ತರಕಾರಿ ಸೇವನೆಯಿಂದ ರಕ್ತಹೀನತೆ ತಡೆಬಹುದು

KannadaprabhaNewsNetwork | Published : Jan 11, 2024 1:31 AM

ಸಾರಾಂಶ

ಗರ್ಭಾವ್ಯವಸ್ಥೆಯಲ್ಲಿ ಎಚ್.ಐ.ವಿ ಸೋಂಕು ಇರುವುದು ಪತ್ತೆಯಾದರೆ, ತಾಯಿಯಿಂದ ಮಗುವಿಗೆ ಎಚ್.ಐ.ವಿ ಹರಡುವುದನ್ನು ತಡೆಯಬಹುದು

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜೊತೆಗೆ ಪೌಷ್ಟಿಕ ಆಹಾರ ಹಾಗೂ ತರಕಾರಿ ಸೊಪ್ಪುಗಳನ್ನು ನಿತ್ಯ ಹೆಚ್ಚಾಗಿ ಸೇವಿಸಬೇಕು. ಇದರಿಂದ ರಕ್ತ ಹೀನತೆ ತಡೆಯಬಹುದು ಮತ್ತು ಸುರಕ್ಷಿತ ಹೆರಿಗೆಗೆ ಸಹಕಾರಿ ಆಗುತ್ತದೆ ಎಂದು ಚಿಕ್ಕ ಮಕ್ಕಳ ತಜ್ಞ ಡಾ.ಪರಶುರಾಮ ವಡ್ಡರ ಹೇಳಿದರು.ಪಟ್ಟಣದ ತಾಲೂಕ ಆಸ್ಪತ್ರೆ ಮುದ್ದೇಬಿಹಾಳದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ ವಿಜಯಪುರ, ತಾಲೂಕು ಆಸ್ಪತ್ರೆ ಮುದ್ದೇಬಿಹಾಳ ಇವರುಗಳ ಸಹಯೋಗದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಗರ್ಭಿಣಿಯರು ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗರ್ಭಾವ್ಯವಸ್ಥೆಯಲ್ಲಿ ಎಚ್.ಐ.ವಿ ಸೋಂಕು ಇರುವುದು ಪತ್ತೆಯಾದರೆ, ತಾಯಿಯಿಂದ ಮಗುವಿಗೆ ಎಚ್.ಐ.ವಿ ಹರಡುವುದನ್ನು ತಡೆಯಬಹುದು ಎಂದು ತಿಳಿಸಿದರು.ತಾಲೂಕ ಆಸ್ಪತ್ರೆಯ ಎ.ಆರ್‌.ಟಿ ಆಪ್ತ ಸಮಾಲೋಚಕಿ ಮಾತನಾಡಿ, ಗರ್ಭಿಣಿಯರು ತಪ್ಪದೆ ಮೂರು ತಿಂಗಳು ಇರುವಾಗಲೇ ತಪ್ಪದೇ ಎಚ್‌.ಐ.ವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏನಾದರೂ ಸೋಂಕು ತಗುಲಿದರೆ ಮಗುವಿಗೆ ಹರಡುವುದನ್ನು ತಪ್ಪಿಸಲು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು. ಎಚ್.ಐ.ವಿ ಸೋಂಕಿತ ವ್ಯಕ್ತಿ ರಕ್ತ‌ ಪಡೆಯುವುದರಿಂದ, ಅಸುರಕ್ಷಿತ ಲೈಂಗಿಕತೆಯಿಂದ ಎಚ್‌.ಐ.ವಿ ಸೋಂಕು ತಗುಲುತ್ತದೆ. ಗರ್ಭಿಣಿಯಾದ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ನೀಡಿದರೆ ಮಗುವಿಗೆ ಸೋಂಕು ಹರಡದಂತೆ ತಡೆಯಬಹುದು ಎಂದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ಜಾಗೃತರಾಗಿರುವುದರಿಂದ ಈಚೆಗೆ ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ. ಮಹಿಳೆಯರಲ್ಲಿ ಎಚ್ಐವಿ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ತಡೆಗಟ್ಟುವಿಕೆಯು ಬಹಳ ಮುಖ್ಯ. ಸೋಂಕು ಹೇಗೆ ಹರಡುತ್ತದೆ ಎನ್ನುವ ಬಗ್ಗೆ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ತಾಲೂಕ ಆಸ್ಪತ್ರೆಯ ಡಾ. ಮೊಹಮ್ಮದ್ ಆಸ್ಪಾಕ್ಅಹ್ಮದ, ಡಾ.ಹಸನ ಬೀಳಗಿ, ಡಾ. ಆರ್‌.ಎಂ ಇನಾಂದಾರ, ದಂತ ವೈದ್ಯಾಧಿಕಾರಿಗಳು, ಹಿರಿಯ ಶುಶ್ರೂಷಣಾಧಿಕಾರಿ ಬಿ.ಎನ್ ಸಾರವಾಡ, ಎಸ್.ಬಿ ಬೋಸ್ಲೆ, ಎಂ.ಬಿ ಬಾಗವಾನ್, ಎನ್.ಎಸ್ ಹುಂಡೇಕರ್ಲ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಎ.ಎಂ. ಹಾಲ್ಯಾಳ, ವಿ.ವಿ ಪವಾಡಶೆಟ್ಟಿ, ಎಂ.ಎಚ್ ಮಕಾನದಾರ, ವಿಜಯಕುಮಾರ್, ಆಪ್ತ ಸಮಾಲೋಚಕಿ ಚನ್ನಮ್ಮ ಛಲವಾದಿ ಹಳ್ಳಿ, ಏಡ್ಸ್ ಜಾಗೃತಿ ಮಹಿಳಾ ಸಂಘದ ಶ್ರೀಮಂತ ಚೌಹಾಣ, ನವವಸ್ಪೂರ್ತಿ ಸಂಘದ ಚನ್ನಪ್ಪ ಸಕ್ರಿ, ತಾಲೂಕ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಕಾರ್ಯಕ್ರಮದ ನಿರೂಪಣೆ ಐಸಿಟಿಸಿ ಆಪ್ತಸಮಾಲೋಚಕ ಮಲ್ಲನಗೌಡ ದ್ಯಾಪುರ್ ನಿರ್ವಹಿಸಿದರು.

Share this article