ಸಕಾಲಕ್ಕೆ ಸಾಲ ಮರುಪಾವರಿಸಿ ಬ್ಯಾಂಕ್‌ ವಿಶ್ವಾಸಕ್ಕೆ ಪಾತ್ರರಾಗಿ

KannadaprabhaNewsNetwork |  
Published : Sep 26, 2024, 10:35 AM IST
ಲೋಕಾಪುರ | Kannada Prabha

ಸಾರಾಂಶ

ಸಹಕಾರ ಸಂಘದ ಮೂಲಕ ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಪಾವತಿಸಲು ಮುಂದಾಗುವ ಮೂಲಕ ಬ್ಯಾಂಕಿನ ವಿಶ್ವಾಸಕ್ಕೆ ಗ್ರಾಹಕರು ಪಾತ್ರರಾಗಬೇಕು ಎಂದು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಅರ್ಜುನ ಕೊಪ್ಪದ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಹಕಾರ ಸಂಘದ ಮೂಲಕ ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಪಾವತಿಸಲು ಮುಂದಾಗುವ ಮೂಲಕ ಬ್ಯಾಂಕಿನ ವಿಶ್ವಾಸಕ್ಕೆ ಗ್ರಾಹಕರು ಪಾತ್ರರಾಗಬೇಕು ಎಂದು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಅರ್ಜುನ ಕೊಪ್ಪದ ಹೇಳಿದರು.

ಸಮೀಪದ ಲಕ್ಷಾನಟ್ಟಿ ಗ್ರಾಮದ ೨೦೨೩-೨೪ನೇ ಸಾಲಿನ ಸರ್ವಸಾಧಾರಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಒಟ್ಟು ₹೧೭.೯೯ ಲಕ್ಷ ಲಾಭ ಸಂಘ ಮಾಡಿದೆ. ಇದಕ್ಕೆ ಎಲ್ಲ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಗೆ ಸಹಕಾರ ಅಗತ್ಯ ಮುಂಬರುವ ವರ್ಷಗಳಲ್ಲಿ ತಮ್ಮೆಲ್ಲರ ಸಹಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭಗಳಿಸುವ ಗುರಿ ಹೊಂದಲಾಗಿದೆ ಎಂದರು.

೨೦೨೩-೨೪ ನೇ ಸಾಲಿನಲ್ಲಿ ಶ್ರೀ ಬಸವೇಶ್ವರ ಕಿಸಾನ ಕ್ರೆಡಿಟ್ ಕಾರ್ಡ್‌ ಹೊಂದಿರುವ ೯೧೨ ಸದಸ್ಯರನ್ನು ವೈಯಕ್ತಿಕ ಅಪಘಾತ ವಿಮಾ ಯೋಜನೆಯಡಿಯಲ್ಲಿ ಅಳವಡಿಸಲಾಗಿದೆ. ಈ ಸಂಸ್ಥೆಯ ಮಾಲೀಕರಾದ ರೈತರು ಮತ್ತು ಗ್ರಾಹಕರು ನಮ್ಮ ಸಿಬ್ಬಂದಿ ಅವರಿಗೆ ಸಹಕರಿಸಿ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿ ಠೇವು ಇಟ್ಟು ಈ ಸಂಸ್ಥೆ ಬೃಹದ್ಧಾಕಾರವಾಗಿ ಬೆಳೆಯಲು ಕಾರಣಿಭೂತರಾಗಿರುತ್ತೀರಿ ಎಂದರು.

ಮುಖ್ಯ ಕಾರ್ಯನಿರ್ವಾಹಕ ಕೃಷ್ಣಪ್ಪಗೌಡ ಪಾಟೀಲ ಮಾತನಾಡಿ, ಸರಕಾರ ರೈತರಿಗೆ ನೀಡುವ ಅಲ್ಪಾವಧಿ ಸಾಲಕ್ಕೆ ಶೇ.೦ ಬಡ್ಡಿ ದರ ಜಾರಿಗೊಳಿಸಿದೆ. ಆದ್ದರಿಂದ ನೀವು ಪಡೆದಿರುವ ಬೆಳೆಸಾಲವನ್ನು ಪಡೆದ ದಿನಾಂಕದಿಂದ ೩೬೩ ದಿನಗಳ ಒಳಗಾಗಿ ಪೂರ್ಣ ಮರುಪಾವತಿ ಮಾಡಿದರೆ ಮಾತ್ರ ಶೇ.೦ ರ ಬಡ್ಡಿ ದರದ ಸೌಲಭ್ಯ ದೊರೆಯುತ್ತದೆ ಎಂದು ಹೇಳಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ರಂಗವ್ವ ಪಾಟೀಲ, ನಿರ್ದೇಶಕರಾದ ಭೀಮನಗೌಡ ಪಾಟಿಲ, ಗೋಪಾಲ ಪಾಟೀಲ, ಸುನೀಲಕುಮಾರ ನ್ಯಾಮಗೌಡ್ರ, ಅಶೋಕ ಹನಗಲಿ, ಬಸವಂತಪ್ಪ ಪೂಜಾರ, ನಾಗಪ್ಪ ಕೊಪ್ಪದ, ರುಕ್ಷö್ಮವ್ವ ಪಾಟೀಲ, ಕಲ್ಲಪ್ಪ ಮಾದರ, ಗೋವಿಂದಪ್ಪ ಬಡಕಲಿ ಇದ್ದರು.

ಸಂಘದ ಹಿತೈಶಿಗಳಾದ ಶ್ರೀಕಾಂತಗೌಡ ಪಾಟೀಲ, ಪರಮಾನಂದ ಕನಕಪ್ಪನವರ, ಅರ್ಜುನಗೌಡ ವಾ ಪಾಟೀಲ, ಕೃಷ್ಣಪ್ಪಗೌಡ ಶಿ ಪಾಟೀಲ, ಗೋಪಾಲ ಮಾಳೇದ, ರಾಮಣ್ಣ ಬಾವಲತ್ತಿ, ಶ್ರೀಕಾಂತ ಪೂಜಾರ, ಶ್ರೀನಿವಾಸ ಪಾಟೀಲ, ತುಕಾರಾಮ ಪಾಟೀಲ, ಅರುಣ ಜೈನರ, ಹಣಮಂತ ಗಸ್ತಿ, ಛಾಯಪ್ಪಗೌಡ ಪಾಟೀಲ, ಸುಭಾಸ ತುಳಸಿಗೇರಿ, ಮುದ್ನೂರ, ರಾಮಲಿಂಗಪ್ಪ ಕಟ್ಟಿ ಸಂಘದ ಸಿಬ್ಬಂದಿಗಳಾದ ಸಿದ್ದಾರೂಢ ಪೂಜಾರ, ಶಿವನಗೌಡ ಪಾಟೀಲ, ಆನಂದ ಪಾಟೀಲ, ಅನೀಲ ಕನಕಪ್ಪನವರ ಹಾಗೂ ಲಕ್ಷಾನಟ್ಟ, ಅರಳಿಕಟ್ಟಿ, ವರ್ಚಗಲ್ ಗ್ರಾಮದ ರೈತರು ಹಾಗೂ ಶೇರುದಾರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ