ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಾಲಭವನದ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಘಟಕ, ಸೆಂಟ್‌ಜಾನ್ ಆಂಬುಲೆನ್ಸ್ ಇಂಡಿಯಾ ಜಿಲ್ಲಾ ಶಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಡಾ. ನಾ.ಸು.ಹರ್ಡೀಕರ್ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ನೆಲ ಸಾಧನೆಯ ಕ್ಷೇತ್ರವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದರೂ ಹೆಣ್ಣು ಭ್ರೂಣ ಹತ್ಯೆ ಹೆಚ್ಚು ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.
ವಿದ್ಯಾವಂತ ಹುಡುಗಿಯರು ತಮ್ಮ ಸಾಧನೆಯ ಗುರಿ ತುಲುಪಿದ ನಂತರ ಮದುವೆಯಾಗಿ. ಎಲ್ಲರಿಗೂ ಅಧಿಕಾರ ಸಿಗುವುದಿಲ್ಲ, ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದವರಿಗೆ ಮಾತ್ರ ಅಧಿಕಾರ, ಗೌರವ ಲಭಿಸುತ್ತದೆ. ಅಧಿಕಾರ ಎಂದರೆ ಸೇವೆ ಮಾತ್ರ. ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭಿಸಲ್ಲ ಎಂದರು.ಸಾರ್ವಜನಿಕ ಜೀವನದಲ್ಲಿ ಒಬ್ಬ ಹೆಣ್ಣು ಮಗಳು ಬೆಳೆಯಬೇಕು ಎಂದರೆ ಕಷ್ಟ. ಅದೂ ರಾಜಕಾರಣದಲ್ಲಿ ಬಹಳ ಕಷ್ಟ, ಹಣ ಬಲ ತೋಳ್ಬಲ, ತಂದೆ ಎಂಎಲ್‌ಎ, ಎಂಪಿ, ಮುಖ್ಯಮಂತ್ರಿನೋ ಆಗಿರಬೇಕಿರುತ್ತದೆ. ಏನೂ ಇಲ್ಲದೆ ಬೆಳೆಯಬೇಕು ಎಂದರೆ ಪರಿಶ್ರಮ, ಪ್ರತಿಭೆ, ಉತ್ತಮ ಶಿಕ್ಷಣ ಇರಬೇಕು ಎಂದು ಸಲಹೆ ನೀಡಿದರು.
೧ ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ೪೫೦ ಮಂದಿಗೆ ಪುರಸ್ಕಾರ ನೀಡಿದ್ದೇವೆ, ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂಕ ಗಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಟ ಶಂಕರ್ ಅಶ್ವಥ್, ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಶಿವಾನಂದ, ಮಹಿಳಾ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮೀ, ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಸೇವಾದಳದ ಜಿಲ್ಲಾ ಖಜಾಂಚಿ ಶಿವಪ್ರಕಾಶ್‌ಬಾಬು, ಎಸ್‌ಜೆಎ ಶಾಖೆಯ ಜಿಲ್ಲಾ ಖಜಾಂಚಿ ಸಜ್ಜನ್ ಕೊಠಾರಿ, ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಕೆ.ರಾಜು, ಗಾಯಕ ನಾರಾಯಸ್ವಾಮಿ, ಶಿಕ್ಷಕಿ ಉಷಾರಾಣಿ ಭಾಗವಹಿಸಿದ್ದರು.