ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ತರಹೇವಾರಿ ಗೊಂಬೆಗಳಿವೆ?ದೇವಾಂಗ ಪೇಟೆಯ ಹೊಸಬೇದಿಯ ಲತಾ ವಾಸುದೇವ್ ಅವರು ಕಳೆದ 30 ವರುಷಗಳಿಂದಲೂ ಗೊಂಬೆಗಳನ್ನು ಕೂರಿಸುವ ಪದ್ಧತಿ ರೂಡಿಸಿಕೊಂಡಿದ್ದು ಈ ಬಾರಿ ಅವರು ಅಮಾವಾಸ್ಯೆಯಂದು ಗೊಂಬೆ ಕೂರಿಸಿ ಪೂಜೆ ಸಲ್ಲಿಸುತ್ತಾರೆ, ಪ್ರತಿ ದಿನವೂ ವಿಜಯದಶಮಿ ತನಕ 9 ದಿನಗಳ ಕಾಲ ವಿಶೇಷ ರೀತಿಯಲ್ಲಿ ನೈವೇದ್ಯ ತಯಾರಿಸಿ ಪೂಜಿಸಲಾಗುತ್ತದೆ. ಅವರು ಈಬಾರಿ ದಶಾವತಾರ, ನವದುರ್ಗೆಯರು, ಕೖಷ್ಣಲೀಲೆಗಳು, ವೈಕುಂಠ, ಲಕ್ಷ್ಮಿನಾರಾಯಣ, ಶ್ರೀನಿವಾಸ ಕಲ್ಯಾಣ ವಿವಾಹ ಮಹೋತ್ಸವ, ರಾಮಲಲ್ಲಾ, ಲಲಿತಾಂಬ ದೇವಿ, ರಾಮ ಲಕ್ಷ್ಣಣ, ಸೀತಾ, ಆಂಜನೇಯ, ಭಕ್ತ ಮಾರ್ಕಂಡೇಯ ಸೇರಿಂತೆ 30 ಬಗೆಯ ವಿವಿಧ ರೂಪಗಳನ್ನು ವಿವರಿಸುವ ಗೊಂಬೆಗಳನ್ನು ಕೂರಿಸಿದ್ದಾರೆ
20 ಬಗೆಯ ಗೊಂಬೆಗಳ ಪ್ರದರ್ಶನದೇವಾಂಗ ಪೇಟೆಯ ಶಾರದ ಚಂದ್ರಶೇಖರ್ ಅವರು 17ಕ್ಕೂ ಅಧಿಕ ವರುಷಗಳಿಂದ ಗೊಂಬೆಗಳನ್ನು ಕೂರಿಸುವ ಪದ್ಧತಿ ನಡೆಸುತ್ತಾ ಬಂದಿದ್ದು ಈಬಾರಿ 20ಕ್ಕೂ ಅಧಿಕ ಮಾದರಿಯ ರೂಪಗಳನ್ನು ವಿವರಿಸುವ ಗೊಂಬೆಗಳ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಗೋಕುಲದದಲ್ಲಿನ ಚಿತ್ರಣ ವಿವರಿಸುವ ಪ್ರದಶ೯ನ, ಗೋಕುಲದಲ್ಲಿನ ನ ಕೖಷ್ಣಲೀಲೆಗಳು, ಯಶೋಧರೆ ಕೖಷ್ಣನಿಗೆ ಬೆಣ್ಣೆ ತಿನ್ನಿಸುವ ದೖಶ್ಯ,
ವೈವಿದ್ಯಮಯ ಗೊಂಬೆ ಪ್ರದರ್ಶನ ಅದೇ ರೀತಿಯಲ್ಲಿ ಪಟ್ಟಣದಲ್ಲಿ ಕಾವ್ಯಾಂಜಲಿ ಅವರು ಸಹ 10 ವರುಷಗಳಿಂದ ಗೊಂಬೆ ಕುರಿಸುವ ಪದ್ಧತಿ ಬೆಳೆಸಿಕೊಂಡಿದ್ದು ವೈವಿದ್ಯಮಯ ಗೊಂಬೆಗಳನ್ನು ಪ್ರದರ್ಶನಕ್ಕಿರಿಸಿದ್ದಾರೆ. ಇಲ್ಲಿ ದಸರಾ ಉತ್ಸವ, ಪಟ್ಟಾಭಿಷೇಕ, ನವದುರ್ಗೆಯರು,
------‘ನಾವು ಮೂವತ್ತು ವರುಷಗಳಿಂದಲೂ ಗೊಂಬೆಗಳನ್ನು ಕೂರಿಸುತ್ತಾ ಬಂದಿದ್ದು ದೇವಾಂಗ ಪೇಟೆಯಲ್ಲಿರುವ ನಮ್ಮ ಮನೆಯಲ್ಲಿ ಇಂದಿನಿಂದ ಇನ್ನು 1 ವಾರ ತನಕ ಪ್ರದರ್ಶನಕ್ಕೆ ಗೊಂಬೆಗಳನ್ನು ಇಡಲಾಗಿದೆ. ನಮ್ಮ ಪೂರ್ವಿಕರ ಪರಂಪರೆಯನ್ನು ಗೌರವಿಸುವ ನಮ್ಮ ಆದ್ಯತೆ, ಹಾಗಾಗಿಯೇ ಈ ಪ್ರದರ್ಶನ ಆಯೋಜಿಸಲಾಗಿದೆ.’ಲತಾ ವಾಸುದೇವ್, ದೇವಾಂಗ ಪೇಟೆಯ ವಾಸಿ--------
‘ನಾವು 17ಕ್ಕೂ ಅಧಿಕ ವರುಷಗಳಿಂದ ಗೊಂಬೆ ಪ್ರದಶ೯ನ ನಡೆಸುತ್ತಿದ್ದೆವೆ, ಮಕ್ಕಳಿಗೆ ಇಷ್ಟವಾಗುವಗೊಂಬೆಗಳನ್ನು ವಿಭಿನ್ನ ರೀತಿಯಲ್ಲಿ ಕೂರಿಸಿದ್ದು ರಾಮಾಯಣ, ಗೋಕುಲ, ಗಣತಿ ದಶಾವತಾರ, ಶ್ರೀನಿವಾಸ ಕಲ್ಯಾಣೋತ್ಸವ ಸೇರಿ 17 ಬಗೆಯಲ್ಲಿ