ಶೀಘ್ರ ಪತ್ತೆಯಿಂದ ಸ್ತನ ಕ್ಯಾನ್ಸರ್‌ನಿಂದ ಗುಣಮುಖ: ತೀರ್ಥಹಳ್ಳಿ ಎಂಐಒ ಆಸ್ಪತ್ರೆಯ ಡಾ.ಭವ್ಯ

KannadaprabhaNewsNetwork |  
Published : Jan 13, 2025, 12:46 AM IST
ಪೊಟೋ: 11ಎಸ್‌ಎಂಜಿಕೆಪಿ01 ತೀರ್ಥಹಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿವಮೊಗ್ಗದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ,ಮಥುರಾ  ಪ್ಯಾರಡೈಸ್ ರಜೆತೋತ್ಸವ ಸಮಿತಿ, ತೀರ್ಥಹಳ್ಳಿಯ ಎಂಐ ಒ ಆಸ್ಪತ್ರೆ ಮತ್ತು ಸಾಗರದ ಶಾರದಾ ಮಹಿಳಾ ಮಂಡಳಿ ಶೃಂಗೇರಿ ಮಠದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತ ಅರಿವು ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಎಂಐ ಒ ಆಸ್ಪತ್ರೆಯ ತಜ್ಞೆ ಡಾ:ಭವ್ಯ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಸ್ವಯಂ ತಪಾಸಣೆಯಿಂದ ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ತೀರ್ಥಹಳ್ಳಿ ಎಂಐಒ ಆಸ್ಪತ್ರೆಯ ತಜ್ಞೆ ಡಾ.ಭವ್ಯ ಹೇಳಿದರು. ಶಿವಮೊಗ್ಗದಲ್ಲಿ ಕ್ಯಾನ್ಸರ್ ಕುರಿತ ಅರಿವು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷತೆಯ ಮೂಲಕ ವಿವರಿಸಿ ಮಾತನಾಡಿದರು.

ಸಾಮಾನ್ಯ ಆರೋಗ್ಯ, ಕ್ಯಾನ್ಸರ್ ಅರಿವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ವಯಂ ತಪಾಸಣೆಯಿಂದ ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ತೀರ್ಥಹಳ್ಳಿ ಎಂಐಒ ಆಸ್ಪತ್ರೆಯ ತಜ್ಞೆ ಡಾ.ಭವ್ಯ ಹೇಳಿದರು .

ತೀರ್ಥಹಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿವಮೊಗ್ಗದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ,ಮಥುರಾ ಪ್ಯಾರಡೈಸ್ ರಜೆತೋತ್ಸವ ಸಮಿತಿ, ತೀರ್ಥಹಳ್ಳಿಯ ಎಂಐ ಒ ಆಸ್ಪತ್ರೆ ಮತ್ತು ಸಾಗರದ ಶಾರದಾ ಮಹಿಳಾ ಮಂಡಳಿ ಶೃಂಗೇರಿ ಮಠದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತ ಅರಿವು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷತೆಯ ಮೂಲಕ ವಿವರಿಸಿ ಮಾತನಾಡಿದರು.

ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಭಯ ಹುಟ್ಟಿಸುವ ಕಾಯಿಲೆಯಾಗಿದೆ. ಆದರೆ ಮುಂಜಾಗ್ರತೆಯಿಂದ ಬೇಗನೆ ಕಂಡುಹಿಡಿದರೆ ಖಂಡಿತ ಗುಣಮುಖರಾಗಬಹುದು, ವಿಶೇಷವಾಗಿ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ ಎಂದರು.

ಮಹಿಳೆಯರು ಕನ್ನಡಿ ಮುಂದೆ ನಿಂತು ತಮ್ಮ ಸ್ತನಗಳನ್ನು ತಾವೇ ತಪಾಸಣೆ ಮಾಡಿಕೊಂಡು ಗಂಟುಗಳ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂದರು.

ಇದೇ ಸಂದರ್ಭದಲ್ಲಿ ಸಾಗರದ ಶೃಂಗೇರಿ ಮಠದ ಶಾರದ ಮಂಡಳಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವೆಕಿ ಸಹೃದಯಿ ರಾಜಶ್ರೀ ಅಶ್ವಿನಿ ಕುಮಾರ್ ಅವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ರಾಜಶ್ರೀ ಅಶ್ವಿನಿ ಕುಮಾರ್ ಮಾತನಾಡಿ, ಕ್ಯಾನ್ಸರ್ ಬಗ್ಗೆ ಮಹಿಳೆಯರು ತಲ್ಲಣ ಗೊಳ್ಳುವ ಕಾಲವಿತ್ತು, ಈಗ ಇದಕ್ಕೆ ವಿವಿಧ ರೀತಿಯ ಆಧುನಿಕ ಚಿಕಿತ್ಸಾ ಪದ್ಧತಿಗಳಿವೆ. ರೋಗ ಬೇಗ ಪತ್ತೆ ಹಚ್ಚುವುದರಿಂದ ಕ್ಯಾನ್ಸರ್‌ ಅನ್ನು ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಮಹತ್ವದ ವಿಷಯಗಳನ್ನು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದರು.

ಶೃಂಗೇರಿ ಮಠದ ಶಾರದಾ ಮಹಿಳಾ ಮಂಡಳಿಯ ಸುಮಾರು 60ಕ್ಕೂ ಹೆಚ್ಚು ಮಹಿಳೆಯರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಗರದ ಮಹಾಬಲೇಶ್ವರ, ಗೋಪಿ ದೀಕ್ಷಿತ್, ತರುಣೋದಯ ಘಟಕದ ಶ್ರಿವತ್ಸಾ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎನ್.ದಿವ್ಯ ಜ್ಯೋತಿ, ಅಂಕುಶ್ ಸೇರಿ ಹಲವರಿದ್ದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ