ನಾರಾಯಣ ಮಾಯಾಚಾರಿ
ಸ್ವಚ್ಛತೆ ಬಗ್ಗೆ ಜನರಿಗೆ ತಿಳಿವಳಿಕೆ ಹೇಳುವ ತಾಲೂಕು ಪಂಚಾಯತಿ ಕಚೇರಿಯಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಇದರೊಟ್ಟಿಗೆ ತಾಪಂ ಕಚೇರಿ ಶಿಥಿಲಾವಸ್ಥೆ ತಲುಪಿದ್ದರಿಂದ ಅಲ್ಲಿಯ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನಾದ್ಯಂತ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುವ ತಾಪಂ ಅಧಿಕಾರಿಗಳು ತಮ್ಮ ಇಲಾಖೆ ಕಚೇರಿಯ ಕೊಠಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಎಂದರೆ ಗ್ರಾಮಗಳ ಅಭಿವೃದ್ಧಿ ಹಾಗೂ ಸ್ವಚ್ಛತೆ ಸುಧಾರಣೆ ಮಾಡಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸುಮಾರು ೪೦ ವರ್ಷಗಳ ಹಿಂದೆ ನಿರ್ಮಿಸಲಾದ ಪಟ್ಟಣದ ತಾಪಂ ಕಚೇರಿ ಇಂದು ಶಿಥಿಲಾವಸ್ಥೆಗೆ ಬಂದು ನಿಂತಿದೆ. ಜೊತೆಗೆ ವಾಣಿಜ್ಯ ಮಳಿಗೆಗಳು ಕೂಡ ಇದೆ ಹಾದಿಯನ್ನು ಹಿಡಿದಿವೆ. ಮಾತ್ರವಲ್ಲ ಈ ವಾಣಿಜ್ಯ ಮಳಿಗೆಗಳು ಅಂದಿನ ದರದಂತೆ ಪ್ರಸ್ತುತ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಪಂನ ಚುನಾಯಿತ ಅಧ್ಯಕ್ಷರು ಹಾಗೂ ಸದಸ್ಯರು ಇಂದಿಗೂ ಯಥಾಸ್ಥಿತಿಯಲ್ಲಿಯೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಸರ್ಕಾರದ ಆದಾಯಕ್ಕೆ ಕತ್ತರಿ ಬೀಳುತ್ತಿದೆ. ಈ ಮಾಹಿತಿಯ ಅರಿವಿದ್ದರೂ ಸಂಬಂಧಪಟ್ಟ ಅಧಿಕಾರಿಗಳೇಕೆ ಮೌನ ವಹಿಸಿದ್ದಾರೆ? ಸಂಬಂಧಿತ ಇಲಾಖೆಗೆ ಪತ್ರ ಬರೆದು ಏಕೆ ಅದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.ಅಧಿಕಾರವಧಿ ಮುಗಿದು 3 ವರ್ಷ:
ಅದೇನೇ ಆಗಲಿ ತಾಲೂಕಿನ ನೂರಾರು ಗ್ರಾಮಗಳಿಂದ ಸರ್ಕಾರಿ ಕೆಲಸಕ್ಕಾಗಿ ನಿತ್ಯ ಸಾವಿರಾರು ಜನರು ತಾಪಂಗೆ ಬರುತ್ತಾರೆ. ಆದರೆ, ಹೀಗೆ ಬರುವ ನಾಗರಿಕರಿಗೆ ತಾಪಂ ಅಧಿಕಾರಿಗಳು ಮೂಲಭೂತ ಸೌಕರ್ಯಗಳಾದ ಕುಡಿವ ನೀರು, ಶೌಚಾಲಯ, ಕುಳಿತುಕೊಳ್ಳುವ ಆಸನಗಳನ್ನು ಸಹಿತ ಒದಗಿಸದೇ ಇರುವ ಕಾರಣ ಸರ್ಕಾರಿ ಕೆಲಸಕ್ಕೆಂದು ಬರುವ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ.
-------------
60 ವರ್ಷಗಳಿಂದ ಹೆಚ್ಚಾಗದ ಬಾಡಿಗೆ
--------------
-ಎಸ್.ಎಸ್.ಕಲ್ಮನಿ, ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಮುದ್ದೇಬಿಹಾಳ
ಕೋಟ್
ಯಾವುದೇ ಅಧಿಕಾರಿಗಳಿರಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ಕಚೇರಿಯ ಸ್ವಚ್ಛತೆಯಿಂದ ನೋಡಿಕೊಳ್ಳುವುದು ಮುಖ್ಯ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ತಾಪಂ ಕಚೇರಿಗೆ ಭೇಟಿ ನೀಡಿ ಪರೀಶಿಲಿಸಿ ಎಲ್ಲವನ್ನು ಸರಿಪಡಿಸಬೇಕು.-ಪ್ರಕಾಶ ಸರೂರ, ಮುದ್ದೇಬಿಹಾಳ.