ಹಂಪಿಗೆ ಡಿವೈಸ್ಪಿ ಕಚೇರಿ, ಆನೆಗೊಂದಿಯಲ್ಲಿ ಪೊಲೀಸ್ ಠಾಣೆ ಸ್ಥಾಪಿಸಿ

KannadaprabhaNewsNetwork |  
Published : Mar 15, 2025, 01:01 AM IST
14ುಲು10 | Kannada Prabha

ಸಾರಾಂಶ

ಹಂಪಿ ಹಾಗೂ ಆನೆಗೊಂದಿ ವಿಶ್ವವಿಖ್ಯಾತಿ ಮತ್ತು ಐತಿಹಾಸಿಕ ತಾಣಗಳಾಗಿದ್ದು, ಪ್ರತಿ ವರ್ಷ 40 ಲಕ್ಷ ಸ್ವದೇಶಿ, ವಿದೇಶದಿಂದ 3 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈ ಕಾರಣದಿಂದಾಗಿ ಇಲ್ಲಿನ ಪ್ರವಾಸಿಗರು ಹಾಗೂ ಸ್ಥಳೀಯ ಜನರ ಸುರಕ್ಷತೆ ಅಗತ್ಯತೆವಿದೆ.

ಗಂಗಾವತಿ:

ಹಂಪಿಯಲ್ಲಿ ಪೊಲೀಸ್ ಉಪವಿಭಾಗ ಕಚೇರಿ ಹಾಗೂ ಆನೆಗೊಂದಿಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪಿಸುವಂತೆ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಗವಿಯಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿಯಾದ ಉಭಯ ಶಾಸಕರು, ಹಂಪಿ ಹಾಗೂ ಆನೆಗೊಂದಿ ವಿಶ್ವವಿಖ್ಯಾತಿ ಮತ್ತು ಐತಿಹಾಸಿಕ ತಾಣಗಳಾಗಿದ್ದು, ಪ್ರತಿ ವರ್ಷ 40 ಲಕ್ಷ ಸ್ವದೇಶಿ, ವಿದೇಶದಿಂದ 3 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈ ಕಾರಣದಿಂದಾಗಿ ಇಲ್ಲಿನ ಪ್ರವಾಸಿಗರು ಹಾಗೂ ಸ್ಥಳೀಯ ಜನರ ಸುರಕ್ಷತೆ ಅಗತ್ಯತೆವಿದೆ ಎಂದು ತಿಳಿಸಿದ್ದಾರೆ.

ನಾನು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಹಂಪಿಯಲ್ಲಿ ಪೊಲೀಸ್ ಉಪವಿಭಾಗ ಕಚೇರಿ ಸ್ಥಾಪಿಸಿ ಗಸ್ತು ತಿರುಗಲು ಪೊಲೀಸ್ ಸಿಬ್ಬಂದಿಗೆ ಬೈಕ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ತದನಂತರ ಬಂದ ಸರ್ಕಾರ ಈ ಪೊಲೀಸ್ ವಿಭಾಗ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಿದ್ದು, ಇದರಿಂದ ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಮಸ್ಯೆಯಾಗಿದೆ ಜನಾರ್ದನ ರೆಡ್ಡಿ ಸಿಎಂಗೆ ಮನವರಿಕೆ ಮಾಡಿದರು.

ಸಾಣಾಪುರದಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ನಡೆದಿದ್ದು ಓರ್ವನ ಕೊಲೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಂಪಿ ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಮತ್ತೆ ಪೊಲೀಸ್ ಉಪವಿಭಾಗ ಕಚೇರಿ ಪುನಃ ಸ್ಥಾಪಿಸಬೇಕು. ಆನೆಗುಂದಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಶಾಸಕ ಎನ್‌.ಟಿ. ಶ್ರೀನಿವಾಸ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು