ಕೊಡಗಿನ ಶಾಲೆಗಳಿಗೆ ಅ.10ರಿಂದ 25ರ ವರೆಗೆ ದಸರಾ ರಜೆ

KannadaprabhaNewsNetwork | Published : Oct 8, 2023 12:04 AM

ಸಾರಾಂಶ

ಅ.24ರಂದು ರಾತ್ರಿ ಮಡಿಕೇರಿ, ಗೋಣಿಕೊಪ್ಪ ದಸರಾ ನಡೆಯಲಿದೆ. ರಾತ್ರಿ ದಸರಾ ವೀಕ್ಷಿಸಿ ಮರುದಿನ ಶಾಲೆಗಳಿಗೆ ತೆರಳಲು ವಿದ್ಯಾಥಿ೯ಗಳಿಗೆ ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ದಸರಾ ಮರುದಿನ ಅ.25ಕ್ಕೂ ರಜೆ ವಿಸ್ತರಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಆದೇಶ ಮಾಡಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅ.10ರಿಂದ 25ರ ವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಈ ಮೊದಲಿನ ರಜೆ ದಿನಗಳನ್ನು ಮಾಪಾ೯ಡು ಮಾಡಿ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ ಮೇರೆಗೆ ರಜೆ ದಿನಗಳಲ್ಲಿ ಮಾರ್ಪಾಡುಗೊಳಿಸಲಾಗಿದೆ. ಅ.24ರಂದು ರಾತ್ರಿ ಮಡಿಕೇರಿ, ಗೋಣಿಕೊಪ್ಪ ದಸರಾ ನಡೆಯಲಿದೆ. ರಾತ್ರಿ ದಸರಾ ವೀಕ್ಷಿಸಿ ಮರುದಿನ ಶಾಲೆಗಳಿಗೆ ತೆರಳಲು ವಿದ್ಯಾಥಿ೯ಗಳಿಗೆ ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ದಸರಾ ಮರುದಿನ ಅ.25ಕ್ಕೂ ರಜೆ ವಿಸ್ತರಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಆದೇಶ ಮಾಡಿದ್ದಾರೆ. ಅ.26ರಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳು ಪುನರಾರಂಭವಾಗಲಿದೆ.

Share this article