ಕನ್ನಡಪ್ರಭ ವಾರ್ತೆ ಹೊಸಪೇಟೆ
ಬೆಂಗಳೂರಿನ ಮಹದೇವಪುರ ಕ್ಷೇತ್ರದ ಒಂದೇ ಮನೆಯಲ್ಲಿ 80 ಮತಗಳು ಕಂಡುಬಂದಿವೆ. ಈ ಮತಗಳಲ್ಲಿ ಕೇವಲ ಐದು ಮತಗಳು ಮಾತ್ರ ಕರ್ನಾಟಕಕ್ಕೆ ಸಂಬಂಧಿಸಿದೆ. ಇನ್ನು ಉಳಿದ 75 ಮತಗಳು ಬಿಹಾರ ಮೂಲದಾಗಿವೆ. ಈ ವಿಚಾರ ಅಲ್ಲಿಯ ನಿವಾಸಿಗಳಿಗೆ ತಿಳಿಯದಾಗಿದೆ. ದೇಶಾದ್ಯಂತ ಈ ಮತ ಕಳವು ಪ್ರಕರಣ ವಿರೋಧಿಸಿ ಚುನಾವಣೆ ಆಯುಕ್ತರ ಭೇಟಿಗೆ ಹೊರಟ ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷ ಎ.ಎ. ರಹೀಂ ಮತ್ತು ಸಂಗಡಿಗರನ್ನು ಬಂಧನ ಮಾಡಲಾಗಿದೆ. ಇದು ಖಂಡನಿಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರನ್ನ ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ. ಮತ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಿಯಾದ ಎಲ್ಲರಿಗೆ ಶಿಕ್ಷೆ ಆಗಬೇಕು. ಕಳ್ಳ ಮತಗಳನ್ನು ಡಿಲೀಟ್ ಮಾಡುವುದರ ಮೂಲಕ ಪ್ರಜಾಪ್ರಭುತ್ವ ನೆಲೆಸುವಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು. ಜನ ವಿರೋಧಿ ನೀತಿ ಕೈ ಬಿಡಬೇಕು, ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಡಿವೈಎಫ್‌ಐನ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ಬಂಡೆ ತಿರುಕಪ್ಪ, ಮುಖಂಡರಾದ ಅಂಬರೀಷ್, ನಿಖಿಲ್, ಪವನ್ ಕುಮಾರ್ಶಿವರೆಡ್ಡಿ, ಉಮಾ ಮಹೇಶ್ವರ, ಹೇಮಂತ್ ನಾಯಕ್ ಮತ್ತಿತರರಿದ್ದರು.