ಕಮಲನಗರ: ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಯಾರೂ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಡಾ.ಶಾಲಿವಾನ್ ಉದಗಿರೆ ಹೇಳಿದರು.
ಅಲ್ಲದೇ ಉತ್ತಮ ಸಂಸ್ಕಾರ ಪಡೆದು ಧ್ಯಾನ, ಯೋಗ, ಪೂಜೆ, ಮಾಡಿ ಬದುಕು ಬಂಗಾರವಾಗಿಸಿ ಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡ ಮಾತನಾಡಿ, ಮದ್ಯಪಾನ, ಧೂಮಪಾನದಿಂದ ದೂರವಿರುವ ಮೂಲಕ ಮನೆಯಲ್ಲಿ ಒಳ್ಳೆಯ ವಾತಾವರಣವಿರುವಂತೆ ನೋಡಿಕೊಳ್ಳಬೇಕು.ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪ್ರೀತಿ ವಿಶ್ವಾಸದಿಂದ ಪಾಠ ಮಾಡಿ ಅವರಲ್ಲಿನ ಪ್ರತಿಭೆ ಬೆಳಕಿಗೆ ತರುವಲ್ಲಿ ಶ್ರಮ ವಹಿಸಿ ಅವರಲ್ಲಿ ಅಘಾಧವಾಗಿ ಅಡಗಿರುವ ಪ್ರತಿಭೆ ಬೆಳಕಿಗೆ ತರಬೇಕು. ಪ್ರತಿಯೊಬ್ಬರಿಗೆ ಕೆಟ್ಟ ಚಟಗಳ ಬಗ್ಗೆ ಮಾಹಿತಿ ನೀಡಿ ಅವುಗಳಿಂದ ದೂರ ವಿರುವಂತೆ ತಿಳಿಸಬೇಕೆಂದರು.
ಮುಖ್ಯಗುರು ರಾಜಕುಮಾರ್ ನೀಡೋದೇ, ಅಖಿಲಕರ್ನಾಟಕ ಜನಜಾಗ್ರತಿ ವೇದಿಕೆ ಜಿಲ್ಲಾ ಸದಸ್ಯ ಮಲ್ಲಪ್ಪ ಗೌಡ, ಜ್ಯೋತಿ, ಮಾರುತಿ ದೇವಕತ್ತೆ, ಸಂಗ್ರಾಮ ಪವಾರ, ನಾಗನಾಥ ನಿಟ್ಟೂರೆ, ರಾಮರಾವ್ ಬೈರಾಳೆ, ವಸಂತ್ ಪವಾರ, ಸುನಿಲ್ ಗಾಯಕ ವಾಡ್, ಅಂಕುಶ್ ವಡ್ದೆ, ಭಾಗ್ಯಶ್ರೀ ಇತರರಿದ್ದರು. ವಲಯ ಮೇಲ್ವಿಚಾರಕ ವಿಲಾಸ ಪೂಜಾರಿ ನಿರೂಪಿಸಿ ವಂದಿಸಿದರು.