ಧಾರವಾಡ:
ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ನೂತನ ಧಾರವಾಡ ಅಥರ್ವ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಅವಸರದ ಜೀವನದಲ್ಲಿ ಹಣ ಗಳಿಕೆಗೆ ಪ್ರತಿಯೊಬ್ಬರು ಹೆಣಗಾಡುತ್ತಿದ್ದಾರೆ. ಹಗಲು-ರಾತ್ರಿ ಎನ್ನದೇ ದುಡಿಯುವ ಸ್ಥಿತಿ ಇದೆ. ಹಣ ಗಳಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ, ಆರೋಗ್ಯ ಗಳಿಸಲು ಯಾವುದೇ ಮಾರ್ಗಗಳಿಲ್ಲ. ಆದ್ದರಿಂದ ಯಾರೊಬ್ಬರು ತಮ್ಮ ಆರೋಗ್ಯ ನಿರ್ಲಕ್ಷಿಸಿ ಹಣ ಗಳಿಸಲು ಮುಂದಾಗಬಾರದ ಎಂಬ ಸಲಹೆಯನ್ನು ಸ್ವಾಮೀಜಿ ನೀಡಿದರು.
ನೂತನ ಸಂಘ ಉದ್ಘಾಟಿಸಿದ ಶಾಸಕ ಎನ್.ಎಚ್. ಕೋನರಡ್ಡಿ, ಧಾರವಾಡದ ಗ್ರಾಹಕ ವಸ್ತುಗಳ, ಕಿರಾಣಿ ಸೇರಿದಂತೆ ಎಲ್ಲ ವರ್ತಕರು ಸೇರಿಕೊಂಡು ರಚಿಸಿಕೊಂಡಿರುವ ಸೊಸೈಟಿಗೆ ಬೇಕಾದ ಅನುಕೂಲತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಹೊಸಯಲ್ಲಾಪೂರ ಹಿರೇಮಠದ ಗದಿಗಯ್ಯ ಸ್ವಾಮೀಜಿ ಹಾಗೂ ಶಶಾಂಕ ಸ್ವಾಮೀಜಿ ಮಾತನಾಡಿ, ಇಡೀ ನಮ್ಮ ಸಮಾಜ ಸಹಕಾರ ತತ್ವದ ಮೇಲೆ ನಿಂತಿದ್ದು ನೂತನ ಸಂಘವು ಜನರ ಸಹಕಾರ ಪಡೆದು ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.
ಮೇಯರ್ ಅಶ್ವಿನಿ ಪಾಟೀಲ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕರಾದ ಎ.ಬಿ. ದೇಸಾಯಿ, ಸೀಮಾ ಮಸೂತಿ, ಹಿರಿಯ ನ್ಯಾಯವಾದಿ ಪ್ರಕಾಶ ಉಡಿಕೇರಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೋಟೂರ, ಪಾಲಿಕೆ ಸದಸ್ಯರಾದ ಶಂಭುಗೌಡ ಸಾಲಮನಿ, ಪ್ರಕಾಶ ನಾಝರೆ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಪ್ಪ ಹೂಸೂರ ಮಾತನಾಡಿದರು.
ಇದೇ ವೇಳೆ ಹಿರಿಯ ವ್ಯಾಪಾರಸ್ಥರಾದ ಭೂರಸಿಂಗ್ ರಾಜಪುರೋಹಿತ, ಸುಭಾಸ ಆಕಳವಾಡಿ, ಚಂದ್ರಶೇಖರ ಭೈರಪ್ಪನವರ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಅಥರ್ವ ಸಹಕಾರಿ ಅಧ್ಯಕ್ಷ ಮಂಜುನಾಥ ಹಿರೇಮಠ ಪ್ರಥಮ ಸರ್ವ ಸಾಧಾರಣೆ ಸಭೆಯ ವರದಿ ವಾಚಿಸಿದರು. ಸಹಕಾರಿ ಸಿಇಒ ಶ್ವೇತಾ ಹಿರೇಮಠ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಸಂಘದ ನಿರ್ದೇಶಕರುಗಳು, ಸ್ಥಳೀಯ ವ್ಯಾಪಾರಸ್ಥರು ಇದ್ದರು.