ದೇವನಹಳ್ಳಿ: ಪ್ರತಿಯೊಬ್ಬರೂ ಹಣ ಸಂಪಾದನೆ ಮಾಡುತ್ತಾರೆ. ಆದರೆ ಗೌರವ ಸಂಪಾದಿಸುವುದು ಕಷ್ಟದ ಕೆಲಸ. ಯಾವುದೇ ವೃತ್ತಿಯಲ್ಲಿರಲಿ ಸಮಾಜದ ಏಳಿಗೆಗೆ ದುಡಿಯಬೇಕು ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಹೇಳಿದರು.
ಇಲ್ಲಿನ ಡಾ.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಯಾದವ ಯುವ ವೇದಿಕೆಯ ದಶಮಾನೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಯಾದವ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆ ಸಮಾಜದ ಆಸ್ತಿ, ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಸಮುದಾಯದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದುವರಿಯಬೇಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಂ.ನಾಗರಾಜ ಯಾದವ್ ಮಾತನಾಡಿ, ಯಾವುದೇ ಪಕ್ಷದಲ್ಲಿರಲಿ ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಅಲ್ಲದೆ ನಾವು ಯಾವುದೇ ಪಕ್ಷ ಮತ್ತು ಸಂಘಟನೆಯಲ್ಲಿರಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ಸ್ಥಳೀಯರ ಸಹಕಾರ ರಾಜ್ಯ ಯಾದವ ಸಂಘದವರು ಪಡೆಯಬೇಕಿತ್ತು ಎಂದು ಆಕ್ಷೇಪಿಸಿದರು .ರಾಜ್ಯ ಕಾರ್ಯಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಕಾಡು ಗೊಲ್ಲರು ಮತ್ತು ಊರ ಗೊಲ್ಲರು ಬೇರೆ ಅಲ್ಲ. ಎಲ್ಲರೂ ಒಂದೇ. ಇತರೆ ಸಮಾಜದವರಿಂದ ಶೋಷಣೆ ತಪ್ಪಬೇಕು ಎಂದರು. ಪೊಲೀಸ್ ಉಪ ಅಧೀಕ್ಷಕ ಬಸವರಾಜು, ರಾಜ್ಯಾಧ್ಯಕ್ಷ ಪಿಕೆಎಸ್ ಶ್ರೀನಿವಾಸ್, ಅಖಿಲ ಭಾರತ ಯಾದವ ಮಹಾ ಸಂಸ್ಥಾನ ಪೀಠಾಧ್ಯಕ್ಷ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ನೆಲಮಂಗಲ ವನಕಲ್ ಮಠದ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಕೀಲ ಡಾ. ಮುನಿರಾಜು, ಬೆಂಗಳೂರು ಶಿವಲಿಂಗಪ್ಪ, ಸಮಾಜ ಸೇವಕ ಡಾ. ಲಕ್ಷ್ಮೀ ನಾರಾಯಣ್, ದೊಡ್ಡಬಳ್ಳಾಪುರದ ಸಾಹಿತಿ ಕಣಿವೇಪುರ ಸುನಿಲ್‌ಕುಮಾರ್, ರಾಷ್ಟ್ರಪ್ರಶಸ್ತಿ ವಿಜೇತ ನಾರಾಯಣಸ್ವಾಮಿ, ಪ್ರಗತಿಪರ ರೈತ ಅಂಬರೀಶ್ ತುಮಕೂರು ಜಾನಪದ ಕಲಾವಿದ ಮೋಹನ್‌ಕುಮಾರ್, ಬಳ್ಳಾರಿಯ ಚಿತ್ರಕಲಾ ಕಲಾವಿದರಾದ ತಿರುಮಲ, ದೇವನಹಳ್ಳಿಯ ಸಾಹಿತಿ ಮುನಿರಾಹ್ ಯಾದವ್ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫೋಟೋ1:ದೇವನಹಳ್ಳಿ ಡಾ. ಅಂಬೇಡ್ಕರ್ ಭವನದಲ್ಲಿ ಯಾದವ ಯುವ ವೇದಿಕೆಯ ದಶಮಾನೋತ್ಸವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಉದ್ಘಾಟಿಸಿದರು.
(ಈ ಫೋಟೋ ಪ್ಯಾನಲ್‌ನಲ್ಲಿ ಬಳಸಿ)ಫೋಟೋ2:
ದೇವನಹಳ್ಳಿಯಲ್ಲಿ ಯಾದವ ಯುವ ವೇದಿಕೆ ದಶಮಾನೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಯಾದವ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಖಿಲ ಭಾರತ ಯಾದವ ಮಹಾ ಸಂಸ್ಥಾನ ಪೀಠಾಧ್ಯಕ್ಷ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ನೆಲಮಂಗಲ ವನಕಲ್ ಮಠದ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.