ದ್ಯಾಮವ್ವ ದೇವಿ ಜಾತ್ರೆ ಅದ್ಧೂರಿ ಆಚರಣೆಗೆ ನಿರ್ಧಾರ

KannadaprabhaNewsNetwork | Updated : Dec 25 2023, 01:32 AM IST

ಸಾರಾಂಶ

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಜ. ೨೩ ರಿಂದ ೨೫ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಶಿರಹಟ್ಟಿ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಜರುಗಿದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು.

ಮೂರು ವರ್ಷಗಳಿಗೊಮ್ಮೆ ಶಿರಹಟ್ಟಿ ಗ್ರಾಮದೇವತೆ ಜಾತ್ರೆ

ಶಿರಹಟ್ಟಿ: ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಜ. ೨೩ ರಿಂದ ೨೫ ರ ವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಸದ್ಭಕ್ತರು ಸಹಕರಿಸಬೇಕೆಂದು ಮುಖಂಡ ಎನ್.ಆರ್. ಕುಲಕರ್ಣಿ ಹೇಳಿದರು.

ಶನಿವಾರ ಸಂಜೆ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಜರುಗಿದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜ. ೧೭ರಂದು ರಾತ್ರಿ ೧೨.೩೦ಕ್ಕೆ ಚೌತಮನಿಗೆ ದೇವಿಯನ್ನು ಕರೆದುಕೊಂಡು ಹೋಗುವದು, ಜ. ೨೦ರಂದು ಪಟ್ಟಣದ ಎಲ್ಲ ದೇವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಜ. ೨೨ ರಂದು ದೇವಿಗೆ ನೆದರ ಬರೆಯುವ ಕಾರ್ಯಕ್ರಮ ಜರುಗಲಿದೆ.

ಜ. ೨೩ರಂದು ಮೊದಲನೆ ದಿನ ಹಾಗೂ ಎರಡನೆ ದಿನ ದೇವಿಯು ನಗರದ ತುಂಬೆಲ್ಲ ಗ್ರಾಮ ಸಂಚಾರ ಮಾಡಲಿದ್ದು, ಜ. ೨೫ರಂದು ದೇವಿ ಮೆರವಣಿಗೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ ಕೆಲ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾ ಮಂಗಳಾರತಿ ನಡೆಯಲಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯಲಿರುವ ದ್ಯಾಮವ್ವ ದೇವಿ ಜಾತ್ರೆ ಮಹೋತ್ಸವಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಸಾರ್ವಜನಿಕರ ಸಹಕಾರದೊಂದಿಗೆ ನಡೆಯುತ್ತಲಿದ್ದು, ಎಲ್ಲ ಭಕ್ತ ಸಮೂಹದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಪಟ್ಟಣವನ್ನು ತಳಿರು ತೋರಣಗಳಿಂದ ಶೃಂಗರಿಸಿ ನಮ್ಮ ಮನೆಯ ಅಂಗಳವನ್ನು ಸ್ವಚ್ಚವಾಗಿಡಬೇಕು. ಪಟ್ಟಣ ಪಂಚಾಯ್ತಿ ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಕೆಲ ಭಕ್ತರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳ್ನನು ವ್ಯಕ್ತಪಡಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ಫಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ವರವಿ, ಸುರೇಶ ವರವಿ, ಬಸವಣ್ಣೆಪ್ಪ ತುಳಿ, ರಂಗಪ್ಪ ಗುಡಿಮನಿ, ಉಡಚಪ್ಪ ನೀಲಣ್ಣವರ,

ಬಸವರಾಜ ಹೊಸೂರ, ಸಿ.ಸಿ. ನೂರಶೆಟ್ಟರ, ಮಂಜುನಾಥ ಘಂಟಿ, ಅಜ್ಜು ಪಾಟೀಲ. ಉಮೇಶ ಗಾಣಗೇರ, ಸುರೇಶ ವರವಿ, ಬಸವಣ್ಣೆಪ್ಪ ತುಳಿ, ಯಲ್ಲಪ್ಪ ಇಂಗಳಗಿ, ಬಸವರಾಜ ಚಿಕ್ಕತೋಟದ, ಎಚ್.ಎಂ. ದೇವಗೀರಿ, ಎಂ.ಕೆ. ಲಮಾಣಿ, ಸುರೇಶ ಕಪ್ಪತ್ತನವರ, ಬಸವರಾಜ ಬೋರಶೆಟ್ಟರ, ಎಂ.ಸಿ. ಹಿರೇಮಠ, ಚಂದ್ರಕಾಂತ ಅಕ್ಕಿ, ಬಸವರಾಜ ತುಳಿ, ಬಸವರಾಜ ವಡವಿ, ಈರಣ್ಣ ಮಣಕವಾಡ, ಚನ್ನವೀರಪ್ಪ ಕಲ್ಯಾಣಿ, ಸುರೇಶ ವರವಿ, ಮುತ್ತು ಬಡಿಗೇರ ಮಸೇರಿ ನೂರಾರು ಜನ ಭಕ್ತರು ಹಾಜರಿದ್ದರು.

Share this article