ಕನ್ನಡಪ್ರಭ ವಾರ್ತೆ ಮೈಸೂರು
ಪತ್ರಕತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.18ರಂದು ಸಂಜೆ 4.05ಕ್ಕೆ ಜಯಲಕ್ಷ್ಮೀಪುರಂ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ, ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್, ದತ್ತ ವಿಜಯೇಂದ್ರ ತೀರ್ಥ ಸ್ವಾಮೀಜಿ, ಭಾಷ್ಯಂ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಚಾಲನೆ ದೊರೆಯಲಿದೆ ಎಂದರು.
ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಸಾನ್ನಿಧ್ಯ ವಹಿಸುವರು, ಖ್ಯಾತ ಸಂಗೀತ ನಿರ್ದೇಶಕ ಇಳೈರಾಜಾ ಅತಿಥಿಗಳಾವರು. ತಾವು ಅಧ್ಯಕ್ಷತೆ ವಹಿಸುವುದಾಗಿ ಮಾಹಿತಿ ನೀಡಿದರು.ರಾತ್ರಿ 7.30ಕ್ಕೆ ಗರುಡ ಕಂಕಣ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಈ ಗರುಡೋತ್ಸವದಲ್ಲಿ ಜಯಲಕ್ಷ್ಮೀಪುರಂ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಕೆ.ಆರ್. ಮೊಹಲ್ಲಾ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ತಿಲಕ್ ನಗರದ ಶ್ರೀನಿವಾಸಸ್ವಾಮಿ ದೇವಸ್ಥಾನ, ಚಾಮರಾಜ ಮೊಹಲ್ಲಾದ ಪುಸ್ತಕಂ ಸಂತಾನ ವೇಣುಗೋಪಾಲಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲ್‌ನ ಆಂಡಾಳ್ ಮಂದಿರ, ಕೆ.ಆರ್. ಪೇಟೆಯ ಭೂದೇವಿ ಸಮೇತ ಲಕ್ಷ್ಮೀ ವರಾಹಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ಲಕ್ಷ್ಮೀನರಸಿಂಹ ಸ್ವಾಮಿ ಕ್ಷೇತ್ರ, ಇಲವಾಲದ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನ, ಉಮ್ಮತ್ತೂರಿನ ರಂಗನಾಥಸ್ವಾಮಿ ದೇವಸ್ಥಾನ, ಮೇಟಗಳ್ಳಿ ವರ್ತುಲ ರಸ್ತೆಯ ಚಲುವನಾರಾಯಣಸ್ವಾಮಿ ದೇವಸ್ಥಾನ, ಎನ್.ಆರ್. ಮೊಹಲ್ಲಾದ ಪದ್ಮಾವತಿ ಸಮೇತ ಶ್ರೀನಿವಾಸಸ್ವಾಮಿ ದೇವಸ್ಥಾನ, ಕಲ್ಯಾಣಗಿರಿಯ ಕಲ್ಯಾಣ ವೆಂಕಟೇಶ ಸ್ವಾಮಿ ದೇವಸ್ಥಾನಗಳು ಗರುಡೋತ್ಸವ ಸೇವೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಯೋಗಾನರಸಿಂಹನ್, ಲಕ್ಷ್ಮೀಶ್, ಕಶ್ಯಪ್, ಶಾಂತಾರಾಮನ್ ಇದ್ದರು.