ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಜ್ಯೋತಿಬಾ ಫುಲೆ

KannadaprabhaNewsNetwork |  
Published : Apr 13, 2024, 01:11 AM IST
11ಎಮ್‌ಡಿಎಲ್‌ಜಿ5 | Kannada Prabha

ಸಾರಾಂಶ

ಮೂಡಲಗಿ: ಆಧುನಿಕ ಕಾಲದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕ ಸಮಾನತೆಯ ಹರಿಕಾರರಾಗಿ ದೀನ ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಬಾಳಿಗೆ ಬೆಳಕನ್ನು ನೀಡಿದವರು ಮಹಾತ್ಮಾ ಜ್ಯೋತಿಬಾ ಫುಲೆ ಎಂದು ಮುಖಂಡ ಸಿದ್ದಪ್ಪ ಕೂಲಿಗೊಡ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಆಧುನಿಕ ಕಾಲದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕ ಸಮಾನತೆಯ ಹರಿಕಾರರಾಗಿ ದೀನ ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಬಾಳಿಗೆ ಬೆಳಕನ್ನು ನೀಡಿದವರು ಮಹಾತ್ಮಾ ಜ್ಯೋತಿಬಾ ಫುಲೆ ಎಂದು ಮುಖಂಡ ಸಿದ್ದಪ್ಪ ಕೂಲಿಗೊಡ ಹೇಳಿದರು.

ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಮಹಾತ್ಮಾ ಜ್ಯೋತಿಬಾ ಫುಲೆ ಅವರ 197ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಜ್ಯೋತಿಬಾ ಫುಲೆ ಅವರು ಜನಸಾಮಾನ್ಯರು ಶಿಕ್ಷಣದ ಮೂಲಕ ದಮನಿತರನ್ನು ಮೇಲಕ್ಕೆತ್ತಿ ಮಹಿಳೆಯರಿಗೂ ಶಾಲೆ ತೆರೆದು ಸಮಾನತೆಯ ಕನಸು ಬಿತ್ತಿ ಮಹಾತ್ಮಾ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ ಎಂದರು.

ಮುರಿಗೆಪ್ಪ ಮಾಲಗಾರ ಮಾತನಾಡಿ, ಡಾಂಭಿಕ ಧರ್ಮ ಪಂಥ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು ಬಡ ಹಿಂದುಳಿದ ಜನರ ಬಾಳಿಗೆ ಬೆಳಕು ನೀಡಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ಮಹಾತ್ಮಾ ಜ್ಯೋತಿಬಾ ಫುಲೆ ಎಂದು ತಿಳಿಸಿದರು.

ಈ ಸಮಯದಲ್ಲಿ ಉದಯ ಮಠಪತಿ, ಯಮನಪ್ಪ ನಿಡೋಣಿ, ಭೀಮಪ್ಪ ಸಪ್ತಸಾಗರ, ಶಿವಪ್ಪ ಅಟ್ಟಮಟ್ಟಿ, ರಾಮಣ್ಣ ನಿಡೋಣಿ, ಶ್ರೀಶೈಲ ಹಿರೇಮಠ್, ಕಲ್ಲಪ್ಪ ಹುಬ್ಬಳ್ಳಿ, ರಾಮಣ್ಣ ಅಥಣಿ, ಲಕ್ಷ್ಮಣ ಕೌಜಲಗಿ, ನಾಗಪ್ಪ ಗೋಸಬಾಳ, ಹಣಮಂತ ಗೋಲಬಾಂವಿ, ವಿಠ್ಠಲ ತೋಟಗಿ, ಅನೀಲ ಕತ್ತಿ, ಶ್ರೀಶೈಲ ನಾವಿ, ಆನಂದ ಮೂಡಲಗಿ, ಸೋಮು ನಿಡೋಣಿ, ಮಹಾಂತೇಶ ಗರಗ, ದುಂಡಪ್ಪ ಕುಳ್ಳೊಳ್ಳಿ, ಭೀಮಪ್ಪ ನಿಡೋಣಿ ಪುಂಡಲೀಕ ಲಕ್ಷ್ಮೇಶ್ವರ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ