮರದ ಬಳಿ ಬಿದ್ದಿದ್ದ ಮತ್ತೊಬ್ಬ ಅಲ್ಲಿಂದ ಬೈಕ್ ಏರಿ ಪರಾರಿಯಾದರು. ಇವರು ಗಾಂಜಾ ಅಥವಾ ಬೇರೆ ಯಾವುದೇ ಮತ್ತಿನ ಪದಾರ್ಥ ಸೇವಿಸಿದ್ದರು ಎಂದು ಶಂಕಿಸಲಾಗಿದೆ.
ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಹಾಡಹಗಲೇ ಯುವ ಜನರು ಬಾರ್‌ಗಳಿಗೆ ಎಡತಾಕುತ್ತಿದ್ದಾರೆ. ಗಾಂಜಾ ಪೂರೈಕೆ ಸಹ ಕದ್ದು ಮುಚ್ಚಿ ಪೂರೈಕೆಯಾಗುತ್ತಲೇ ಇದೆ. ಗಾಂಜಾ ಅಥವಾ ಯಾವುದೋ ಮಾದಕ ವಸ್ತುವಿನ ನಶೆಯಲ್ಲಿ ತೇಲುತ್ತಿದ್ದಂತೆ ಹೊಡೆತ ತಿಂದ ಯುವಕರು, ಹೊಡೆದವನ ಗುಂಪಿನ ಕಡೆಯವರು ಇದ್ದರು. ಸಾರ್ವಜನಿಕರು ಮಧ್ಯಪ್ರವೇಶದಿಂದ ಯುವಕರ ಕಾದಾಟ ನಿಂತಿದೆ.