ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿಯಲ್ಲಿ ಆಯೋಜಿಸಿದ್ದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕ, ಶ್ರೀಗುರು ಸಂಸ್ಮರಣೋತ್ಸವ ರಾಜ್ಯ ಮಟ್ಟದ ಜಾನಪದ ಕಲಾ ಮೇಳದ ಸಮಾರೋಪದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ಅಮೂಲ್ಯವಾದದ್ದು, ಶಿಷ್ಟ ಸಾಹಿತ್ಯವನ್ನು ಮೀರಿಸುವ ಜಾನಪದ ಸಾಹಿತ್ಯ ಎಂದೆಂದಗೂ ಬತ್ತಬಾರದು ಎಂದರು.
ಭೈರವೈಕ್ಯ ಶ್ರೀಗಳು ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ. ಈ ನೆಲದ ತಾಯಂದಿರು ಜಾನಪದ ಸಾಹಿತ್ಯದ ಬೇರು. ಜಾನಪದ ಕಲಾ ಮೇಳವನ್ನು ನಾಡಿನ ಹಲವು ಭಾಗಗಳಿಂದ ಕಲಾವಿದರು ಬಂದು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ನಮ್ಮ ಮಠ ಎಂದೆಂದಿಗೂ ಜಾನಪದ ಕಲಾವಿದರರಿಗೆ ಪ್ರೋತ್ಸಾಹ ನೀಡಲಿದೆ ಎಂದರು.ಭಾರತ ರೈತರ ದೇಶ. ಶೇ.70ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರೈತರ ಬದುಕು ಹಸನಾಗಿಸಲು ಹೆಚ್ಚು ಕೆಲಸ ಮಾಡಲಿ. ಮಾಯಸಂದ್ರ ಗ್ರಾಮದಲ್ಲಿ ಈ ವರ್ಷದಿಂದ ಕೃಷಿ ವಿಜ್ಞಾನ ಕಾಲೇಜು ಆರಂಭವಾಗಿದೆ. ಕಾಲೇಜು ಸ್ಥಾಪನೆಗೆ ಚಲುವರಾಯಸ್ವಾಮಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಗುರು ಸಂಸ್ಮರಣೋತ್ಸವ:
ವೇದಿಕೆಯಲ್ಲಿ ಜಾನಪದ ಕಲಾವಿದರಿಗೆ ಶ್ರೀಮಠದಿಂದ ವಸ್ತ್ರ, ಬಹುಮಾನ ಪಡೆದ ಕಲಾತಂಡಗಳಿಗೆ ಬಹುಮಾನವನ್ನು ಶ್ರೀಗಳು ವಿತರಿಸಿದರು. ಜಾನಪದ ಕಲಾವಿದರಿಂದ ಜಾನಪದ ಕಲಾ ಪ್ರದರ್ಶನ ನಡೆಯಿತು.ಜಾನಪದ ಕಲಾ ಮೇಳಕ್ಕೆ ತೆರೆ
ಜಾನಪದ ಮೇಳಕ್ಕೆ ರಾಜ್ಯದ ನಾನಾ ಮೂಲೆಗಳಿಂದ 6100 ಕಲಾವಿದರು, 378 ಕಲಾ ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಜಾನಪದ ಜಾತ್ರೆಯಲ್ಲಿ ಎಲ್ಲಿ ನೋಡಿದರಲ್ಲಿ ಕಲಾ ಪ್ರದರ್ಶನ ಮೇಳೈಸಿತು. ಕಲಾವಿದರ ದಂಡೇ ಬೀಡು ಬಿಟ್ಟು, ನಮ್ಮ ಪೂರ್ವಜ್ಜರ ಕಲೆಯನ್ನು ಪ್ರದರ್ಶನ ಮಾಡಿದರು.