ಗ್ರಾಮದೇವತೆ ಶ್ರೀಕರಿಯಮ್ಮ, ಶ್ರೀಮಲ್ಲಿಗಮ್ಮ, ಮೆಳೇಯಮ್ಮ ದೇವಿಗೆ ಪೂಜೆ । ಬಾಳೇಕಂದು ಕಡಿದು, ಅಂಬು ಒಡೆದು ಆಚರಣೆ
ನಗರದ ಶ್ರೀಪ್ರಸನ್ನ ಗಣಪತಿ ಆಸ್ಥಾನ ಮಂಟಪದ ಮುಂಭಾಗದಲ್ಲಿ ವಿಜಯದಶಮಿ ಪ್ರಯುಕ್ತ ಗ್ರಾಮದೇವತೆ ಶ್ರೀಕರಿಯಮ್ಮ, ಶ್ರೀಮಲ್ಲಿಗಮ್ಮ ಹಾಗೂ ಮೆಳೇಯಮ್ಮ ದೇವಿ ಸಮ್ಮುಖದಲ್ಲಿ ಶಮಿಪೂಜೆ ಮಾಡಿದ ನಂತರ ಬಾಳೇಕಂದನ್ನು ಕಡಿಯುವ ಮೂಲಕ ಅಂಬು ಹೊಡೆಯುವ ಮೂಲಕ ಭಕ್ತಾಧಿಗಳು ಸಂಭ್ರಮದಿಂದ ನೆರವೇರಿಸಿದರು.
ನಗರದ ಶ್ರೀಪ್ರಸನ್ನ ಗಣಪತಿಯ 83 ನೇ ವರ್ಷಧ ಆಸ್ಥಾನ ಮಂಟಪದ ಮುಂಭಾಗ ವಿಜಯ ದಶಮಿ ಹಬ್ಬದ ಪ್ರಯುಕ್ತ ಪ್ರತಿವರ್ಷದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅಂಬು ಹೊಡೆದು ಧಾರ್ಮಿಕ ಕೈಂಕರ್ಯವನ್ನು ನೇರವೇರಿಸಿದರು.ಪೂಜೆ ಸಲ್ಲಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸನಾತನ ಹಿಂದು ಧರ್ಮದಲ್ಲಿ ಗಣೇಶನ ಪೂಜೆಗೆ ಅಗ್ರಸ್ಥಾನ ನೀಡಲಾಗಿದೆ. ಸರ್ವ ವಿಘ್ನ ನಿವಾರಕ ಶ್ರೀಗಣೇಶ ಮತ್ತು ಗ್ರಾಮದೇವತೆಗಳಾದ ಕರಿಯಮ್ಮ ಮತ್ತು ಮಲ್ಲಿಗಮ್ಮ ದೇವಿಯವರ ಸಮ್ಮುಖದಲ್ಲಿ 56 ವರ್ಷಗಳಿಂದ ವಿಜಯ ದಶಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ದುಷ್ಟ ಸಂಹಾರ ಶಿಷ್ಟರ ಪರಿಪಾಲನೆ ವಿಶೇಷತೆಯ ವಿಜಯದ ಸಂಕೇತವಾಗಿ ಶಮಿಪೂಜೆಯನ್ನು ನೆರವೇರಿಸಲಾಗಿದೆ. ವಿಜಯದಶಮಿ ಹಬ್ಬದ ಧಾರ್ಮಿಕ ಆಚರಣೆ ಮಾಡುವ ಮೂಲಕ ಸತತ ಬರಗಾಲ ಪೀಡಿತ ನಮ್ಮ ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಹಾಗೂ ನಾಡಿನೆಲ್ಲೆಡೆ ಜನತೆಯೂ ಸುಖ ಶಾಂತಿ ನೆಮ್ಮದಿಯಿಂದ ಸಮೃದ್ದಿಯ ಬದುಕು ಬಾಳಲು ಭಗವಂತ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಕ್ತಮಂಡಳಿ ಭಕ್ತಮಂಡಲಿ ಕಾರ್ಯದರ್ಶಿ ನಾಗಭೂಷಣ್, ಸ್ವಾಮಿ, ಎಸ್.ವಿ.ಟಿ ಬಾಬು, ಮಹೇಶ್ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಭಕ್ತಾದಿಗಳು ಮುಂಜಾನೆಯಿಂದ ಸಂಜೆವರೆಗೂ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವತೆಗಳಿಗೆ ಪೂಜೆ ಸಲ್ಲಿಸಿ ದರ್ಶನ ಭಾಗ್ಯವನ್ನು ಪಡೆಯುವ ಮೂಲಕ ಪುನೀತರಾಗಿ ತಮ್ಮ ಭಕ್ತಿ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬಂತು.