ದಸಂಸ ನೇತೃತ್ವದಲ್ಲಿ ಸಂತ್ರಸ್ಥರು ನಾರಾಯಣರಡ್ಡಿ ಕನಕರಡ್ಡಿಗೆ ಮನವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ಸಾಲಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ವಾಸದ ಮನೆಗೆ ತೀವ್ರ ಹಾನಿಗೊಂಡ ಹಿನ್ನೆಲೆಯಲ್ಲಿ ಕೂಡಲೇ ಪರಿಹಾರ ಒದಗಿಸಬೇಕು ಎಂದು ದಸಂಸ ನೇತೃತ್ವದಲ್ಲಿ ಸಂತ್ರಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಕಳಸ ತಾಲೂಕಿನ ಹೊರನಾಡು ಸಮೀಪ ಎಳಕುಂಬರಿ ಗ್ರಾಮದ ವೈ.ಆರ್.ಶಿವಕುಮಾರ್ ಎಂಬುವವರಿಗೆ ಸೇರಿದ ವಾಸದ ಮನೆ ಇದ್ದು, 2019ರ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ಮನೆ ತೀವ್ರ ಹಾನಿಗೊಂಡು ಬಿರುಕು ಬಿಟ್ಟಿಕೊಂಡಿದೆ ಎಂದು ತಿಳಿಸಿದರು.ವಾಸದ ಮನೆಯ ಹಿಂಭಾಗ 30 ಗುಂಟೆಯಲ್ಲಿ ಅಡಕೆ, ಏಲಕ್ಕಿ, ಕಾಫಿ, ಮೆಣಸಿನ ತೋಟಕ್ಕೆ ನೀರು ನುಗ್ಗಿ ಸಂಪೂರ್ಣ ಬೆಳೆಹಾನಿಯಾಗಿದೆ. ಈ ಸಂಬಂಧ ಕಂದಾಯ ಅಧಿಕಾರಿ, ಆರ್.ಐ. ಹಾಗೂ ವಿ.ಐ.ಗಳು ಮನೆ ಹಾನಿಯ ಬಗ್ಗೆ ವರದಿ ಮಾಡಿದ್ದರೂ ಗ್ರಾ.ಪಂ. ಪಿಡಿಓ ಇದುವರೆಗೂ ಭೇಟಿ ನೀಡಿರುವುದಿಲ್ಲ ಎಂದು ದೂರಿದರು.ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಮನೆ ಹಾನಿಗೊಂಡ ಫಲಾನುಭವಿಗಳಿಗೆ ಪರಿಹಾರ ನೀಡಬೇಕೆಂದು ಆದೇಶ ವಿದ್ದರೂ ಯಾವುದೇ ಪರಿಹಾರ ನೀಡಿರುವುದಿಲ್ಲ. ಕೂಲಿ ಕಾರ್ಮಿಕ ಶಿವಕುಮಾರ್‌ಗೆ ವಾಸದ ಮನೆ, ತೋಟ ಬಿಟ್ಟರೇ ಯಾವುದೇ ರೀತಿಯ ಆಸ್ತಿಗಳಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಘಟನಾ ಸಂಚಾಲಕ ಮಂಜುನಾಥ್, ಮುಖಂಡರಾದ ಕುಮಾರ್, ಗಣೇಶ್ ಬೀರೂರು, ಸಂತ್ರಸ್ಥ ಶಿವಕುಮಾರ್ ಹಾಜರಿದ್ದರು.
ಪೋಟೋ ಫೈಲ್ ನೇಮ್ 9 ಕೆಸಿಕೆಎಂ 6ಭಾರೀ ಮಳೆಯಿಂದ ಮನೆ ಕಳೆದುಕೊಂಡಿರುವ ಕಳಸ ತಾಲೂಕಿನ ಹೊರನಾಡು ಸಮೀಪ ಎಳಕುಂಬರಿ ಗ್ರಾಮದ ವೈ.ಆರ್.ಶಿವಕುಮಾರ್ ಅವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮರ್ಲೆ ಅಣ್ಣಯ್ಯ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.