ಬನ್ನಿಪೂಜೆ ನೆರವೇರಿಸಿದ ತಹಸೀಲ್ದಾರ್ ಸಚ್ಚಿದಾನಂದ ಕುಚನೂರಕನ್ನಡಪ್ರಭ ವಾರ್ತೆ ಶಿರಾನಗರದಲ್ಲಿ ದಸರಾ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ದಸರಾ ಉತ್ಸವ ಸಮಿತಿ ವತಿಯಿಂದ ಶ್ರೀ ದುರ್ಗಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವವು ಶ್ರೀ ದುರ್ಗಮ್ಮ ದೇವಿಯ ಅದ್ಧೂರಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.ದಸರಾ ಹಾಗೂ ವಿಜಯದಶಮಿಯ ಅಂಗವಾಗಿ ಶ್ರೀ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಕಳೆದ ಒಂಭತ್ತು ದಿನಗಳಿಂದ ನಿತ್ಯ ಹಲವಾರು ಕಾರ್ಯಕ್ರಮಗಳು, ಶ್ರೀ ನವದುರ್ಗಾಹೋಮ ಹವನಗಳನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಜಯದಶಮಿ ಅಂಗವಾಗಿ ಕಳಸ ಉತ್ಸವವೂ ನಗರದ ಈರಗಾರ ಗುಡಿಯಿಂದ ಶ್ರೀ ದುರ್ಗಮ್ಮ ದೇವಸ್ಥಾನದವರೆಗೆ ನಡೆಯಿತು. ರಾತ್ರಿ ಶ್ರೀ ದುರ್ಗಮ್ಮ ದೇವಿಯ ಮೆರವಣಿಗೆ ನಗರದ ಶ್ರೀ ದುರ್ಗಮ್ಮ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ಮೆರವಣಿಗೆ ಉತ್ಸವ ನಡೆಯಿತು. ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಬನ್ನಿಮಂಟಪದಲ್ಲಿ ಬನ್ನಿ ಪೂಜೆ ನೆರವೇರಿಸಲಿದ್ದಾರೆ. 15 ಸಾವಿರ ಜನರಿಗೆ ಹೋಳಿಗೆ ಊಟ: ಶಿರಾದಲ್ಲಿ ಕಳೆದ 9 ದಿನಗಳಿಂದ ನಡೆದ ಶರನ್ನವರಾತ್ರಿ ಉತ್ಸವದಲ್ಲಿ ದಿನ ನಿತ್ಯ ಅನ್ನಸಂತರ್ಪಣೆ ನಡೆದಿದ್ದು, ವಿಜಯದಶಮಿ ದಿನವಾದ ಭಾನುವಾರ ಸುಮಾರು 15 ಸಾವಿರ ಜನರಿಗೆ ಹೋಳಿಗೆ ಊಟ ಏರ್ಪಡಿಸಲಾಯಿತು. ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಜೆಡಿಎಸ್ ಮುಖಂಡ ಆರ್.ಉಗ್ರೇಶ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮಾಲಿ ಸುರೇಶ್, ನಾಗೇಶ್, ಮಾಜಿ ನಗರಸಭಾ ಸದಸ್ಯ ಎಂ.ಎನ್.ರಾಜು, ಶಿರಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್, ನಗರಸಭಾ ಸದ್ಯಸ್ಯರಾದ ಆರ್.ರಾಮು ಭಾಗವಹಿಸಿದ್ದರು.