ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ : ವಲ್ಲಭಭಟ್ಟ ಜೋಶಿ

KannadaprabhaNewsNetwork |  
Published : Jul 14, 2024, 01:33 AM IST
ಸುರಪುರ ತಾಲೂಕಿನ ದೇವರಗೋನಾಲ ತರಬೇತಿ ಕೇಂದ್ರದಲ್ಲಿ ಬೈಫ್ ವತಿಯಿಂದ ಮಹಿಳೆಯರಿಗೆ ಅಪೌಷ್ಟಿಕದ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಮಹಿಳೆಯರು, ಮಕ್ಕಳು, ಹಿರಿಯರಲ್ಲಿ ಹೆಚ್ಚಾಗಿ ಅಪೌಷ್ಟಿಕತೆ ಕಂಡು ಬರುತ್ತಿದ್ದು, ಇದನ್ನು ಹೋಗಲಾಡಿಸಲು ಪೋಷಾಕಾಂಶಯುಕ್ತ ಆಹಾರ ಸೇವನೆಯಿಂದ ದೂರ ಮಾಡಬಹುದು ಎಂದು ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿ ವಲ್ಲಭಭಟ್ಟ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಮಹಿಳೆಯರು, ಮಕ್ಕಳು, ಹಿರಿಯರಲ್ಲಿ ಹೆಚ್ಚಾಗಿ ಅಪೌಷ್ಟಿಕತೆ ಕಂಡು ಬರುತ್ತಿದ್ದು, ಇದನ್ನು ಹೋಗಲಾಡಿಸಲು ಪೋಷಾಕಾಂಶಯುಕ್ತ ಆಹಾರ ಸೇವನೆಯಿಂದ ದೂರ ಮಾಡಬಹುದು ಎಂದು ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿ ವಲ್ಲಭಭಟ್ಟ ಜೋಶಿ ಹೇಳಿದರು.

ತಾಲೂಕಿನ ದೇವರಗೋನಾಲ ಗ್ರಾಮದ ತರಬೇತಿ ಕೇಂದ್ರದಲ್ಲಿ ಯಾದಗಿರಿ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರಕಾರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಅಪೌಷ್ಟಿಕದ ಅರಿವು ಮೂಡಿಸುವ ತರಬೇತಿಯಲ್ಲಿ ಮಾತನಾಡಿದ ಅವರು, ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಅಪೌಷ್ಟಿಕತೆ ಇರುವವರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದರು.

ಬೈಫ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಪ್ರೇಮಾ ಮಾತನಾಡಿ, ವಿಟಾ ಪೋಷಣ ಉತ್ಪನ್ನಗಳು. ಅದನ್ನು ತಯಾರಿಸುವ ವಿಧಾನ ಮತ್ತು ಉಪಯೋಗಿಸುವ ವಸ್ತುಗಳು, ಹಾಗೂ ಅದರ ಪ್ರಯೋಜನ ಕುರಿತು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಸಂಧ್ಯಾ ಕುಲಕರ್ಣಿ ಅವರು ಮಾತನಾಡಿ, ಮಾರಾಟ ಎಂದರೇನು, ಮಾರುಕಟ್ಟೆ ಸೌಲಭ್ಯಗಳನ್ನು ಯಾವ ರೀತಿ ಒದಗಿಸಿ ಕೊಡಲಾಗುವುದು. ಮಾರಾಟದ ಅರ್ಥ ಹೇಗೆ ಸ್ವ ಸಹಾಯ ಗುಂಪಿನ ಸದಸ್ಯರು ಇದರಲ್ಲಿ ತೊಡಗಿಕಳ್ಳಬೇಕು ಎಂದು ವಿವರಿಸಿದರು.

ದೇವರಗೋನಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಾನಮ್ಮ ಎಚ್. ಮಾಲಿಪಾಟೀಲ್ ಅವರು ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಸದುಪಯೋಗ ಪಡೆಯುವಂತೆ ಸದಸ್ಯರಿಗೆ ಕರೆ ನೀಡಿದರು.

ಸುರಪುರದ ಎನ್‌ಆರ್‌ಎಲ್‌ಎಂ ಅಧಿಕಾರಿ ಸವಿತಾ ಎಸ್. ಪಾಲ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ವಿದ್ಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶರಬಯ್ಯ ಸೋಮಣ್ಣೂರ ಸ್ವಾಗತಿಸಿದರು. ಹಣಮಂತ ಅಂಬಿಗೇರ ನಿರೂಪಿಸಿ ವಂದಿಸಿದರು.

ಎಂ.ಸಿ.ಆರ್.ಪಿಗಳಾದ ಮಾನಮ್ಮ, ಸರಸ್ವತಿ, ಸ್ವ ಸಹಾಯ ಮಹಿಳೆಯರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...