- ಖೇಣಿದಾರರ ಸಮಾವೇಶದಲ್ಲಿ ಅಧ್ಯಕ್ಷ ಲೋಹಿತ್ ಕುಮಾರ್ ಕಳವಳ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಡಕೆ ಖೇಣಿದಾರರ ಸಮಾವೇಶ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತರು ಬೆಳೆದ ಅಡಕೆ ಬೆಳೆಯನ್ನು ಕಟಾವು, ಸಂಸ್ಕರಣೆ ಬಳಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತರಿಗೆ ಹಣ ಮುಟ್ಟಿಸುವಂತಹ ಕೆಲಸ ಖೇಣಿದಾರರದ್ದಾಗಿದೆ. ಪ್ರಸ್ತುತ ದಿನಗಳಲ್ಲಿ ನಮ್ಮಲ್ಲಿಯೇ ಪೈಪೋಟಿಗಳು ಏರ್ಪಟ್ಟು ಇಂದು ಖೇಣಿದಾರ ಸಾಲಗಾರನಾಗುತ್ತಿರುವುದು ವಿಷಾದನೀಯ ಎಂದರು.ರೈತರು ಮತ್ತು ಖೇಣಿದಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ರೈತರು ಮತ್ತು ಖೇಣಿದಾರರ ನಡುವೆ ಭಿನ್ನಾಭಿಪ್ರಾಯಗಳು ಮೂಡಬಾರದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಖೇಣಿದಾರರ ಸಂಘದ ಅಧ್ಯಕ್ಷ ಪಾಂಡೋಮಟ್ಟಿ ಜಗದೀಶ್ ವಹಿಸಿದ್ದರು. ಸಂಘದ ಪ್ರಮುಖರಾದ ಅತಾವುಲ್ಲಾ, ಸಂತೋಷ್, ರುದ್ರಪ್ಪ, ನಾಗರಾಜ್, ಜಗದೀಶ್, ರವಿಕುಮಾರ್, ಬಸವರಾಜ್, ಅಣ್ಣೋಜಿರಾವ್, ಚಂದ್ರಶೇಖರ್, ವೀರಭದ್ರಪ್ಪ, ಇತರ ಖೇಣಿದಾರರು ಭಾಗವಹಿಸಿದ್ದರು.
- - - -1ಕೆಸಿಎನ್‌ಜಿ1:ಚನ್ನಗಿರಿಯಲ್ಲಿ ಖೇಣಿದಾರರ ಸಮಾವೇಶ ಕಾರ್ಯಕ್ರಮವನ್ನು ಜಿಲ್ಲಾ ಖೇಣಿದಾರರ ಸಂಘದ ಅಧ್ಯಕ್ಷ ಲೋಹಿತ್ ಕುಮಾರ್ ಉದ್ಘಾಟಿಸಿರು.