ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್‌ನ 20ನೇ ವರ್ಷದ ಸಂಭ್ರಮಾಚರಣೆ

KannadaprabhaNewsNetwork |  
Published : Jun 20, 2026, 04:00 AM IST
D Max 2 | Kannada Prabha

ಸಾರಾಂಶ

ಬೆಂಗಳೂರು ನಗರದಲ್ಲಿ ಸ್ವಂತ ಮನೆಯ ಕನಸು ಕಾಣುವವರಿಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿ.ಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ 20ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರದಲ್ಲಿ ಸ್ವಂತ ಮನೆಯ ಕನಸು ಕಾಣುವವರಿಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿ.ಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ 20ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು.

ಕಾರ್ಯಕ್ರಮದಲ್ಲಿ ಫ್ಲ್ಯಾಟ್‌ಪತ್ನಿ ಲಕ್ಕಿ ಡ್ರಾ ಯೋಜನೆಯಲ್ಲಿ 2 ಬಿಎಚ್‌ಕೆ ಒಂದು ಮನೆ, ಕಾರು, 20 ಬೈಕ್‌ಗಳು ಹಾಗೂ ಇನ್ನಿತರ ಬಹುಮಾನಗಳನ್ನು ವಿತರಿಸಿ ಮಾತನಾಡಿದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಎಸ್‌.ಪಿ. ದಯಾನಂದ್, ನಮ್ಮ ಸಂಸ್ಥೆ ಸ್ಥಾಪನೆಯಾದ 2 ದಶಕಗಳಲ್ಲಿ 50,000ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದೆ. ನಗರದ ನಾಲ್ಕು ದಿಕ್ಕಿನಲ್ಲಿ ಇನ್ನು 25,000 ಮನೆಗಳನ್ನು ನಿರ್ಮಿಸಲಾಗುತ್ತಿದೆ. 2030ರ ವೇಳೆಗೆ ಒಟ್ಟು 1 ಲಕ್ಷ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವ ಗುರಿ ಇದೆ ಎಂದರು.

20ನೇ ವರ್ಷದ ಅಂಗವಾಗಿ ‘ಫ್ಲ್ಯಾಟ್ ಪತ್ನಿ’ ವಿಶೇಷ ಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ವಿಜೇತರಿಗೆ ಪಾರದರ್ಶಕವಾಗಿ ಅವರ ಕಣ್ಣೇದುರಲ್ಲೇ ಲಕ್ಕಿ ಡ್ರಾ ಎತ್ತುವ ಮೂಲಕ ಬಹುಮಾನಗಳನ್ನು ವಿತರಿಸಲಾಗಿದೆ. ಈ ಬಾರಿ ಲಕ್ಕಿ ಡ್ರಾನಲ್ಲಿ ವಿಜೇತರಾದ ಸಾಯಿ ಕೃಷ್ಣ ಅವರಿಗೆ ‘ಸ್ಕೈ ಸಿಸಿರಾ’ದಲ್ಲಿ ಮನೆ ಬುಕ್ ಮಾಡಿದ್ದ ಸಾಯಿಕೃಷ್ಣ ಅವರಿಗೆ 2 ಬಿಎಚ್‌ಕೆ ಮನೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕೇದಾರನಾಥ ಸ್ವಾಮೀಜಿ ಭೀಮಾಶಂಕರ ಲಿಂಗ ಮಾತನಾಡಿ, ಡಿ.ಎಸ್. ಮ್ಯಾಕ್ಸ್ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ. ಜನ ಸಾಮಾನ್ಯರು ಸ್ವಂತ ಮನೆಗಳನ್ನು ಹೊಂದುವ ಕನಸು ನನಸಾಗುತ್ತಿದೆ. ಈ ಸಂಸ್ಥೆ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಲಕ್ಕಿ ಡ್ರಾ ಎತ್ತಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ನಟಿ ಕಾಜಲ್ ಅಗರ್ವಾಲ್, ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವ ಕನಸು ಇರುತ್ತದೆ. ಈ ನಿಟ್ಟಿನಲ್ಲಿ ಡಿ.ಎಸ್. ಮ್ಯಾಕ್ಸ್ ಸಂಸ್ಥೆ ಸಾಮಾನ್ಯ ಜನರ ಸ್ವಂತ ಸೂರಿನ ಕನಸು ನನಸು ಮಾಡುತ್ತಿದೆ. ನಾನು ಕೂಡ ಇತ್ತೀಚೆಗೆ ಸ್ವಂತ ಮನೆಗೆ ಪ್ರವೇಶಿಸಿದಾಗ ಅತ್ಯಂತ ಖುಷಿಯಾಯಿತು ಎಂದರು. ಕಾರ್ಯಕ್ರಮದಲ್ಲಿ ಡಿ.ಎಸ್. ಮ್ಯಾಕ್ಸ್ ಸಮೂಹ ಸಂಸ್ಥಾಪಕ ಹಾಗೂ ಮುಖ್ಯಸ್ಥ ಡಾ.ಕೆ.ವಿ. ಸತೀಶ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 15 ಲಕ್ಷ ಗಿಡ ನೆಡುವ ಅಭಿಯಾನ ಜೂ.27ರಿಂದ ಆರಂಭ
ಬಿಡದಿ ಟೌನ್‌ಶಿಪ್‌: 7 ರೈತರಿಗೆ ಭೂ ಪರಿಹಾರದ ಚೆಕ್‌ ವಿತರಣೆ