ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಡಿವಿಜಿ ಅವರ 138ನೇ ಜನ್ಮ ದಿನಾಚರಣೆಯಲ್ಲಿ ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದಿವಾನ್ ಶೇಷಾದ್ರಿ ಅಯ್ಯರ್ ಅವರಿಗೂ ಕೂಡ ಪರಿಚಿತರಾಗಿದ್ದ ಡಿ.ವಿ.ಗುಂಡಪ್ಪ ಅವರು ಪತ್ರಕರ್ತರಾಗಿ ಅಸಾಮಾನ್ಯ ಕೆಲಸ ಮಾಡಿರುವ ಜೊತೆಗೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಬಹಳಷ್ಟು ಅಂಕಣ ಬರೆದಿದ್ದಾರೆ ಎಂದರು.
ಡಿವಿಜಿ ಅವರು ಜೀವನೋಪಾಯಕ್ಕಾಗಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಣ್ಣ ಬಳಿಯುವುದು, ಜಟಕಾ ಗಾಡಿಗಳಿಗೆ ನಂಬರ್ ಹಾಕುವುದಲ್ಲದೆ ಸರ್ಕಸ್ ಕೂಡ ಮಾಡುತ್ತಿದ್ದರು. ಅದರೆ, ಅದ್ಭುತ ಚಿಂತಕರಾಗಿದ್ದ ಅವರು ಇಂಗ್ಲಿಷ್ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡುತ್ತಿದ್ದರು ಎಂದರು.ದೊಡ್ಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಸೇರಿದಂತೆ ಅನೇಕ ಕೃತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವ ಎಲ್ಲಾ ಪತ್ರಕರ್ತರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಅರಿವು ಮತ್ತು ಪ್ರಜ್ಞೆ ಇರಬೇಕೆಂಬುದೇ ನನ್ನ ಮನವಿ. ದೇಶದ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.