ಗೌರಿಶಂಕರ ಜಾತ್ರೆ ಪ್ರಯುಕ್ತ ದ್ಯಾಮವ್ವನ ಸೋಗು

KannadaprabhaNewsNetwork |  
Published : Dec 17, 2024, 01:02 AM IST
೧೬ಬಿಎಸ್ವಿ೦೧- ಬಸವನಬಾಗೇವಾಡಿಯ ಗೌರಿಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ದ್ಯಾಮವ್ವನ ಸೋಗಿನ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ದ್ಯಾಮವ್ವನ ಸೋಗಿನ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಗೌರಿ-ಶಂಕರ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿಷ್ಠಾಪಿಲಾಗಿದ್ದ ಗೌರಿ-ಶಿವ-ಗಂಗೆ-ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸಿ, ಗೌರಿಗೆ ಉಡಿ ತುಂಬಿ ಭಕ್ತಿಯ ಪರಾಕಾಷ್ಠೆ ಮೆರೆದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:

ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ದ್ಯಾಮವ್ವನ ಸೋಗಿನ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಗೌರಿ-ಶಂಕರ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿಷ್ಠಾಪಿಲಾಗಿದ್ದ ಗೌರಿ-ಶಿವ-ಗಂಗೆ-ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸಿ, ಗೌರಿಗೆ ಉಡಿ ತುಂಬಿ ಭಕ್ತಿಯ ಪರಾಕಾಷ್ಠೆ ಮೆರೆದರು.ಪಟ್ಟಣದ ಮಾರುತಿ ದೇವಸ್ಥಾನದಿಂದ ದ್ಯಾಮವ್ವ ಸೋಗಿನ ಮೆರವಣಿಗೆ ಆರಂಭವಾಗಿ, ಸಂಜೆ ಗೌರಿ-ಶಂಕರ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಡೊಳ್ಳಿನ ಮೇಳ, ಹಲಗೆ ನಾದಕ್ಕೆ ಜನರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಹಿಳೆಯರು ದ್ಯಾಮವ್ವ ಸೋಗಿನ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಬಸಯ್ಯ ಪೂಜಾರಿ(ಮಠಪತಿ) ದ್ಯಾಮವ್ವನ ಸೋಗು ಹಾಕಿದ್ದರು. ಹಣಮಂತ ಕಾಮನಕೇರಿ ಸಾಥ್ ನೀಡಿದರು. ದ್ಯಾಮವ್ವನ ಸೇವಕಿಯರಾಗಿ ನಿತೀಶ ಒಡೆಯರ, ಕಿರಣ ಕಾಮನಕೇರಿ ಸೋಗು ಹಾಕಿದ್ದರೆ, ಮಹೇಶ ಅವಟಿ ಪೂಜಾರಿ ಸೋಗು ಹಾಕಿದ್ದರು.

ವಿಶ್ವನಾಥಯ್ಯ ಕಾಳಹಸ್ತೇಶ್ವರಮಠ, ರಾಹುಲ ಜಗತಾಪ, ಶಿವಪ್ಪ ಹಡಪದ, ಗೋಪಾಲ ಮ್ಯಾಗೇರಿ, ಬಸವಂತ ಅಡಗಿಮನಿ ನೆರವೇರಿಸಿದರು. ಬಂಡಿಯನ್ನು ಹುಲ್ಲಪ್ಪ ಜಾಡರ, ಶ್ರೀಶೈಲ ಕೋಣಿನ, ಶಿವಾನಂದ ಸಾರವಾಡ, ಶಿವಾನಂದ ಬೇವನೂರ, ಸುರೇಶ ಪಡಶೆಟ್ಟಿ, ಬಸವರಾಜ ಯಳಮೇಲಿ, ಶ್ರೀಕಾಂತ ಬಾಡಗಿ, ಈರಪ್ಪ ಗಬ್ಬೂರ ಇತರರು ಎಳೆದರು.

ಮೆರವಣಿಗೆಯಲ್ಲಿ ಸಂಗಪ್ಪ ವಾಡೇದ, ಬಸಣ್ಣ ದೇಸಾಯಿ, ಮಹಾಂತೇಶ ಹಂಜಗಿ, ಶ್ರೀಶೈಲ ಹಿರೇಮಠ, ಬಾಬು ಕುಂಟೋಜಿ, ಮಲ್ಲಯ್ಯ ನರಸಲಗಿಮಠ, ಶಿವಪ್ಪ ಖ್ಯಾಡದ, ಶಿವಾನಂದ ಸಾರವಾಡ, ಕಾಳಹಸ್ತೇಶ್ವರಯ್ಯ ಕಾಳಹಸ್ತೇಶ್ವರಮಠ, ಎ.ಐ.ಮಠಪತಿ, ಶಿವಪ್ಪ ಹೂಗಾರ, ಶರಣಪ್ಪ ನಾಡಗೌಡ, ಪಾವೆಡಪ್ಪ ಕರಮಾಳಕರ ಮುಂತಾದವರು ಭಾಗವಹಿಸಿದ್ದರು.ದ್ಯಾಮವ್ವನ ಸೋಗಿನ ಮೆರವಣಿಗೆ ಬಳಿಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಯಲ್ಲಿ ಸಂಜೆ ವಿಸರ್ಜಿಸಲಾಯಿತು. ಮೆರವಣಿಗೆ ಸಾಗುವ ರಸ್ತೆಯ ಎರಡು ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಚುನಮರಿ, ಬಾರಿಕಾಯಿ ತೂರಿ ಭಕ್ತಿಭಾವ ಮೆರೆದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ