ದುಂಡಳ್ಳಿ ಗ್ರಾ.ಪಂ. ಗ್ರಂಥಾಲಯ: ಓದುವ ಬೆಳಕು ಕಾರ್ಯಕ್ರಮ

KannadaprabhaNewsNetwork |  
Published : Sep 30, 2026, 02:45 AM IST
. | Kannada Prabha

ಸಾರಾಂಶ

ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸೆಪ್ಟಂಬರ್ ತಿಂಗಳ ಚಟುವಟಿಕೆಗಳ ಸಂಭ್ರಮ ಕಾರ್ಯಕ್ರಮ ಅರಿವು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಶನಿವಾರಸಂತೆ : ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸೆಪ್ಟಂಬರ್ ತಿಂಗಳ ಚಟುವಟಿಕೆಗಳ ಸಂಭ್ರಮ ಕಾರ್ಯಕ್ರಮ ಅರಿವು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.ಸೆಪ್ಟಂಬರ್ ತಿಂಗಳ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ದಿನದ ಮಹತ್ವದ ಕುರಿತಾಗಿ ಧನ್ಯವಾದ ಕಾರ್ಡ್ ತಯಾರಿಸುವ ಚಟುವಟಿಕೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದಿನದ ಮಹತ್ವ ಬಗ್ಗೆ ಅರಿವು, ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಕೌಶಲ್ಯದ ಬಗ್ಗೆ ಅರಿವು, ಅಂತಾರಾಷ್ಟ್ರೀಯ ಅಜ್ಜ ಅಜ್ಜಿಯ ದಿನಾಚರಣೆ ಪ್ರಯುಕ್ತ ಹಿರಿಯರ ಮಹತ್ವದ ಬಗ್ಗೆ ತಿಳುವಳಿಕೆ ಸೇರಿದಂತೆ ಜನಪದ ಗೀತೆ, ಕಥೆ ಹೇಳುವುದು, ಪೌರಾಣಿಕ ಕತೆ ಹೇಳಿಕೊಡುವುದು ಮತ್ತು ಕೌಶಲ್ಯ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯ ಮಾರ್ಗದರ್ಶನದಲ್ಲಿ ಸೆಪ್ಟಂಬರ್ ಮಾಹೆಯ ಸಂಭ್ರಮ ಕಾರ್ಯಕ್ರಮ ಯಶಸ್ವಿಗೊಂಡಿತು. ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯರಾದ ಕೆಂಚಮ್ಮ, ಶಾರದಮ್ಮ, ಗಂಗಮ್ಮ ಪಾಲ್ಗೊಂಡು ಮಕ್ಕಳಿಗೆ ಪೌರಾಣಿಕ ಕತೆಗಳು ಸೇರಿದಂತೆ ಜಾನಪದ ಗೀತೆಗಳನ್ನು ಹೇಳಿಕೊಟ್ಟರು.

ಪೋಟೋ೨೮ಎಸ್‌ಎಸ್೧ದುಂಡಳ್ಳಿ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸೆಪ್ಟಂಬರ್ ಮಾಹೆಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಮಕ್ಕಳಿಗೆ ಪೌರಾಣಿಕ ಕತೆ, ಜಾನಪದ ಗೀತೆ ಹಾಡುವುದನ್ನು ಹೇಳೊಕೊಟ್ಟ ಹಿರಿಯ ಮಹಿಳೆಯರು ಮತ್ತು ಗ್ರಂಥಾಲಯ ಮೇಲ್ವಿಚಾರಕಿ ದಿವ್ಯ ಹಾಗೂ ಇತರರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಎಲ್‌ಇ ಫಿಸಿಯೋಥೆರಪಿ ವಿಭಾಗಕ್ಕೆ ಪ್ರಶಸ್ತಿ ಗೌರವ
ಸರ್ಕಾರ ಮಾಡಲಾಗದ ಸಾಧನೆ ಎಕ್ಸೆಲ್ ವಿದ್ಯಾ ಸಂಸ್ಥೆ ಮಾಡಿವೆ: ಭೋಜೆ ಗೌಡ