ಭಟ್ಕಳ ಸಮಸ್ಯೆಗಳ ಪರಿಹಾರಕ್ಕೆ ದುಬೈ ಭಟ್ಕಳ ಮುಸ್ಲಿಂ ಖಲೀಜ್‌ ಕೌನ್ಸಿಲ್‌ ಮನವಿ

KannadaprabhaNewsNetwork |  
Published : Oct 28, 2026, 02:15 AM IST
ದುಬೈ ಭಟ್ಕಳ ಮುಸ್ಲಿಂ ಖಲೀಜ್‌ ಕೌನ್ಸಿಲ್‌ ವತಿಯಿಂದ ರಾಜ್ಯ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಟ್ಕಳದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ನಡೆಸುವಂತೆ, ಭಟ್ಕಳದ ವಸತಿ ಪ್ರದೇಶದಲ್ಲಿ ಹಾಳಾದ ರಸ್ತೆಗಳನ್ನು ಪುನರ್‌ ನಿರ್ಮಾಣ ಮಾಡುವಂತೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಭಟ್ಕಳದ ಸರಾಬಿ ನದಿಯ ಮಾಲಿನ್ಯ ತಡೆಗಟ್ಟುವಂತೆ ಆಗ್ರಹಿಸಲಾಯಿತು.

ಭಟ್ಕಳ: ಭಟ್ಕಳ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ದುಬೈ ಭಟ್ಕಳ ಮುಸ್ಲಿಂ ಖಲೀಜ್‌ ಕೌನ್ಸಿಲ್‌ ವತಿಯಿಂದ ರಾಜ್ಯ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ದುಬೈನಲ್ಲಿ ನಡೆದ ಅನಿವಾಸಿ ಭಾರತೀಯರ ಸಭೆಯಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು. ಭಟ್ಕಳದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ನಡೆಸುವಂತೆ, ಭಟ್ಕಳದ ವಸತಿ ಪ್ರದೇಶದಲ್ಲಿ ಹಾಳಾದ ರಸ್ತೆಗಳನ್ನು ಪುನರ್‌ ನಿರ್ಮಾಣ ಮಾಡುವಂತೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಭಟ್ಕಳದ ಸರಾಬಿ ನದಿಯ ಮಾಲಿನ್ಯ ತಡೆಗಟ್ಟುವಂತೆ ಆಗ್ರಹಿಸಿದರು.

ಪುರಸಭೆಯಿಂದ ಮೇಲ್ದರ್ಜೇಗೇರಿದ ನಗರಸಭೆಗೆ ಹಳೆ ತಹಸೀಲ್ದಾರ್ ಕಚೇರಿ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ, ಭಟ್ಕಳದಲ್ಲಿ ಪದೇ ಪದೇ ವಿದ್ಯುತ್‌ ಕಡಿತದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ವಿದ್ಯುತ್‌ ಪೂರೈಕೆಯಲ್ಲಿ ಸುಧಾರಣೆ ತರುವಂತೆ ಅವರು ಮನವಿಯಲ್ಲಿ ಆಗ್ರಹಿಸಿದರು.

ದುಬೈ ಭಟ್ಕಳ ಮುಸ್ಲಿಂ ಖಲೀಜ್‌ ಕೌನ್ಸಿಲ್‌ ಅಧ್ಯಕ್ಷ ಅತೀಕುರೆಹಮಾನ ಮುನರಿ ಸೇರಿದಂತೆ ಅನಿವಾಸಿ ಭಾರತೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಕ್ರೀಡಾಕೂಟದಲ್ಲಿ ಕಾರವಾರ ತಾಲೂಕಿಗೆ 19 ಪ್ರಶಸ್ತಿ

ಕಾರವಾರ: ವನವಾಸಿ ಕಲ್ಯಾಣದಿಂದ ಕುಮಟಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಾರವಾರ ತಾಲೂಕಿನ ನಗೆ, ಶಿರ್ವೆ ಹಾಗೂ ಬೇಳೂರು ಕ್ರೀಡಾ ಕೇಂದ್ರಗಳ ಮಕ್ಕಳು ಗಮನಾರ್ಹ ಸಾಧನೆ ಮಾಡಿದ್ದಾರೆ.ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಕ್ರೀಡಾ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಸುಮಾರು 200 ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ಕಾರವಾರ ತಾಲೂಕಿನ ಮಕ್ಕಳು 3 ಪ್ರಥಮ, 10 ದ್ವಿತೀಯ ಹಾಗೂ 6 ತೃತೀಯ ಬಹುಮಾನ ಸೇರಿದಂತೆ ಒಟ್ಟು 19 ಬಹುಮಾನಗಳನ್ನು ಪಡೆದು ಮೂರು ಗ್ರಾಮಗಳಿಗೂ ತಾಲೂಕಿಗೂ ಕೀರ್ತಿ ತಂದಿದ್ದಾರೆ.ನಗೆ ಗ್ರಾಮದ ಮೋನಿಕಾ ಎಂ. ಗೌಡ, ಬೇಳೂರು ಗ್ರಾಮದ ಅರ್ಪಿತಾ ಧನಂಜಯ ಗೌಡ ಹಾಗೂ ಅನಯ ಗೌಡ ಅವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಕಾರವಾರ ತಾಲೂಕು ಪ್ರವಾಸಿ ಕಾರ್ಯಕರ್ತೆ ದೀಪಾ ಹೆಗಡೆ, ಆಚಾರ್ಯರಾದ ಶೈಲಾ ಗೌಡ, ದೀಕ್ಷಾ ಗೌಡ, ಸುಜಲಾ ಹಾಗೂ ಕಾಮಿನಿ ಗೌಡ ಮತ್ತು ತಾಲೂಕು ಕ್ರೀಡಾ ಪ್ರಮುಖ ಸಂದೇಶ ಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗಾಮತ ಸಮಾಜ ಮುಖ್ಯವಾಹಿನಿಗೆ ಬರಲು ವಿಫಲ
ಗ್ರಾಮಾಂತರ ಪ್ರದೇಶಗಳಿಗೂ ಸಂಗೀತ, ನೃತ್ಯ ಅಕಾಡೆಮಿ ಕಾರ್ಯಕ್ರಮ ವಿಸ್ತರಣೆ