ಜಿಲ್ಲೆಯಲ್ಲಿ 26376 ಇ-ಚಲನ್‌ ಕೇಸ್: ₹71,77,250 ಸಂಗ್ರಹ

KannadaprabhaNewsNetwork |  
Published : Sep 15, 2025, 01:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡ ಕೇಸ್‌ಗಳಿಗೆ ಆ.23ರಿಂದ ಸೆ.12ರವರೆಗೆ ಶೇ.50 ರಿಯಾಯಿತಿ ಘೋಷಿಸಿದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ 26376 ಇ-ಚಲನ್ ಪ್ರಕರಣಗಳಿಂದ ಒಟ್ಟು ₹71,77,250 ಪಾವತಿಯಾಗಿದೆ.

- ಇ-ಚಲನ್‌ನಲ್ಲಿ ದಾಖಲಾದ ಪ್ರಕರಣ, ಶೇ.50 ರಿಯಾಯಿತಿ ಘೋಷಿಸಿದ್ದ ಹಿನ್ನೆಲೆ ದಂಡ ಪಾವತಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡ ಕೇಸ್‌ಗಳಿಗೆ ಆ.23ರಿಂದ ಸೆ.12ರವರೆಗೆ ಶೇ.50 ರಿಯಾಯಿತಿ ಘೋಷಿಸಿದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ 26376 ಇ-ಚಲನ್ ಪ್ರಕರಣಗಳಿಂದ ಒಟ್ಟು ₹71,77,250 ಪಾವತಿಯಾಗಿದೆ.

ಜಿಲ್ಲೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸಲು ಶೇ.50ರಷ್ಟು ರಿಯಾಯಿತಿ ಆದೇಶವು ಆ.23 ರಿಂದ ಸೆ.12ರವರೆಗೆ ಜಾರಿಯಲ್ಲಿದ್ದು, ಪೈಕಿ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಸಂಚಾಲ ಪೊಲೀಸ್ ಸೇರಿದಂತೆ ಎಲ್ಲಾ ಠಾಣೆಗಳಲ್ಲಿ ಹಾಗೂ ಪೋಸ್ಟ್ ಆಫೀಸ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್‌ ದಂಡವನ್ನು ವಾಹನ ಸವಾರರು, ಚಾಲಕರು, ಮಾಲೀಕರು ಪಾವತಿಸಿ, ಅವಕಾಶ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

(ಬಾಕ್ಸ್‌)

ಶೇ.50 ರಿಯಾಯಿತಿ ಅವಕಾಶವಿದ್ದ ದಿನಗಳಲ್ಲಿ ಕ್ರಮವಾಗಿ ದಿನಾಂಕ, ಕೇಸ್, ದಂಡ ಪಾವತಿ ವಿವರ ಹೀಗಿದೆ. ಆ.23ರಂದು 99 ಕೇಸ್‌ಗಳಿಂದ 51,500 ರು.

ಆ.24ರಂದು 103 ಕೇಸ್ ಗಲಿಂದ 47000 ರು.

ಆ.25ರಂದು 729 ಕೇಸ್‌ನಿಂದ 1,92,250 ರು.

ಆ.26ರಂದು 484 ಕೇಸ್‌ನಿಂದ 1,31,000 ರು.

ಆ.27ರಂದು 200 ಕೇಸ್‌ನಿಂದ 54250 ರು.

ಆ.28ರಂದು 716 ಕೇಸ್‌ನಿಂದ 1,89,000 ರು.

ಆ.29ರಂದು 733 ಕೇಸ್‌ನಿಂದ 204250 ರು.

ಆ.30ರಂದು 855 ಕೇಸ್ ನಿಂದ 234500 ರು.

ಆ.31ರಂದು 450 ಕೇಸ್‌ನಿಂದ 116250 ರು.

ಸೆ.1ರಂದು 861 ಕೇಸ್‌ನಿಂದ 230250 ರು.

ಸೆ.2ರಂದು 779 ಕೇಸ್‌ನಿಂದ 208000 ರು.

ಸೆ.3ರಂದು 1023 ಕೇಸ್‌ನಿಂದ 282750 ರು.

ಸೆ.4ರಂದು 877 ಕೇಸ್‌ನಿಂದ 237500 ರು.

ಸೆ.5ರಂದು 542 ಕೇಸ್ ನಿಂದ 150750 ರು.

ಸೆ.6ರಂದು 1100 ಕೇಸ್‌ನಿಂದ 292500 ರು.

ಸೆ.7ರಂದು 467 ಕೇಸ್‌ನಿಂದ 129000 ರು.

ಸೆ.8ರಂದು 1460 ಕೇಸ್ ನಿಂದ 403500 ರು.

ಸೆ.9ರಂದು 2028 ಕೇಸ್‌ನಿಂದ 542500 ರು.

ಸೆ.10ರಂದು 3133 ಕೇಸ್‌ನಿಂದ 829750 ರು.

ಸೆ.11ರಂದು 3446 ಕೇಸ್ ನಿಂದ 937000 ರು.

ಸೆ.12ರಂದು 6291 ಕೇಸ್‌ನಿಂದ 1714750 ರು. ಒಟ್ಟು 26376 ಕೇಸ್‌ನಿಂದ ₹71,77,250 ಸಂಗ್ರಹವಾಗಿದೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ